ಸಾಹಿತಿಗೆ ಸಾವಿದೆ ಸಾಹಿತ್ಯಕ್ಕಿಲ್ಲ : ಶಂಕರ ಬೈಚಬಾಳ

Feb 4, 2025 - 23:27
 0
ಸಾಹಿತಿಗೆ ಸಾವಿದೆ ಸಾಹಿತ್ಯಕ್ಕಿಲ್ಲ : ಶಂಕರ ಬೈಚಬಾಳ
ವಿಜಯಪುರ : ಸಾಹಿತಿಗೆ ಸಾವಿದೆ ಸಾಹಿತ್ಯಕ್ಕಿಲ್ಲ ಎಂದಿಗೂ ಸೋರಗದೆ ಇರುವ ಸಾಹಿತ್ಯ ರಚನೆಯಾಗಬೇಕು. ಸಾವಿರ ಕವನ ಬರೆಯುವ ಬದಲು ಕೇಳುಗರ ಮನ ಸೇರುವ ಕೆಲವೆ ಕವನಗಳು ಸಾಹಿತಿಯ ವಿದ್ವತ್ವವನ್ನು ಜಗತ್ತಿಗೆ ಪರಿಚಯಿಸುತ್ತವೆ. ಗಟ್ಟಿತನದ ಸಾಹಿತ್ಯವನ್ನು ಬರೆಯಬೇಕು ಎಂದು ಹಿರಿಯ ಸಾಹಿತಿ ಶಂಕರ ಬೈಚಬಾಳ ಹೇಳಿದರು.
ಮಂಗಳವಾರ ಅವರು ಅಪ್ಪ ಸಾಹಿತ್ಯ ವೇದಿಕೆ ವತಿಯಿಂದ ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಪ್ಪ ಕಾವ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಶಯ ನುಡಿಗಳನ್ನಾಡಿದ ಸಾಹಿತಿ ಪ್ರೊ. ಎ. ಎಚ್. ಕೊಳಮಲಿ ಮಾತನಾಡಿ ಸಾಹಿತಿಗಳು ಸ್ವಾಭಿಮಾನಿಗಳಾಗಿರಬೇಕು. ಯಾವ ಮತ ಧರ್ಮ ಸಿದ್ಧಾಂತದ ಬಲೆ ಒಳಗೆ ಇರಬಾರದು ಸಮಾನತೆಯ ಸಂದೇಶ ಸಾರುವ ಸಾಹಿತಿಗಳು ಹೆಚ್ಚಾಗಬೇಕೆಂದು ಹೇಳಿದರು.
ಕಾವ್ಯೋತ್ಸವ ಅಧ್ಯಕ್ಷ್ಯ ಸ್ಥಾನವನ್ನು ವಹಿಸಿದ ಹುಬ್ಬಳಿಯ ಹಿರಿಯ ಪತ್ರಕರ್ತ ರಾಜೇಂದ್ರ ಪಾಟೀಲ ಮಾತನಾಡಿ ನಾಡಿನ ೩೦ ಕ್ಕೂ ಹೆಚ್ಚು ಕವಿಗಳು ತಮ್ಮ ಕವನದ ಮೂಲಕ ಅಪ್ಪನ ವ್ಯಕ್ತಿತ್ವವನ್ನು ಕೊಂಡಾಡಿದ್ದು ಇದೊಂದು ವಿಶೇಷ ಮಾದರಿಯ ಕಾವ್ಯೋತ್ಸವ ಅಪ್ಪ ಕುಟುಂಬದ ಅಲದ ಮರ ಎಂದು ಹೇಳಿದರು.
ಕಾವ್ಯೋತ್ಸವದ ಸರ್ವಾಧ್ಯಕ್ಷ ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಡಾ. ಕುಶಾಲ ಬರಗೂರು ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ವಿಜ್ಞಾನದ ಅಡಿಪಾಯದ ಹಿನ್ನೆಲೆಯಲ್ಲಿ ರಚನೆಗೊಳ್ಳುವ ಸಾಹಿತ್ಯಕ್ಕೆ ಹೆಚ್ಚಿನ ಮೌಲ್ಯವಿದೆಯೆಂದು ಹೇಳಿದರು.
ಅಪ್ಪ ಸಾಹಿತ್ಯ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಸುಜ್ಞಾನಿ ಪಾಟೀಲ ಕಾರ್ಯದರ್ಶಿ ನಿಂಗನಗೌಡ ಪಾಟೀಲ, ಸಾಹಿತಿ ಸಿದ್ರಾಮ. ಬಿರಾದಾರ ಎ. ಎನ್. ಗೂಜಗೊಂಡ ಮನಗೂಳಿ, ಬಸವರಾಜ ಉಮರ್ಜಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.