ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ ಬುಕ್ ವಿತರಣೆ

ತಾಳಿಕೋಟಿ : ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು,ಉನ್ನತ ಸ್ಥಾನದಲ್ಲಿ ಬೆಳೆದು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಸಮಾಜ ಸೇವಕ ಗೈಬುಸಾಬ ಅರಬ ಹೇಳಿದರು.
ಸರಕಾರಿ ಉರ್ದು ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆಯ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ,ಪೆನ್ನು , ಹಾಗೂ ಪೆನ್ಸಿಲ್ ವಿತರಿಸಿ ಅವರು ಮಾತನಾಡಿದರು.
ಮಕ್ಕಳು ಉನ್ನತ ಸ್ಥಾನದಲ್ಲಿರಬೇಕು ಎಂಬುವುದು ತಂದೆ-ತಾಯಿಯ ಕನಸು, ಮಕ್ಕಳು ಆ ಕನಸನ್ನು ನನಸು ಮಾಡಬೇಕು. ಪೋಷಕರು ಸಹ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡೆ-ತಡೆಯಾಗದಂತೆ ಸಹಕಾರ ನೀಡಬೇಕು, ಎಂದು ಹೇಳಿದರು ,
ಈ ವೇಳೆ ಮೆಹಬೂಬ ಅರಬ ಅವರು ಮಾತನಾಡಿ, ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ, ಮಕ್ಕಳು ಆದಷ್ಟೂ ವ್ಯಾಂಸಗಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹುಸೇನ್ ಭಾಷಾ ಉಣ್ಣಿಬಾವಿ , ಬಶೀರ್ ಅಹ್ಮದ್ ಹಂಡೆಬಾಗ, ಶಫೀಕ್ ಇನಾಮ್ದಾರ್, ಕಾಶಿಮ್ ಅಲಿ ಮನ್ಸೂರ್, ಆಸಿಫ ನಮಾಜಕಟ್ಟಿ, ಮೆಹಬೂಬ ಲಾಹೋರಿ, ಕರೀಮ ಅವಟಿ , ಹಾಗೂ ಮುಖ್ಯ ಗುರುಗಳಾದ ಎ ಎಂ ನಗಾರ್ಚಿ , ಎಲ್ಲಾ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು .