ಖಾಕಿ ಪಡೆಯ ಭರ್ಜರಿ ಕಾರ್ಯಾಚರಣೆ : ಹತ್ತು ನಾಡ ಪಿಸ್ತೂಲ್‌ಗಳ ವಶ : ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ

Feb 18, 2025 - 13:25
 0
ಖಾಕಿ ಪಡೆಯ ಭರ್ಜರಿ ಕಾರ್ಯಾಚರಣೆ  : ಹತ್ತು ನಾಡ ಪಿಸ್ತೂಲ್‌ಗಳ ವಶ : ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ

ವಿಜಯಪುರ : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ  ಅಕ್ರಮವಾಗಿ ಪಿಸ್ತೂಲ್‌ಗಳನ್ನು ಪಡೆದವರ ಮೇಲೆ ದಾಳಿ ಮಾಡಿ ಒಟ್ಟು 10 ಕಂಟ್ರಿ ಪಿಸ್ತೂಲ್‌ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಮಾಹಿತಿ ನೀಡಿದ್ದಾರೆ.

ಮಂಗಳವಾರ ಜಿಲ್ಲಾ ಪೊಲೀಸ್ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೇರಿ ಎಲ್‌ಟಿ ನಂ: 1 ರ ನಿವಾಸಿ ರಮೇಶ ಗೇಮು ಲಮಾಣಿ ಈತನ ಮಗಳನ್ನು ಈ ಹಿಂದೆ ಅದೇ ಗ್ರಾಮದ ನಿವಾಸಿ ಸತೀಶ ಪ್ರೇಮಸಿಂಗ ರಾಠೋಡ ಈತನಿಗೆ ಮದುವೆ ಮಾಡಿ ಕೊಡಲು ಕೇಳಿದ್ದು, ಅದಕ್ಕೆ ರಮೇಶ ಲಮಾಣಿ ಈತನು ಒಪ್ಪದ ಕಾರಣ ಆತನ ಮಗಳು ಭಾವಿಗೆ ಹಾರಿ ಮರಣ ಹೊಂದಿದ್ದು, ಅವಳ ಸಾವಿಗೆ ಸತೀಶನೇ ಕಾರಣ ಎಂದು ಸಿಟ್ಟಾಗಿ ದಿನಾಂಕ: 28.01.2025 ರಂದು ಬೆಳಗ್ಗೆ 10.30 ಗಂಟೆಯ ಸುಮಾರಿಗೆ ರಮೇಶ ಗೇಮು ಲಮಾಣಿ ಹಾಗೂ ಇತರರು ಸೇರಿ, ಸತೀಶ ಪ್ರೇಮಸಿಂಗ ರಾಠೋಡ ಈತನ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ . 

ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 6 ಜನ ಆರೋಪಿತರನ್ನು ವಿಚಾರಣೆ ಮಾಡಿ,  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ 5ನೇ ಆರೋಪಿತನಾದ ಹಂಚನಾಳ ಎಲ್‌ಟಿ ನಂ: 1 ಗ್ರಾಮದ ಸಾಗರ  ಸುರೇಶ ರಾಠೋಡ,  ಈತನು ಕೊಲೆ ಪ್ರಕರಣದ ಪ್ರಮುಖ ಆರೋಪಿ ರಮೇಶ ಗೇಮು ಲಮಾಣಿ ಈತನಿಗೆ ಕೊಲೆ ಮಾಡಲು ಅಕ್ರಮ ಪಿಸ್ತೂಲ್‌ನ್ನು ಪೂರೈಸಿದ್ದನು. 

