ರಾಷ್ಟ್ರೀಯ ಪೋಷಣ ಮಾಸಾಚರಣೆಯ ಸಮಾರೋಪ ಸಮಾರಂಭ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಕಲಬುರಗಿ : ೨೦೨೪-೨೫ ನೇ ಸಾಲಿನಲ್ಲಿ ಕಲಬುರಗಿ (ನಗರ)ಶಿಶು ಅಭಿವೃದ್ಧಿ ಯೋಜನೆ, ಖಾನಪೂರ(ಎ), ಮಕ್ತಂಪೂರ(ಎ) ಹಾಗೂ ಶಹಬಜಾರ (ಎ) ವಲಯಗಳ ಇವುಗಳ ಸಹಯೋಗದೊಂದಿಗೆ ಕಲಬುರಗಿಯ ಖಾಜಾ ಕಾಲೋನಿಯ ಬಿಬಿ ರೋಜಾ ಕಾಲೇಜು ಎದುರುಗಡೆಯ ಮಹಾರಾಜಾ ಫಂಕ್ಷನ್ ಹಾಲ್‌ದಲ್ಲಿ ಸೋಮವಾರ ರಾಷ್ಟ್ರೀಯ ಪೋಷಣ ಮಾಸಾಚರಣೆಯ ಸಮಾರೋಪ ಸಮಾರಂಭವು ಜರುಗಿತು.
ರಾಷ್ಟ್ರೀಯ ಪೋಷಣ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ ಅವರು ಮಾತನಾಡಿ, ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಹಾಗೂ ಪೌಷ್ಠಿಕ ಆಹಾರ ಪದಾರ್ಥಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲಬುರಗಿ (ನಗರ) ಯೋಜನೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರ ಮಾತನಾಡಿ, ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗನವಾಗಿ ಸೆಪ್ಟೆಂಬರ್-೨೦೨೪ ರಲ್ಲಿ ಕಲಬುರಗಿ ನಗರ ಯೋಜನಾ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳ ಕುರಿತು ಮಾತನಾಡಿ, ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರವಲ್ಲದೆ ಪ್ರತಿದಿನ ಪೌಷ್ಠಿಕ ಆಹಾರ ಸೇವಿಸುವುದು ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫರಾಜುಲ್ ಇಸ್ಲಾಂ, ಖಾನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೇಣುಕಾ ಕಟ್ಟಿ, ಮಹಾನಗರ ಪಾಲಿಕೆ ವಾರ್ಡ್ ನಂ. ೧೮ರ ಸದಸ್ಯ ಸೈಯದ್ ಅಹ್ಮದ್, ವಾರ್ಡ್ ನಂ. ೧೩ರ ಸದಸ್ಯ ಅಜರ ಬಾಗಬಾನ್, ವಾರ್ಡ್ ನಂ. ೨೦ರ ಸದಸ್ಯ ಖುಸ್ರೋ ಜಾಗೀರದಾರ್, ರಾಷ್ಟ್ರೀಯ ಪೋಷಣ ಅಭಿಯಾನ ಯೋಜನೆಯ ತಾಲೂಕಾ ಸಂಯೋಜಕ ವಿಶ್ವೇಶ್ವರಯ್ಯ ಬಿ.ಎ. ಹಾಗೂ ಯೋಜನೆಯ ಎಲ್ಲಾ ಹಿರಿಯ ಹಾಗೂ ವಲಯ ಮೇಲ್ವಿಚಾರಕಿಯರು, ವಲಯದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಫಲಾನುಭವಿಗಳಾದ ಮಕ್ಕಳು ಮತ್ತು ತಾಯಂದಿರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಪೋಷಣ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಮಕ್ಕಳಿಗೆ ಅನ್ನ ಪ್ರಾಶನ, ಆರೋಗ್ಯವಂತ ಮಗುವಿನ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.