ಸಿದ್ಧರಾಮೇಶ್ವರರ ಕಾಯಕ, ದಾಸೋಹ ಅಲ್ಲಮರ ಸ್ವರೂಪಿ

Jan 22, 2025 - 08:03
 0
ಸಿದ್ಧರಾಮೇಶ್ವರರ ಕಾಯಕ, ದಾಸೋಹ ಅಲ್ಲಮರ ಸ್ವರೂಪಿ

ವಿಜಯಪುರ : ಬಸವಾದಿ ಶರಣರು ತಮ್ಮ ಆತ್ಮೀಕ ಲೋಕದಿಂದ ಹುಡುಕಿ ತೆಗೆದ ತತ್ವಗಳೇ ವಚನಗಳು. ಸತ್ಯ, ಶುದ್ಧ, ಕಾಯಕದಿಂದ ನೆಮ್ಮದಿ, ಸಂತೃಪ್ತಿ ನೀಡುವುದು ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲವೂ ಇದೆ. ಅದರಲ್ಲಿ ಕಾಯಕ, ದಾಸೋಹ ಮಾದರಿಯಾಗಬೇಕೆಂದು ಸಾಹಿತಿ ಡಾ. ರೇಖಾ ಬ. ಪಾಟೀಲ ಹೇಳಿದರು.                

ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದವರು ಏರ್ಪಡಿಸಿದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶ್ರೀ ಸಿದ್ಧರಾಮೇಶ್ವರರ ಅನುಭಾವ ಕುರಿತು ಮಾತನಾಡುತ್ತ ಅನುಭಾವಿಗಳೆಂದರೆ ಕನಸು ಕಾಣುವ ಶಿಶುವಿನಂತೆ ಸತ್ಯ, ನೀತಿ, ಯೋಗವನ್ನು ಸಾಧಿಸುವುದು. ಅನುಭಾವ ಸಮುದ್ರದಂತೆ ಜನಹಿತಕ್ಕಾಗಿ ಸುಗ್ಗವ್ಯಯ ೫ ತಿಂಗಳ ಮಡಿಲಲ್ಲಿ ಜನಿಸಿದ ಸಿದ್ಧರಾಮೇಶ್ವರರು ಬಾಲ್ಯದಿಂದಲೂ ಶಿವಭಕ್ತನಾಗಿ ಪರಿಶುದ್ಧ ಮನಸ್ಸಿನಿಂದ ಶಿವನ ಆರಾಧನೆ ಮಾಡುತ್ತ ಧ್ಯಾನದಲ್ಲಿ ಲೀನನಾಗಿ ಶಿವನನ್ನು ಒಲಿಸಿಕೊಂಡವರು ಎಂದರು.        

ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಶಿವಯೋಗಿ ಸಿದ್ಧರಾಮೇಶ್ವರಲ್ಲಿ ನಮಗೆ ಅತ್ಯಂತ ಪೂಜ್ಯ ಸ್ಥಾನವಿದೆ. ಭಕ್ತರು, ಭಕ್ತಿಯಿಂದ ತನು-ಮನ ಪೂಜ್ಯ ಭಾವದಿಂದ ಶ್ರದ್ಧೆಯಿಂದ ಸ್ಮರಣೆ ಮಾಡಬೇಕು. ಶಿವನ ಸ್ವರೂಪವೇ ಗುರು. ನಾವು ಲಿಂಗ ಪೂಜೆಯಮೂಲಕ ಶಿವನನ್ನು ಕಾಣಬಹುದು ಎಂದರು.                    

ಅತಿಥಿ ಶಿವಲೀಲಾ ಮಠಪತಿ ಮಾತನಾಡಿದರು.  ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತು ಬೆಂಗಳೂರು ಇವರು ಪ್ರತಿ ವರ್ಷ ಕೊಡಮಾಡುವ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿಗೆ ಭಾಜನರಾದ ಸಾಹಿತಿ ಜಂಬುನಾಥ ಕಂಚ್ಯಾಣಿ ಅವರನ್ನು ಮಹಾಸಭಾ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.                 

ಶರಣೆ ಅಕ್ಕಮಹಾದೇವಿ ಬುರ್ಲಿ, ಅಪ್ಪಾಸಾಹೇಬ ಕೋರಿ, ಸಹದೇವ ನಾಡಗೌಡರ, ಶಾರದಾ ಕೊಪ್ಪ (ಐಹೊಳ್ಳಿ) ಬ್ಯಾಕೋಡ ದಂಪತಿ, ಸೋಮಶೇಖರ ವಾಲಿ, ಎಂ.ಎA. ಅವರಾದಿ, ರಾಜೇಂದ್ರ ಕೌಜಲಗಿ, ಮಲ್ಲಿಕಾರ್ಜುನ ಅಮರಣ್ಣವರ, ಎಸ್.ಎಂ. ಶಿವಣಗಿ, ಬಿ.ಟಿ. ಈಶ್ವರಗೊಂಡ, ಕಾಶಿನಾಥ ಅಣೆಪ್ಪನವರ, ಜಗದೀಶ ಮೋಟಗಿ, ಶರಣಗೌಡ ಪಾಟೀಲ, ಗುರುಪಾದಪ್ಪ ಅಂಬಲಿ, ಕೆ.ಎಸ್. ಬಿರಾದಾರ, ಅಂಗಡಿ, ಆರ್.ಎಸ್. ಪಟ್ಟಣಶೆಟ್ಟಿ, ಶಿರಹಟ್ಟಿ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.             

ಕಾರ್ಯಕ್ರಮ ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು.  ನಿರ್ದೇಶಕ ವಿಠ್ಠಲ ತೇಲಿ ವಂದಿಸಿದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.