ಈತನನ್ನು ದಿನಾಂಕ: 13.02.2025 ರಂದು ಬಂಧಿಸಿದ್ದು, ವಿಚಾರಣೆ ಕಾಲಕ್ಕೆ ಆತನು ವಿಜಯಪುರ ಜಿಲ್ಲೆಯ ಹಲವಾರು ಜನರಿಗೆ ಅಕ್ರಮ ಪಿಸ್ತೂಲ್‌ಗಳನ್ನು ಪೂರೈಸಿರುವುದಾಗಿ ಮಾಹಿತಿ ನೀಡಿದ್ದು,  ಮಾಹಿತಿಯನ್ನು ಆಧರಿಸಿ, ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈತನಿಂದ ಅಕ್ರಮವಾಗಿ ಪಿಸ್ತೂಲ್‌ಗಳನ್ನು ಪಡೆದವರ ಮೇಲೆ ದಾಳಿ ಮಾಡಿ.  ಒಟ್ಟು 10 ಕಂಟ್ರಿ ಪಿಸ್ತೂಲ್‌ಗಳು ಹಾಗೂ 24 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕಂಟ್ರಿ ಪಿಸ್ತೂಲ್ ಪಡೆದವರು : 
ಹಂಚಿನಾಳ ತಾಂಡಾದ ಪ್ರಕಾಶ ಮರ್ಕಿ ರಾಠೋಡ, ಇವರಿಂದ  ಪಿಸ್ತೂಲ್ : 01, ಸಜೀವ ಗುಂಡು: 03 ವಿಜಯಪುರ ಗ್ರಾಮೀಣ ಠಾಣೆ. ವಿಜಯಪುರ ಜಿಲ್ಲೆಯ ಅರಕೇರಿ ಕರಾಡ ದೊಡ್ಡಿಯ ಅಶೋಕ ಪರಮು ಪಾಂಡ್ರೆ,  ಇವರಿಂದ 01 ಪಿಸ್ತೂಲ್ : , 02 ಸಜೀವ ಗುಂಡು  ವಿಜಯಪುರ ಗ್ರಾಮೀಣ ಠಾಣೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ತುಳಜಾಪುರ ತಾಲೂಕಿನ ಕಡಕಿ ಗ್ರಾಮದ ಸುಜಿತ ಸುಭಾಸ ರಾಠೋಡ,   ಇವರಿಂದ  01 ಪಿಸ್ತೂಲ್, 01 ಸಜೀವ ಗುಂಡು ವಿಜಯಪುರ ಗ್ರಾಮೀಣ ಠಾಣೆ. ವಿಜಯಪುರ ಸಾಯಿ ಪಾರ್ಕ ನಿವಾಸಿ ಸುಖದೇವ ಅಲಿಯಾಸ್ ಸುಖಿ ನರಸು ರಾಠೋಡ ಇವರಿಂದ 01 ಪಿಸ್ತೂಲ್, 05 ಸಜೀವ ಗುಂಡು, 05 ಜಲನಗರ ಪೊಲೀಸ್ ಠಾಣೆ. ಸಿಂದಗಿ ತಾಲ್ಲೂಕಿನ ನಾಗಾವಿ ತಾಂಡಾದ ಪ್ರಕಾಶ ಭೀಮಸಿಂಗ್ ರಾಠೋಡ,  ಇವರಿಂದ 01 ಪಿಸ್ತೂಲ್, 01 ಜೀವಂತ ಗುಂಡು, ಸಿಂದಗಿ ಪೊಲೀಸ್ ಠಾಣೆ. ಬಸವನಬಾಗೇವಾಡಿಯ ಗಣೇಶ ಶಿವರಾಮ ಶೆಟ್ಟಿ, ಇವರಿಂದ 01 ಪಿಸ್ತೂಲ್, 04 ಸಜೀವ ಗುಂಡು, ಬಸವನ ಬಾಗೇವಾಡಿ ಪೊಲೀಸ್ ಠಾಣೆ. ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿಯ ಚನ್ನಪ್ಪಾ ಮಲ್ಲಪ್ಪ ನಾಗನೂರ,  ಹಾಲಿ: ವಿಜಯಪುರ ಇವರಿಂದ 01 ಪಿಸ್ತೂಲ್ , 04 ಸಜೀವ ಗುಂಡು , ಆದರ್ಶನಗರ ಪೊಲೀಸ್ ಠಾಣೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಲೋಹಗಾಂವ ಗ್ರಾಮದ ಸಂತೋಷ ಕಿಶನ್ ರಾಠೋಡ,   ಇವರಿಂದ 01 ಪಿಸ್ತೂಲ್ , 04 ಸಜೀವ ಗುಂಡು , ತಿಕೋಟಾ ಪೊಲೀಸ್ ಠಾಣೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಐತವಾಡೆ ಗ್ರಾಮದ ಜನಾರ್ಧನ ವಸಂತ ಪವಾರ ಇವರಿಂದ 01 ಪಿಸ್ತೂಲ್  ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ.  ವಿಜಯಪುರ ಜಿಲ್ಲೆಯ ಹಂಚನಾಳ ಎಲ್‌ಟಿ ನಂ: 1 ನಿವಾಸಿ ಸಾಗರ ಸುರೇಶ ರಾಠೋಡ,  ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 40/2025 ರಲ್ಲಿ ಈಗಾಗಲೇ ಒಂದು ಪಿಸ್ತೂಲ್ ಜಪ್ತ ಪಡಿಸಿಕೊಳ್ಳಲಾಗಿದೆ ಹೀಗೆ ಒಟ್ಟು ಪಿಸ್ತೂಲ್‌ಗಳು : 10 ಹಾಗೂ ಸಜೀವ ಗುಂಡುಗಳು : 24 ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಮಾಹಿತಿ ನೀಡಿದ್ದಾರೆ.

