ಶಿಕ್ಷಕ ವೃತ್ತಿಯಲ್ಲಿ ಸಮಯಪ್ರಜ್ಞೆ ಅತ್ಯಂತ ಅವಶ್ಯ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ದೇವರಹಿಪ್ಪರಗಿ: ಶಿಕ್ಷಕ ವೃತ್ತಿಯಲ್ಲಿ ಸಮಯಪ್ರಜ್ಞೆ, ಶಿಸ್ತು, ಆಸಕ್ತಿದಾಯಕ ಬೋಧನೆ ಅತ್ಯಂತ ಅವಶ್ಯವಾಗಿದ್ದು, ಅದನ್ನು ಸೇವೆಯುದ್ದಕ್ಕೂ ಅನುಸರಿಸಿಕೊಂಡು ಬಂದಿರುವ ತೃಪ್ತಿ ನನಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಂ ಡಿ ಮಳಖೇಡ ತಿಳಿಸಿದರು.
ಸಮೀಪದ ಜಾಲವಾದ ಗ್ರಾಮದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತಿ ಹೊಂದಿ ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಣರಂಗ ಸಾಕಷ್ಟು ಬದಲಾವಣೆ ಗೊಂಡಿದೆ. ನಾವಿನ್ಯತೆ, ಆಧುನಿಕತೆಗೆ ತಕ್ಕಂತೆ ಮಕ್ಕಳ ಮನೋಮಟ್ಟಕ್ಕಿಳಿದು ಕಲಿಕೆ ನಡೆಯಬೇಕು. ಆಗ ಮಾತ್ರ ಯಶಸ್ಸಿನ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸರಕಾರಿ ಉರ್ದು ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ಎಂ ಎಚ್ ಬಗಲಿ, ಉರ್ದು ಪ್ರಾಥಮಿಕ ಶಾಲೆಯ ಮುಖ್ಯಗುರು ಎಸ್ ಎಚ್ ಪಂಜೆವಾಲೆ, ಶ್ರೀಮತಿ ಎಸ್ ಸಿ ತಳವಾರ ಮಾತನಾಡಿ ಎಂ ಡಿ ಮಳಖೇಡ ಗುರುಗಳ ಸೇವೆ ಶ್ಲಾಘನೀಯವಾಗಿದೆ. ಸೇವೆಯಲಿ ್ಲದ್ದಾಗ ಸಮಯ ಪಾಲನೆ, ಮಕ್ಕಳ ಜೊತೆ ಒಡನಾಟ, ಪಾಲಕರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಸ್ಮರಣೀಯವಾಗಿದೆ ಎಂದರು. ವೃತ್ತಿಯಿಂದ ನಿವೃತ್ತಿ ಗೊಂಡ ಮುಖ್ಯೋಪಾಧ್ಯಾಯ ಎಂ ಡಿ ಮಳಖೇಡ ಇವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಬಾಗವಾನ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷರ ಪ್ರತಿನಿಧಿ ಲಕ್ಷö್ಮಣ ಕೆಂಗುಟಗಿ, ಖಾದಿರ ಬೆಕಿನಾಳ, ಖಾದಿರ ಮೊಮೀನ, ಮಹಮ್ಮದ ಇಸಾಕ, ಇಮಾಮಸಾಬ ಭಾವಿಕಟ್ಟಿ, ಎ ಎ ಕರಿಕಬ್ಬಿ, ಲಮಾಣಿ ಸರ್, ಫಹಮೀದಾ ಮನಿಯಾರ, ಎ ಎಂ ಚೌಧರಿ ಸೇರಿದಂತೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.