ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಧರಣಿ

Jan 31, 2025 - 18:26
 0
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಧರಣಿ

ವಿಜಯಪುರ : ಭಾರತೀಯ ಕಿಸಾನ್ ಸಂಘದ ವತಿಯಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ರೈತರ ಶೋಭಾ ಯಾತ್ರೆ ಹೊರಟು ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಬಸವೇಶ್ವರ ಚೌಕ ಮಾರ್ಗವಾಗಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ವಿಜಯಪುರ ಜಿಲ್ಲೆಯ ಸಮಗ್ರ ನೀರಾವರಿಗಾಗಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರ ಧರಣಿ ನಡೆಸಿದರು.
                             
ಈ ವೇಳೆ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ್ ರಾಜ್ಯ ಅಧ್ಯಕ್ಷ ಭಿಮಸೇನ ಕೋರಿಕೆ ಮಾತನಾಡಿ ಆಲಮಟ್ಟಿ ೫೨೪.೨೫೬ ಮೀಟರ್ಗೆಗೆ ಎತ್ತರಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿ ಕೃಷ್ಣಾ ಕೊಳ್ಳದ ೩ನೇ ಹಂತದ ಎಲ್ಲ ನೀರಾವರಿ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಿ ಭೂಮಿಗೆ ನೀರು ಹರಿಸುವುದು. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ೧ನೇ ಹಂತದಲ್ಲಿ ೨೮೦೦೦ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು, ಕಾರ್ಯ ಕುಂಠಿತವಾಗುತ್ತಿದೆ ಹಾಗೂ ಇನ್ನುಳಿದ ಚಡಚಣ ತಾಲೂಕಾ, ಬಬಲೇಶ್ವರ ತಾಲೂಕಾ ಹಾಗೂ ವಿಜಯಪುರ ತಾಲೂಕಿನ ೨೧೦೦೦ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗೆ ಟೆಂಡರ್ ಕರೆದು ಸಮರೋಪಾದಿಯಲ್ಲಿ ಕಾರ್ಯ ಪೂರ್ಣಗೊಳಿಸಬೇಕು ಎಂದರು.                        

ರಾಜ್ಯ ಕಾರ್ಯಕಾರಣಿ ಗುರುನಾಥ ಬಗಲಿ ಮಾತನಾಡಿ ಹೊರ್ತಿ ಭಾಗದ ೧೯ ಕೆರೆಗಳಿಗೆ ನೀರು ತುಂಬಲು ಕ್ರಮ ಕೈಕೊಂಡು ಭೇಗನೆ ಉದ್ಘಾಟಿಸಿ ಎಲ್ಲ ೧೯ ಕೆರೆಗಳಿಗೆ ನೀರು ಹರಿಸಬೇಕು ಹಾಗೂ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಹಳ್ಳಕೆರೆಗೆ ನೀರು ಹರಿಸುವುದು ವಿಜಯಪುರ ಜಿಲ್ಲೆಯ ಡೋಣಿ ನದಿಯ ಹೂಳೆತ್ತಿ ಜಲಾನಯನ ಕಾರ್ಯಕ್ರಮಗಳನ್ನು ಕೈಗೊಂಡು ಬದು ಚೆಕ್ ಡ್ಯಾಂ ನಾಲಾ ಬಂಡಿAಗ್ ಹಾಕಿ ನದಿ ಪಾತ್ರದ ಎರಡೂ ಬದಿ ಒಡ್ಡನ್ನು ಹಾಕಿ ಆರಣೀಕರಣ ಗಿಡಗಳನ್ನು ನೆಡುವುದು ಆಗಬೇಕು ಮತ್ತು ಡೋಣಿ ನದಿಗೆ ಕೃಷ್ಣಯ ನೀರನ್ನು ಹರಿಸಬೇಕು ಎಂದರು.                

ಈ ಸಂದರ್ಭದಲ್ಲಿ ಉತ್ತರ ಪ್ರಾಂತ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ರವೀಂದ್ರ ಮೇಡೆಗಾರ, ಮಹಾಂತೇಶ ಬಾಗೇವಾಡಿ, ದಾನಮ  ಪಾಟೀಲ, ಗೀತಾ ಚವಾಣ, ಈರಪ್ಪ ಗೋಟ್ಯಾಳ, ವಿಠಲ ಏಳಗಿ, ಅಶೋಕ ಜಾಧವ, ಬಸಪ್ಪ ಚೌಧರಿ, ಎಂ ಆರ್ ಮುಲ್ಲಾ, ಭೀಮಾಶಂಕರ ಹಿಪ್ಪರಗಿ, ಎರಡಪ್ಪ ತಾರಾಪೂರ, ಭೀಮರಾಯ ಬುಕ್ಕಾಣಿ ಸೇರಿದಂತೆ ಮತ್ತಿತರರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.