ಇಂದಿನಿ0ದ ಮಾಧವಾನಂದ ಪ್ರಭುಜಿಯವರ ಸಪ್ತಾಹ

ಶಿವಾಪೂರ(ಹ): ಗ್ರಾಮದಲ್ಲಿ ಇಂದಿನಿAದ ಎರಡು ದಿನಗಳ ಕಾಲ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ ಇಂಚಗೇರಿ ಮಠದ ಸದ್ಗುರುಗಳು ಹಾಗೂ ಸ್ವಾತಂತ್ರ ಸೇನಾನಿ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರ ,ಗುರುಪುತ್ರೆಸ್ವರ ಮಹಾರಾಜರ, ಹಾಗೂ ಜಗನ್ನಾಥ ಮಹಾರಾಜರ ಸ್ಮರಣಾರ್ಥ ಸಪ್ತಾಹದ ಅಂಗವಾಗಿ ಜ.೨೨ ರಿಂದ ೨೩ ರವರೆಗೆ ಅಧ್ಯಾತ್ಮ ಸಪ್ತಾಹ ಜರುಗಲಿದೆ.
ಜ.೨೨ ರಂದು ಸಾಯಂಕಾಲ ೫ಕ್ಕೆ ದಿಂಡಿ ಪಲ್ಲಕ್ಕಿ ಉತ್ಸವ ಹಾಗೂ ಪಾದಯಾತ್ರಿಕರನ್ನು ಅದ್ದೂರಿಯಾಗಿ ಬರಮಾಡಿ ಕೊಳ್ಳಲಾಗುವುದು, ನಂತರ ಇಂಚಗೇರಿ ಮಠದ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋಧ ಹಾಗೂ ವೀಣಾ ಪೂಜೆಯೊಂದಿಗೆ ಸಪ್ತಾಹ ಪ್ರಾರಂಭವಾಗಿ ರಾತ್ರಿ ಜಾಗರಣಾ ನಿಮಿತ್ತವಾಗಿ ವಿವಿಧ ಭಜನಾ ಮಂಡಳಿಯವರಿAದ ಭಜನಾ ಪದಗಳು ಜರುಗುವವು, ಜ ೨೩ ರ ಬೆಳಿಗ್ಗೆ ಶ್ರೀ ಮಾಧವಾನಂದ ಪ್ರಭುಜಿಯವರ ಗದ್ದುಗೆಗೆ ವಿಶೇಷ ಪೂಜೆ,ಸಂತ ಮಹಾತ್ಮರರಿಂದ ಪ್ರವಚನ ಹಾಗೂ ಶ್ರೀ ಸ.ಸ ರೇವಣಸಿದ್ದೇಶ್ವರ ಮಹಾರಾಜರಿಂದ ಆಶೀರ್ವಚನ ಮತ್ತು ಪುಷ್ಪವೃಷ್ಟಿ, ಮಹಾ ಪ್ರಸಾದದೊಂದಿಗೆ ಸಪ್ತಾಹ ಮಂಗಲಗೊಳ್ಳುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಬಾವಿ ಕ್ಷೇತ್ರದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಅತಿಥಿಗಳಾಗಿ ಆರ್ ಎಚ್ ರೆಡ್ಡಿ ಶರಣರು, ಶಂಕರಪ್ಪ ಮಹಾರಾಜರು, ರಾಮಣ್ಣ ಮಹಾರಾಜರು, ತಮ್ಮನೇಪ್ಪ ಮಹಾರಾಜರು, ಸೇರಿದಂತೆ ಗ್ರಾಮದ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು,¸ ÀÄತ್ತಮುತ್ತಲಿನ ಗ್ರಾಮದ ಇಂಚಗೇರಿ ಮಠದ ಭಕ್ತಾದಿಗಳು ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.