ಭಾರತೀಯ ಸಾಂಸ್ಕೃತಿಕ ಹಿರಿಮೆಗೆ ಕರುನಾಡಿನ ಕೊಡುಗೆ ಅಪಾರ: ಸಂಗಮೇಶ ಉಪಾಸೆ

Feb 3, 2025 - 22:48
 0
ಭಾರತೀಯ ಸಾಂಸ್ಕೃತಿಕ ಹಿರಿಮೆಗೆ ಕರುನಾಡಿನ ಕೊಡುಗೆ ಅಪಾರ: ಸಂಗಮೇಶ ಉಪಾಸೆ
ಬೆಂಗಳೂರು: ಕರ್ನಾಟಕ ಸಾಹಿತ್ಯ, ಸಂಗೀತದ ನೆಲೆ ಬಿಡು, ವಿವಿಧ ಕಲೆಗಳ ಐಕ್ಯತೆಯ ಗೂಡು ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ.ಸಂಗಮೇಶ ಉಪಾಸೆ ಹೇಳಿದರು.
     ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ, ಸಂಘ ಹಾಗೂ ಗೀತಾ ಸಂಗೀತ ಅಕಾಡೆಮಿ ಟ್ರಸ್ಟ್, ಬೆಂಗಳೂರು ಇವರ ಸಹಯೋಗದಲ್ಲಿ ಜರುಗಿದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ-2025 ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಇವರು ಭಾರತದ ಸಾಂಸ್ಕೃತಿಕ ಹಿರಿಮೆಗೆ ಕನ್ನಡದ ಕೊಡುಗೆ ಅಪಾರ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಜಾನಪದ ಕಲಾವಿದೆ ಶಿಕ್ಷಕಿ ಡಾ.ಶಶಿಕಲಾ ಎ.ಆರ್ ಮಾತನಾಡಿ ನಮ್ಮ ಪೂರ್ವಿಕರು ಕಟ್ಟಿಕೊಟ್ಟ ಜಾನಪದ ಸಂಸ್ಕೃತಿ ಇಂದು ಅಳಿವಿನ ಅಂಚಿನಲ್ಲಿದೆ, ಇದರ ಉಳಿವಿಗಾಗಿ ನಾವುಗಳು ಮಕ್ಕಳಿಗೆ ಜಾನಪದದ ಮಹತ್ವ ಹಾಗೂ ಜಾನಪದ ಮೈಗೂಡಿಸಿಕೊಳ್ಳುವ ಕುರಿತು ಶ್ರಮಿಸಬೇಕಿದೆ ಎಂದರು.
ಆರಕ್ಷಕರಾದ ಕಾಕೋಳ ಶೈಲೇಶ, ಮೌಲಾಲಿ ಆಲಗೂರ ಮಾತನಾಡಿ  ಕಳೆದ ಎಂಟು ವರ್ಷಗಳಿಂದ ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ, ರಾಷ್ಟ್ರ, ರಾಜ್ಯ, ಜಿಲ್ಲಾವಾರು ಹಾಗೂ ಗಡಿನಾಡು ಪ್ರದೇಶದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನೇಕ ಉದೊನ್ಮುಖ ಕವಿಗಳನ್ನು, ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಮತ್ತು ಅಭಿನಂದನಾರ್ಹ ಎಂದರು. ಇನ್ನೂ ಸಂಸ್ಥೆಯ ರಮೇಶ ಕಮತಗಿ ಪ್ರಾಸ್ತಾವಿಕ ಮಾತನಾಡಿದರು.
       ಇದೇ ವೇಳೆ ಎಂ.ವಿ ಷಡಕ್ಷರಿ ಇವರ ಅವತರಿಸು ಬಾ ತಾಯೇ ಭಾವಗೀತೆ ಬಿಡುಗಡೆ ಮಾಡಲಾಯಿತು.
ವೇದಿಕೆಯ ಮೇಲೆ ಸಮಾಜ ಸೇವಕಿ ಸ್ತ್ರೀ ಶಕ್ತಿ ಸಂಘದ ಡಾ.ಭಾಗ್ಯಶ್ರೀ ಸರವನ, ಸಂಗೀತ ನಿರ್ದೇಶಕ ರಾಜು ಎಮ್ಮಿಗನೂರ, ಶಿಕ್ಷಕ ಸಂಗಮೇಶ ಕಲಬುರಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ದಕ್ಕೂ ವಿವಿಧ ಜಿಲ್ಲೆಗಳಿಂದ ಬಂದ ಕಲಾವಿದರ ಯಕ್ಷಗಾನ, ಕೋಲಾಟ, ಪುರವಂತ, ಜನಪ ನೃತ್ಯ, ಗಾಯನ, ಜರುಗಿದವು. ಇನ್ನೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಮೇಘಮೈತ್ರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.