ಸಾಹಿತ್ಯಕ್ಕೆ ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ಇದೆ : ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

Feb 3, 2025 - 21:37
Feb 3, 2025 - 21:43
 0
ಸಾಹಿತ್ಯಕ್ಕೆ ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ಇದೆ : ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

ವಿಜಯಪುರ: ಸಾಹಿತಿಗಳು ತಮ್ಮ ಬರವಣಿಗೆಯ ಮೂಲಕ ಭಾವನೆಗಳ ಬೀಜವನ್ನು ಬಿತ್ತಬೇಕು ಮುಂದೆ ಅದು  ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಆಶ್ರಯವಾಗುತ್ತದೆ ಸಾಹಿತ್ಯಕ್ಕೆ ಸಮಾಜದ  ಅಂಕುಡೊಂಕು ತಿದ್ದುವ ಶಕ್ತಿ ಇದೆ. ಕನ್ನಡ ಸಾಹಿತ್ಯ ಹೃದಯ ಶ್ರೀಮಂತಿಕ್ಕೆ ಉಳ್ಳ ಸಾಹಿತ್ಯವಾಗಿದೆ. ನಿರಂತರವಾಗಿ ನಾವು ಕನ್ನಡವನ್ನು ಪೋಷಿಸಬೇಕು, ಸಂಸ್ಕೃತದ ಭಾಷೆಯಂತೆ ನಶಿಸಿ ಹೋಗಲು ಬಿಡಬಾರದು ಸಾಹಿತ್ಯ ಕೃಷಿ ನಿರಂತರವಾಗಿ ನಡೆಯಬೇಕು ಬದುಕನ್ನು ಕಟ್ಟಿ ಕೊಡುವ ಕನ್ನಡ ಅನ್ನದ ಭಾಷೆ ಆಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.        

ರವಿವಾರ ನಗರದ ಚೇತನಾ ಕಾಲೇಜಿನ ಅವರನದಲ್ಲಿ ನಡೆದ ಕಪ್ಪತ್ತಗಿರಿ ಸಾಹಿತ್ಯ ವೇದಿಕೆಯ ವಾರ್ಷಿಕೋತ್ಸವ, ಅಪ್ಪ ಸಾಹಿತ್ಯ ವೇದಿಕೆಯ ಉದ್ಘಾಟನೆ ಸಮಾರಂಭ ಹಾಗೂ ‘ಎದ್ಯಾಗಿನ ಬ್ಯಾನಿ’ ಕೃತಿ ಲೋಕಾರ್ಪಣೆ  ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.        

ಕೃತಿ ಪರಿಚಯಿಸಿದ ಧಾರವಾಡದ ಸಾಹಿತಿ ವೈ ಎಂ ಭಜಂತ್ರಿ ಅವರು ಮಾತನಾಡಿ 'ಎದ್ಯಾಗಿನ ಬ್ಯಾನಿ', ಕೃತಿಗಾರನ ನೋವು ನಲಿವುಗಳ ಅನುಭವಗಳ ಶ್ರೇಷ್ಠ ಕೃತಿಯಾಗಿದೆ. ವಿಶೇಷವಾಗಿ ವಿಜಯಪುರದ ಪ್ರಾದೇಶಿಕ ಭಾಷೆಯನ್ನು ಜೀವಂತವಾಗಿ ಉಳಿಸುವಂತಹ ಕೆಲಸವನ್ನು ಕೃತಿಕಾರರು ಮಾಡಿದ್ದಾರೆ ಈ ಕೃತಿಯು, ದೇವನೂರು ಮಹಾದೇವ, ಡಾ, ಸಿದ್ದಲಿಂಗಯ್ಯ ಕೃತಿಗಳ ಸಾಲಿಗೆ ಸೇರುವ ಹೊಸತನದ ಕೃತಿಯಾಗಿದೆ ಎಂದು ಹೇಳಿದರು.        

ಅಪ್ಪ ಸಾಹಿತ್ಯ ಅಧ್ಯಕ್ಷೆ ಶ್ರೀಮತಿ ಸುಜ್ಞಾನಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.             

ಕಪತ್ತಗಿರಿ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಮತಿ ಚಂದ್ರಕಲಾ ಇಟಗಿಮಠ ಮಾತನಾಡಿದರು. ನ್ಯಾಯವಾದಿ ಸಾಹಿತಿ ಮಲ್ಲಿಕಾರ್ಜುನ್ ಬೃಂಗಿಮಠ ಅಶಯ ನುಡಿಗಳನ್ನು ವ್ಯಕ್ತಪಡಿಸಿದರು.                

ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ರಾಜಶ್ರೀ ಜುಗತಿ ಅವರು ಮಾತನಾಡಿದರು.                

ಲೇಖಕ ಗಣಪತಿ. ಗೋ. ಚಲವಾದಿ ಮಾತನಾಡಿದರು. ಸಮಾರಂಭದ ಸರ್ವಾಧ್ಯಕ್ಷ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಮೈಸೂರಿನ ಡಾ. ಕುಶಾಲ ಬರಗೂರು ಮಾತನಾಡಿ ಆತ್ಮ ಎಂಬುದೇ ಇಲ್ಲ ಮನಸ್ಸು ಇದೆ. ಮೂಡನಂಬಿಕೆ, ಸುಳ್ಳು, ವಿಜ್ಞಾನ, ಸತ್ಯ, ಸಾಹಿತ್ಯ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ.  ಸಾಹಿತಿಗಳು ವಾಸ್ತವದ ನೆಲೆಗಟ್ಟಿನ ಹಿನ್ನೆಲೆಯಲ್ಲಿ ವಿಮರ್ಶಾತ್ಮಕ ಚರ್ಚೆ ಮಾಡಬೇಕೆಂದು ಹೇಳಿದರು.        

೩೦ ಕ್ಕು ಹೆಚ್ಚು ಸಾಧಕರಿಗೆ ಕರುನಾಡು ಕಿರೀಟ ಪ್ರಶಸ್ತಿ ಪ್ರದಾನ ಮಾಡಲಾಯಿತು.             

ಸಾಹಿತಿ ಪ್ರೊ. ಎ. ಎಚ್. ಕೊಳಮಲಿ, ನಿಂಗನಗೌಡ ಪಾಟೀಲ, ಪ್ರಕಾಶ ಜಹಾಗಿರದಾರ, ಪ್ರಕಾಶ ಉಮರ್ಜಿ, ನಾಗಮ್ಮ ಉಮರ್ಜಿ, ಹೇಮಾ ಪಾಟೀಲ ಸೇರಿದಂತೆ ಮುಂತಾದವರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.