ವ್ಯಾಯಾಮಕ್ಕೆ ಸಮಯವಿಲ್ಲವೇ..?

Sep 29, 2024 - 21:54
 0
ವ್ಯಾಯಾಮಕ್ಕೆ ಸಮಯವಿಲ್ಲವೇ..?

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಲೇಖಕ : ವಿಶ್ವಾಸ್. ಡಿ ಗೌಡ  
ಸಕಲೇಶಪುರ - ೯೭೪೩೬೩೬೮೩೧


ದಿನ ಬೆಳಗಾದರೆ ಖಾಲಿ ಹೊಟ್ಟೆಯಲ್ಲಿ ತಿಂಡಿ, ಅಡುಗೆ ಮಾಡಿ ಎಲ್ಲರ ತಿಂಡಿ, ಮಕ್ಕಳ ಹೊದಿಕೆ,  ಸ್ವಚ್ಛತೆಯ ಕೆಲಸ ಮಾಡಿ ಆಫೀಸಿಗೆ ಹೊರಡುವ ಧಾವಂತ. ಮತ್ತೆ ಆಫೀಸ್ ಬಿಟ್ಟ ಮೇಲೆ ಅಡುಗೆ ಮಾಡಲೇಬೇಕು ಅಂತ ಮನೆ ತಲುಪುವ ತರಾತುರಿ. ಈ ಎಲ್ಲ ಧಾವಂತದಲ್ಲಿ ಮಹಿಳೆಯರಿಗೆ ತಮ್ಮತ್ತ ಗಮನ ಹರಿಸಲು ಸಮಯವಿಲ್ಲ. ಮನೆಯಲ್ಲಿರುವ ಎಲ್ಲರನ್ನೂ ನೋಡಿಕೊಳ್ಳುವಾಗ ತಮ್ಮನ್ನೇ ತಾವು ನಿರ್ಲಕ್ಷಿಸುತ್ತಾರೆ. ಸಾಮಾನ್ಯವಾಗಿ ಅವರಿಗೆ ನೆಮ್ಮದಿಯಿಂದ ಕುಳಿತು ಊಟ ಮಾಡಲು ಕೂಡ ಸಮಯ ಇರುವುದಿಲ್ಲ. ಆದ್ದರಿಂದ, ವ್ಯಾಯಾಮಕ್ಕೆ ಸಮಯ ಸಿಗುವುದೇ ಇಲ್ಲ.            
ಇದು ಉದ್ಯೋಗಸ್ಥ ಮಹಿಳೆ ಯರ ಪಾಡಾದರೆ ಪುರುಷರ ಪಾಡು ಇದಕ್ಕಿಂತ ಭಿನ್ನವೇನಿಲ್ಲ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನೌಕರಸ್ಥ ಪುರುಷರ ಜೀವನ ತುಂಬಾ ಧಾವಂತವಾಗಿರುತ್ತದೆ ಕಚೇರಿ ಮತ್ತು ಮನೆಯ ಮಧ್ಯೆ ಹೋರಾಟದಲ್ಲಿಯೇ ಅನೇಕ ಗಂಟೆಗಳ ಸಮಯ ವ್ಯರ್ಥವಾಗುತ್ತದೆ.                 
ಕುಟುಂಬದ ಅಗತ್ಯಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸಬೇಕಾದ ಒತ್ತಡದಲ್ಲಿ ಹೆಚ್ಚಿನ ಮಧ್ಯಮ ವರ್ಗದ ಜನರಿಗೆ ಹೆಚ್ಚುವರಿ ಸಮಯ ಕಚೇರಿ ಕೆಲಸವು ಸಾಮಾನ್ಯವಾಗಿರುತ್ತದೆ. ಇದರಿಂದ ಸ್ವಂತ ಅಗತ್ಯಗಳು ಮತ್ತು ಆರೋಗ್ಯದತ್ತ ಯಜಮಾನ ಕೊಡಲು ಬಿಡುವೆ ಇರುವುದಿಲ್ಲ.    ಆಧುನಿಕ ಮನೆಗೆಲಸ ಅಥವಾ ಕಚೇರಿ ಕೆಲಸ ವ್ಯಾಯಾಮವಲ್ಲ. ದಿನವಿಡೀ ಕುಳಿತು ಕೆಲಸ ಮಾಡಿದರೂ ದೇಹ ಅಷ್ಟಾಗಿ ಚಲಿಸುವುದಿಲ್ಲ.                 ಈ ಕಾರಣದಿಂದಾಗಿ, ಜೀರ್ಣಕಾರಿ ಸಮಸ್ಯೆಗಳು, ಬೊಜ್ಜು, ಕೀಲು ನೋವು, ಕಾಲಾನಂತರದಲ್ಲಿ ಉದ್ಭವಿಸಲು ಪ್ರಾರಂಭಿಸುತ್ತವೆ. ಇತ್ತೀಚಿನ ದಿನಗಳಲ್ಲಿ, ಈ ಎಲ್ಲಾ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲಿಯೇ ಆಗುವುದರಿಂದ, ನಾವು ನಮ್ಮ ಕೈಯಿಂದಲೇ ಅನಾರೋಗ್ಯವನ್ನು ಬೆನ್ನಟ್ಟುತ್ತಿದ್ದೇವೆ ಎಂದು ತೋರುತ್ತದೆ. ದೇಹವು ಸರಾಗವಾಗಿ ಕಾರ್ಯನಿರ್ವಹಿಸಬೇಕೆಂದರೆ, ದೇಹಕ್ಕೆ ಕನಿಷ್ಠ ವ್ಯಾಯಾಮದ ಅಗತ್ಯವಿದೆ. ಇದಕ್ಕಾಗಿ ದಿನಚರಿಯಲ್ಲಿ ಸುಲಭವಾಗಿ ಮಾಡಬಹುದಾದ ಕೆಲಸಗಳು ಯಾವುವು ಎಂಬುದನ್ನು ನೋಡೋಣ.                

ಸೂರ್ಯ ನಮಸ್ಕಾರ : ನೀವು ಬೆಳಿಗ್ಗೆ ಎದ್ದು ಮುಖ ತೊಳೆದು ಹೊಟ್ಟೆಯನ್ನು ತೆರವುಗೊಳಿಸಿದ ನಂತರ ೧೨ ಸೂರ್ಯ ನಮಸ್ಕಾರಗಳನ್ನು ಮಾಡಿ. ಇದು ಇಡೀ ದೇಹವನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ೧೨ ಸೂರ್ಯ ನಮಸ್ಕಾರಗಳನ್ನು ಮಾಡಲು ಸುಮಾರು ೧೨ ರಿಂದ ೧೫ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ, ಬೇರೆ ಕೆಲಸಗಳಂತೆ ಇದಕ್ಕೂ ೧೦ ನಿಮಿಷ ನೀವು ಬಿಡುವು ಮಾಡಿಕೊಳ್ಳಬೇಕು. ಇದು ಖಂಡಿತವಾಗಿಯೂ ದಿನವಿಡೀ ನಿಮಗೆ ತಾಜಾತನವನ್ನು ನೀಡುತ್ತದೆ.    

            
ಮೆಟ್ಟಿಲು ಏರಿಳಿ ತಗಳು : ನೀವು ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರೆ, ನೀವು ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಬಳಸಬೇಕು. ಕಛೇರಿಯಲ್ಲಿಯೂ ಲಿಫ್ಟ್ ಬದಲು ಮೆಟ್ಟಿಲುಗಳ ಮೂಲಕ ಹತ್ತಿ ಇಳಿಯಬೇಕು. ಇದರಿಂದ ಪ್ರತಿದಿನ ಸ್ವಲ್ಪವಾದರೂ ದೇಹಕ್ಕೆ ವ್ಯಾಯಾಮದ ಪೂರೈಕೆಯಾಗುತ್ತದೆ. ದಿನಕ್ಕೆ ಕನಿಷ್ಠ ೩ ರಿಂದ ೪ ಬಾರಿ  ಕನಿಷ್ಠ ೩೦ ಮೆಟ್ಟಿಲುಗಳನ್ನು ಹತ್ತುವುದು ಬೆಳೆಯುವುದು ಉತ್ತಮ ಸಹಿಷ್ಣುತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ.

                        
ನಡಿಗೆ : ದಿನವಿಡೀ ಕಚೇರಿ ಕೆಲಸ ಮತ್ತೆ ಸಂಜೆ ಅಡುಗೆ, ಮನೆಗೆಲಸ ಮಾಡಿ ಮರುದಿನದ ತಯಾರಿಯಲ್ಲಿ ಸುಸ್ತಾಗುತ್ತದೆ. ಹಾಗಾಗಿ ಕೆಲವೊಮ್ಮೆ ಊಟ ಮಾಡಿ ಮಲಗಿದರೆ ಸಾಕಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ, ಬೇಸರವನ್ನು ನಿವಾರಿಸಲು ನಾವು ಟಿವಿ ನೋಡುವುದನ್ನು ಅಥವಾ ಪರಸ್ಪರ ಚಾಟ್ ಮಾಡುವುದನ್ನು ಆಶ್ರಯಿಸುತ್ತೇವೆ.         
ಆ ಸಮಯದಲ್ಲಿ ನಾವು ಮನೆಯ ಸುತ್ತಮುತ್ತ ೧೫ ನಿಮಿಷ ನಡೆದಾಡಿದರೆ ದಿನದ ಒತ್ತಡ ದೂರವಾಗುತ್ತದೆ.  ಅಲ್ಲದೆ ಆಹಾರ ಜೀರ್ಣವಾಗಲು ಕೂಡ ಸಹಾಯವಾಗುತ್ತದೆ. ದೇಹದ ಚಲನೆಯು ಆಳವಾದ ನಿದ್ರೆಯನ್ನು ಪಡೆಯಲು ಸಹ ಸಹಾಯ ಮಾಡುತ್ತದೆ.     ಕಚೇರಿಯ ಹಾಗೂ ಮನೆಗಳ ಮಧ್ಯೆ ಪ್ರಯಾಣಿಸುವಾಗ ತಪ್ಪದೆ ಒಂದು ಕಿಲೋಮೀಟರ್ ಆದರೂ ನಡೆಯುವ ಅಭ್ಯಾಸ ಮಾಡಿಕೊಳ್ಳಿ. ಕಚೇರಿಯು ಮನೆಯಿಂದ ಹತ್ತಿರವಿದ್ದರೆ ವಾಹನಗಳನ್ನು ಬಳಸಲೇಬೇಡಿ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.