ಕೊಲೆ ಯತ್ನ: ಆರೋಪಿಗೆ 12 ವರ್ಷ ಶಿಕ್ಷೆ : ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಶ್ಲಾಘನೆ

Jan 7, 2025 - 23:33
 0
ಕೊಲೆ ಯತ್ನ: ಆರೋಪಿಗೆ 12 ವರ್ಷ ಶಿಕ್ಷೆ : ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಶ್ಲಾಘನೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಲಕ್ಷ್ಮಣ ಬಿ ನಿಂಬರಗಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ನಗರದ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಆಪಾದನೆ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ನ್ಯಾಯಾಲಯ ೧೨ ವರ್ಷ ಶಿಕ್ಷೆ ಹಾಗೂ ೬೮ ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.            

ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು , ಗಾಂಧಿಚೌಕ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: ೨೪೫/೨೦೨೧ ಕಲಂ: ೩೨೪, ೩೨೬, ೩೦೭, ೩೫೪ ಐಪಿಸಿ ಪ್ರಕರಣ ದಾಖಲಾಗಿದ್ದು, ಅಂದಿನ ಪಿಎಸ್‌ಐ ಆರೀಫ್ ಮುಶಾಪೂರಿ ಅವರು ಸದರಿ ಪ್ರಕರಣದ ತನಿಖೆ ಕೈಗೊಂಡು ಇದರಲ್ಲಿ ಆರೋಪಿತನಾದ ವಿಜಯಪುರ ನಗರದ ಖಾಜಾ ನಗರದ ನಿವಾಸಿ ಮಹಮ್ಮದ ಇಬ್ರಾಹಿಮ್ ಉಕ್ಕಲಿ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.         

ಪ್ರಕರಣವನ್ನು ಪೂರ್ಣ ತನಿಖೆ ಮಾಡಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಣೆ ಸಲ್ಲಿಸಿದ್ದರು. ವಿಜಯಪುರದ ೪ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾದ ವಿರೇಶ ಮಹಾಮನಿ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.                 

ಜ.೬ ರಂದು ಪ್ರಕರಣದ ಆರೋಪಿ ಮಹಮ್ಮದ ಇಬ್ರಾಹಿಮ್ ಉಕ್ಕಲಿ ಈತನಿಗೆ ಮಾನ್ಯ ನ್ಯಾಯಾಲಯವು ಒಟ್ಟು ೧೨ ವರ್ಷ ಶಿಕ್ಷೆ ಮತ್ತು ೬೮,೦೦೦/- ರೂಪಾಯಿಗಳ ದಂಡವನ್ನು ವಿಧಿಸಿದ್ದು, ದಂಡ ಭರಿಸದೇ ಇದ್ದಲ್ಲಿ ಹೆಚ್ಚುವರಿಯಾಗಿ ೩ ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪ್ರಕರಣದ ತನಿಖಾಧಿಯಾರಿಯಾಗಿದ್ದ ಪಿಎಸ್‌ಐ ಆರೀಫ್ ಮುಶಾಪೂರಿ , ಸಿಪಿಸಿ ಬಸವರಾಜ ದಿನ್ನಿ ಹಾಗೂ ಗಾಂಧಿಚೌಕ ಠಾಣೆಯ ಸಿಬ್ಬಂದಿಗಳ ಕಾರ್ಯವನ್ನು ಎಸ್ಪಿ  ಲಕ್ಷ್ಮಣ  ಬಿ ನಿಂಬರಗಿ ಅವರು ಶ್ಲಾಘಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.