ವಿಜಯಪುರ : ಎಲ್ಲರನ್ನು ಪ್ರೀತಿಯಿಂದ ಸೌಹಾರ್ದತೆಯಿಂದ ಕಂಡಾಗ ನಮಗೆ ಭಗವಂತ ಕಾಣುತ್ತಾರೆ. ಅಲ್ಲಾ ಬೇರೆಯಲ್ಲ ಪರಮಾತ್ಮ ಬೇರೆಯಲ್ಲ ಎಲ್ಲರೂ ಒಂದೇ.. ನಾವೆಲ್ಲರೂ ಸೌಹಾರ್ದತೆಯ ಬದುಕಿ ಬಾಳಬೇಕಾಗಿದೆ. ನಮ್ಮ ನಾಡು ಸೌಹಾರ್ದತೆಯ ಬೀಡಾಗಿದೆ. ಇಂತಹ ಸಂಸ್ಕೃತಿಯನ್ನು ಸೂಫಿ ಸಂತರು ಬಸವಾದಿ ಶಿವಶರಣ ನೀಡಿದ್ದಾರೆ ಎಂದು ಧಾರವಾಡ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದಲ್ಲಿ ಸುವಿಧಾ ಸಾಮಾಜಿಕ ಸೇವಾ ಸಂಸ್ಥೆವತಿಯಿAದ ಹಮ್ಮಿಕೊಂಡ ಸರ್ವಧರ್ಮ ಇಪ್ತಿಯಾರ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸೂಫಿ ಸಂತರ ನಾಡಿನಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಾಗಿ ಸೌಹಾರ್ದಯುತವಾಗಿ ಬಾಳುತ್ತಾ ಬಂದಿದ್ದೇವೆ. ಸಮಾಜದಲ್ಲಿ ಮಾದರಿಯಾಗಿ ಒಗ್ಗೂಡಿ ಬದುಕಬೇಕಾಗಿದೆ. ರಂಜಾನ ಇದು ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾಗಿದೆ. ಈ ರಂಜಾನ ದಿನಗಳಲ್ಲಿ ಉಪವಾಸ ಮಾಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದರಂತೆ ಈ ಪವಿತ್ರ ಮಾಸದಲ್ಲಿ ಮಕ್ಕಳಿಗೆ ಧರ್ಮ ಗ್ರಂಥ ಓದಲು, ಪುಸ್ತಕ ಓದುವ ಸಂಸ್ಕೃತಿಯತ್ತ ಬೆಳೆಸಬೇಕಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯಶ್ರೀ ವೀರುಪಾಕ್ಷ ದೇವರು ಯರನಾಳ, ಮನಗೂಳಿಯ ದರ್ಗಾದ ಪೀಠಾಧಿಪತಿಗಳಾದ ಡಾ. ಸೈಯ್ಯದ ಫೈರಜ್ ಹುಸೇನ ಸಾಹೇಬ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರೀಫ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಂ.ಸಿ.ಮುಲ್ಲಾ, ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ, ಕಾಂಗ್ರೆಸ್ ಮುಖಂಡ ಮಹ್ಮದ ರಫೀಕ ಟಪಾಲ, ಗಂಗಾಧರ ಸಂಬಣ್ಣಿ, ಅಬ್ದುಲ ರಜಾಕ ಹೊರ್ತಿ, ಆಝಾದ ಪಟೇಲ, ಶಂಕರಗೌಡ ಹಿರೇಗೌಡರ, ರಾಜು ಕಂಭಾಗಿ, ನಾಗರಾಜ ಲಂಬು, ಸಿ.ಎಸ್.ನಿಂಬಾಳ, ಮೋಯಿನ ಕಲಾದಗಿ, ಪೀರಪಟೇಲ ಪಟೇಲ, ಶಕೀಲ ಬಾಗಮಾರೆ, ವಿಜಯಕುಮಾರ ಘಾಟಗೆ, ಮಹಾದೇವ ರಾವಜಿ, ಮದಸ್ಸರ ಖತೀಬ, ಶಬ್ಬೀರ ಪಿತಲಿ, ರೈಸ ಇಂಡಿ, ಅಶ್ಫಾಕ ಮನಗೂಳಿ, ಶಖೀಲ ಗಢೇದ, ಬಂದೇನವಾಜ ಮುಲ್ಲಾ, ಸೋಮಶೇಖರ ಕುರ್ಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಫಯಾಜ ಕಲಾದಗಿ ಸ್ವಾಗತಿಸಿದರು. ದಸ್ತಗೀರ ಸಾಲೋಟಗಿ ನಿರೂಪಿಸಿ ವಂದಿಸಿದರು.