ಖಾಕಿ ಪಡೆಯ ಭರ್ಜರಿ ಕಾರ್ಯಾಚರಣೆ: 
ಈ ಪ್ರಕರಣದ ಬೆನ್ನಟ್ಟಿದ ಜಿಲ್ಲಾ ಖಾಕಿ ಪಡೆ ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬಿ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ  ಮಾರ್ಗದರ್ಶನದಲ್ಲಿ, ಕರ್ತವ್ಯ ನಿರ್ವಹಿಸಿದ ಡಿಎಸ್‌ಪಿಗಳಾದ  ಗಿರಿಮಲ್ಲ ತಳಕಟ್ಟಿ,  ಬಸವರಾಜ ಯಲಿಗಾರ, ಜಗದೀಶ ಎಚ್. ಎಸ್.  ಬಲ್ಲಪ್ಪ ನಂದಗಾವಿ, ಪಿಐ/ಸಿಪಿಐ ರವರುಗಳಾದ ರಾಯಗೊಂಡ ಜಾನರ, ಮಲ್ಲಯ್ಯ ಮಠಪತಿ,  ನಾನಾಗೌಡ ಪಾಟೀಲ,  ಗುರುಶಾಂತ ದಾಶ್ಯಾಳ, ಪರಶುರಾಮ ಮನಗೂಳಿ ಹಾಗೂ ಪಿಎಸ್‌ಐಗಳಾದ ವಿನೋದ ದೊಡಮನಿ,  ಎನ್.ಎ.ಉಪ್ಪಾರ,  ಶ್ರೀಕಾಂತ ಕಾಂಬಳೆ, ಆರೀಫ್ ಮುಶಾಪುರಿ, ದೇವರಾಜ ಉಳ್ಳಾಗಡ್ಡಿ, ಸೀತಾರಾಮ ಲಮಾಣಿ, ಬಿ.ಎಮ್. ಸಂಗಾಪುರ, ಎಮ್ ಡಿ ಘೋರಿ,  ಬಿ.ಎ.ತಿಪ್ಪರೆಡ್ಡಿ ಹಾಗೂ ಸಿಬ್ಬಂದಿಗಳಾದ ಎಮ್ ಎನ್ ಮುಜಾವರ, ಬಿ ವಿ ಪವಾರ, ಎಚ್ ಡಿ ಗೊಳಸಂಗಿ, ಎಲ್ ಎಸ್ ಹಿರೇಗೌಡರ, ಎ.ಎ.ಪಟ್ಟಣಶೆಟ್ಟಿ, ಆಯ್.ವಾಯ್. ದಳವಾಯಿ, ಎ.ಎಸ್.ಬಿರಾದಾರ, ಆರ್.ಪಿ.ಗಡೆದ, ಎಸ್.ಎಚ್.ನಾಯಕ, ಎಸ್.ಬಿ.ರಾಠೋಡ, ಕೆ.ಎಸ್.ಬಿರಾದಾರ, ಎಸ್.ಪಿ.ಲಮಾಣಿ ರವರುಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಶ್ಲಾಘಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.