ಜ್ಞಾನಕ್ಕೆ ಜಗತ್ತನ್ನೇ ಆಳುವ ಶಕ್ತಿ ಇದೆ : ಕೊಳಮಲಿ

ತಾಂಬಾ : ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆಯಿಂದ ಓದಿದರೆ ಜಗತ್ತನ್ನೇ ಗೆಲ್ಲುತ್ತಾರೆ. ಜ್ಞಾನಕ್ಕೆ ಜಗತ್ತನ್ನೇ ಆಳುವ ಶಕ್ತಿ ಇದೆ ಎಂದು ಸಾಹಿತಿ, ಜಾನಪದ ವಿದ್ವಾಂಸ ಪ್ರೊ, ಎ. ಎಚ್ ಕೊಳಮಲಿ ಹೇಳಿದರು.
ಅವರು ತಾಂಬಾ ಸಮೀಪದ ಹಿಟ್ಟನಹಳ್ಳಿ ತಾಂಡಾದ ಶ್ರೀ ಜಗದಂಬಾ ಶಿಕ್ಷಣ ಸಂಸ್ಥೆಯ ಜಗದಂಬಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ೭ನೆಯ ಮತ್ತು ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದ ಅವರು ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಮಾನವೀಯತೆ ಮತ್ತು ಮೌಲ್ಯವನ್ನ ಮರೆಯುತ್ತಿದ್ದಾರೆ. ವಿಶ್ವಕ್ಕೆ ಮಾದರಿಯಾದ ನಮ್ಮ ದೇಶದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಇಂದಿನ ಮಕ್ಕಳು ಒಳ್ಳೆಯ ಸಂಸ್ಕಾರವನ್ನು ಹೊಂದಬೇಕೆAದು ಹೇಳಿದರು. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.
ಸಂಸ್ಥೆಯ ಕಾರ್ಯದರ್ಶಿ ಯುವ ಧುರೀಣ ರವಿಕುಮಾರ ಚವ್ಹಾಣ ಮಾತನಾಡಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮಹತ್ತರವಾದ ಉದ್ದೇಶವನ್ನು ಇಟ್ಟುಕೊಂಡು ಸ್ಥಾಪನೆಯಾದ ನಮ್ಮ ಶಿಕ್ಷಣ ಸಂಸ್ಥೆ ನಿರಂತರ ಗುಣಮಟ್ಟದ ಶಿಕ್ಷಣವನ್ನು ನೀಡಿ ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ ಎಂದರು.
ಸAಸ್ಥೆಯ ಅಧ್ಯಕ್ಷ ಜಿ. ಬಿ. ಅಂಗಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶ್ರೇಷ್ಠವಾದ ಗುರಿ ಸಾಧಿಸುವ ಛಲ ಇರಬೇಕೆಂದು ಹೇಳಿದರು. ಉಪಾಧ್ಯಕ್ಷರಾದ ಶ್ರೀಮತಿ ಕೆ. ಕೆ. ದೊಡಮನಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ವಿನಯತೆಯನ್ನು ಬೆಳೆಸಿಕೊಂಡರೆ ವಿದ್ಯೆ ಒಲಿಯುತ್ತದೆ ಎಂದು ಹೇಳಿದರು.
ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಪ್ರಕಾಶ ಅಂಗಡಿ, ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ನಾಗರಾಜ,ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ ಹೆಚ್ ಜಂಗಮಶೇಟ್ಟಿ ಮಾತನಾಡಿದರು.
ಬಿ. ಎಫ್. ತಳವಾರ, ಎ ಎಸ್ ಪಾಟೀಲ, ಸಂತೋಷ ಅಂಗಡಿ, ಸತೀಶ್ ದೊಡಮನಿ, ಎಸ್. ಸಿ. ಚವ್ಹಾಣ, ಪಂಡಿತ ಅಂಗಡಿ, ಎಂ. ಬಿ. ಲಮಾಣಿ, ಅಶೋಕ ಜಳಕಿ, ಸತೀಶ್ ಗೌರ, ಅಜಿತ ರಾಠೋಡ, ಶ್ರೀಮತಿ, ಎಸ್. ಬಿ. ನಾಯಿಕ, ಶ್ರೀಮತಿ ಭಾರತಿ ವ್ಹಿ ಬಗಲಿ, ಶ್ರೀಮತಿ ಎಂ. ಸಿ. ನಾಯಿಕ ಉಪಸ್ಥಿತರಿದ್ದರು ಶಿಕ್ಷಕಿ ಶ್ರೀಮತಿ ಡಿ. ಆರ್. ರಾಠೋಡ, ನಿರೂಪಿಸಿದರು. ಶಿಕ್ಷಕ ಶಂಕರ ಮಸಳಿ ವಂದಿಸಿದರು.