ವಿಜಯಪುರ: ಶಿಕ್ಷಕ ಸಮುದಾಯದ ಕಳಶಪ್ರಾಯವಾಗಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಅವಶ ಶ್ರಮದಾನ ಸಾರ್ಥಕವಾಗಿದ್ದು, ಆಧುನಿಕ ಸಮಾದಲ್ಲಿ ಮಹಿಳೆ ಸಬಲೆಯಾಗಿದ್ದಾಳೆ ಎಂದು ಡಿವೈಎಸ್‌ಪಿ ಬಸವರಾಜ ಯಲಿಗಾರ ಹೇಳಿದರು.
ಶುಕ್ರವಾರ ನಗರದ ಕಂದಗಲ್ ಹನಮಂತರಾಯ ರಂಗಮAದಿರದಲ್ಲಿ ಸಾವಿತ್ರಿಬಾಯಿ ಫುಲೆ ಸಂಘ ಹಾಗೂ ಅಮ್ಮ ಫೌಂಡೇಶನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಮಾತೆ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮ ಸಮಾಜಕ್ಕಾಗಿ ಸಾವಿತ್ರಿಬಾಯಿ ಫುಲೆಯವರು ಪ್ರತಿಯೊಬ್ಬ ಮಹಿಳೆ ಶಿಕ್ಷಣವಂತರಾಗಲು ಪಣ ತೊಟ್ಟು ಸಮಾಜಮುಖಿ ಕಾರ್ಯ ನಿರ್ವಹಿಸಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಅವರ ತತ್ವಾದರ್ಶಗಳು ನಮಗೆಲ್ಲರಿಗೂ ಮಾದರಿಯಾಗಿವೆ ಎಂದರು.
ಮಾತೆ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಹಾಗೂ ಸಾಧಕರಿಗೆ ಸನ್ಮಾನ ಮಾಡಿದ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಸಮಾಜ ಪರಿವರ್ತನೆಗೆ ಶಿಕ್ಷಕ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ ಶ್ರೇಷ್ಠ ವ್ಯಕ್ತಿಗಳೆಲ್ಲ ಶಿಕ್ಷಕರ ಗರಡಿಯಲ್ಲಿಯೇ ಬೆಳೆದು ಪ್ರಸಿದ್ಧರಾಗಿರುತ್ತಾರೆ. ಉತ್ಕೃಷ್ಟ ಸಮಾಜ ನಿರ್ಮಾಣದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡು ಸಮೃದ್ಧ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕೆಂದು ಶಿಕ್ಷಕರಿಗೆ ಮನವಿ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ಸಿಕ್ಯಾಬ ಮಹಿಳಾ ಕಾಲೇಜಿನ ಉಪನ್ಯಾಸಕ ಯು ಎನ್ ಕುಂಟೋಜಿ, ಅಕ್ಷರದ ಅವ್ವ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಮನಕುಲದ ಉದ್ಧಾರಕ್ಕಾಗಿ ಇಡೀ ಜೀವನವನ್ನೇ ಪಣಕ್ಕಿಟ್ಟು ಶ್ರಮಿಸಿದ್ದಾರೆ. ನೀವೆಲ್ಲ ಅಕ್ಷರದ ಅವ್ವನ ಪರಿಧಿಯಲ್ಲಿ ಕಾರ್ಯ ನಿರ್ವಹಿಸಿ ಸಮಾಜಮುಖಿ ಬದುಕು ಸಾಗಿಸಬೇಕೆಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷೆ ಎ ಬಿ ನಾಯಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ನಡೆದು ಬಂದ ದಾರಿ ಹಾಗೂ ಸಂಘಟನೆ ಕುರಿತು ಮಾತನಾಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಜಯಶ್ರೀ ಬೆಣ್ಣಿ ಯುವ ಪರಿಷತ್ ಜಿಲ್ಲಾಧ್ಯಕ್ಷ ಶರಣು ಸಬರದ, ಶಿಕ್ಷಕ ಕಬೂಲ್ ಕೊಕಟನೂರ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲೆಯ ಎಲ್ಲ ತಾಲೂಕಿಗಳಿಂದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜ್ಞಾನಯೋಗಾಶ್ರಮದ ಅದ್ವೆöÊತಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಜಿಓಸಿಸಿ ನಿರ್ದೇಶಕಿ ಪುಷ್ಪಾ ಗಚ್ಚಿನಮಠ, ಡಿಡಿಪಿಐ ತಸ್ಲೀಮ ಕೋಲಾರ, ಜೆ ಕೆ ಹೂಗಾರ, ಆರಿಫಾ ಮಿರ್ಜಾ, ವಿಜಯಕುಮಾರ ದೊಡಮನಿ, ಅನಿತಾ ದೆಗಿನಾಳ, ಪಿ ಜಿ ಹಿರೇಮಠ, ಕೆ ಸುನಂದಾ, ಕೆ ಎಚ್ ಹೂಗಾರ, ಬಿರಾದಾರ, ಎಸ್ ಕೆ ಕವಿಶೆಟ್ಟಿ, ಸುವರ್ಣಾ ತೋಟದ, ಮಹಾದೇವಿ ವಾಲಿ, ಶೈಲಶ್ರೀ ಯಡ್ರಾಮಿ, ಅರ್ಪಿತಾ ಪತ್ತಾರ, ಗಿರಿಜಾ ಸಜ್ಜನ ಸೇರಿದಂತೆ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು, ಸಾವಿರಾರು ಶಿಕ್ಷಕರು ಪಾಲ್ಗೊಂAಡಿದ್ದರು.