ಜ.12 ಕ್ಕೆ ವನಶ್ರೀ ಜಯದೇವ ಜಗದ್ಗುರುಗಳ 8 ನೇ ಪುಣ್ಯಸ್ಮರಣೆ : ಶ್ರೀಗಳ ಪ್ರಣವ ಮಂಟಪ, ವೃತ್ತ ಲೋಕಾರ್ಪಣೆ, ಗುರುಭವನ ಭೂಮಿಪೂಜೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಜೋಳಿಗೆ ಇಲ್ಲದ ಜಂಗಮ ಎಂದೇ ಖ್ಯಾತರಾಗಿರುವ ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ಪೂಜ್ಯ ಶ್ರೀ ಜಯದೇವ ಜಗದ್ಗುರುಗಳ 8 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಜನೇವರಿ 12 ರವಿವಾರದಂದು ನಗರದ ಜಿ.ಪಂ. ರಸ್ತೆಯಲ್ಲಿರುವ ವನಶ್ರೀ ಸಂಸ್ಥಾನ ಮಠದಲ್ಲಿ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ, ವೃತ್ತ ಉದ್ಘಾಟನೆ, ಗುರುಭವನ ಭೂಮಿಪೂಜೆ ಹಾಗೂ ಧಾರ್ಮಿಕ ಸಭೆ ವಿಜೃಂಬಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ವನಶ್ರೀ ಸಂಸ್ಥಾನಮಠದ ಡಾ.ಜಯಬಸವಕುಮಾರ ಮಹಾಸ್ವಾಮಿಗಳು ಹಾಗೂ ಅಖಿಲ ಭಾರತ ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದರು.
ನಗರದ ವನಶ್ರೀ ಸಂಸ್ಥಾನಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ. 12 ರಂದು ಬೆಳಿಗ್ಗೆ 9 ಕ್ಕೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ವನಶ್ರೀಮಠದವರೆಗೂ ಜಯದೇವ ಜಗದ್ಗುರುಗಳ ಭಾವಚಿತ್ರದೊಂದಿಗೆ, 1,111 ಮಹಿಳೆಯರಿಂದ ಕುಂಭಮೇಳ ಮೆರವಣಿಗೆ ನಡೆಯಲಿದೆ. ನಂತರ ಶ್ರೀಮಠದ ಆವರಣದಲ್ಲಿ ನೂತನ ಗುರುಭವನ ಕಟ್ಟಡ ನಿರ್ಮಾಣಕ್ಕೆ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಮತ್ತು ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸುವರು. ಜಿ.ಪಂ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಜಯದೇವ ಜಗದ್ಗುರುಗಳ ವೃತ್ತವನ್ನು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಎಸ್. ಸವದಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೂತನ ವೃತ್ತ ಅನಾವರಣಗೊಳಿಸುವರು.
ಪೂಜ್ಯ ಜಯದೇವ ಜಗದ್ಗುರುಗಳ ಪ್ರಣವ ಮಂಟಪವನ್ನು ಬಾಗಲಕೋಟೆ ಸಂಸದರಾದ ಪಿ.ಸಿ.ಗದ್ದಿಗೌಡರ ಲೋಕಾರ್ಪಣೆಗೊಳಿಸುವರು. ನಂತರ ಧಾರ್ಮಿಕ ಸಮಾವೇಶವನ್ನು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸುವರು. ಸಮಾವೇಶಕ್ಕೆ ವನಶ್ರೀ ಸಂಸ್ಥಾನಮಠದ ಡಾ.ಜಯಬಸವಕುಮಾರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ, ಶ್ರೀ ಜಯದೇವ ಶಿವಯೋಗೇಶ್ವರ ಟ್ರಸ್ಟ್ ಅಧ್ಯಕ್ಷರಾದ ಸಿದ್ದಮುತ್ಯಾ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜ್ಞಾನಯೋಗಾಶ್ರಮ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ, ಚಿತ್ತರಗಿ-ಇಲಕಲ್‌ನ ಗುರುಮಹಾಂತ ಮಹಾಸ್ವಾಮಿಗಳು, ವೇಮನ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ, ಮಕಣಾಪುರ ಅಮೋಘೇಶ್ವರ ಗುರುಪೀಠದ ಸೋಮೇಶ್ವರ ಸ್ವಾಮೀಜಿ, ಹಿರೇರೂಗಿ ಮುಕ್ತಿಮಂದಿರ ಸುಗಲಾದೇವಿ ಮಾತೋಶ್ರೀ, ಆಳೂರು-ಚಳಕಾಪುರದ ಶಂಕರಾನಂದ ಸ್ವಾಮೀಜಿ, ಕನಕನಾಳ ಅವಜಗಿರಿ ಆಶ್ರಮದ ಗಿರೀಶಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದೆ.
ಅಲ್ಲದೇ ಅವಳಿ ಜಿಲ್ಲೆಯ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಮಾಜಿ ಜನಪ್ರತಿನಿಧಿಗಳು, ಸಮಾಜದ ಪ್ರಮುಖರು, ಸಮಾಜದ ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್, ಜಿಲ್ಲಾ ಗಾಣಿಗ ಸಮಾಜ ಸಂಘ, ಅಖಿಲ ಭಾರತ ಗಾಣಿಗ ಸಂಘ, ಜಿಲ್ಲಾ ಗಾಣಿಗ ನೌಕರರ ಸಂಘ, ಯುವ ಗಾಣಿಗ ಸಂಘ, ಅಕ್ಕನ ಬಳಗದ ಜಿಲ್ಲೆಯ ಹಾಗೂ ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿರುವರು. ಈ ಸಮಾರಂಭಕ್ಕೆ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು, ಸಮಾಜ ಬಂಧುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಎಂಎಲ್ಸಿ ಬಿ.ಜಿ.ಪಾಟೀಲ ಹಲಸಂಗಿ, ಜಯದೇಶ ಶಿವಯೋಗೇಶ್ವರ ಟ್ರಸ್ಟ್ ನ ನಿರ್ದೇಶಕರಾದ ಎನ್.ಎಸ್.ಲೋಣಿ, ಶ್ರೀಕಾಂತ ಶಿರಾಡೋಣ, ಜಿಲ್ಲಾ ಗಾಣಿಗ ಸಮಾಜ ಸಂಘದ ಅಧ್ಯಕ್ಷರಾದ ಬಿ.ಬಿ.ಪಾಸೋಡಿ, ಗೌರವಾಧ್ಯಕ್ಷ ಬಿ.ಎಂ.ಪಾಟೀಲ ಕತ್ನಳ್ಳಿ, ಪ್ರಧಾನ ಕಾರ್ಯದರ್ಶಿ ಬಾಬು ಸಜ್ಜನ, ಉಪಾಧ್ಯಕ್ಷ ಶರಣಪ್ಪ ಶ್ಯಾಪೇಟಿ, ಖಜಾಂಚಿ ಬಿ.ಕೆ.ಚೌದ್ರಿ, ಕಾರ್ಯದರ್ಶಿ ಐ.ಎಸ್.ಶಿರಡೋಣ, ಯುವ ಗಾಣಿಗ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಅಂದೇವಾಡಿ ಸೇರಿದಂತೆ ಸಮಾಜದ ಅನೇಕ ಹಿರಿಯರು, ಪ್ರಮುಖರು ಉಪಸ್ಥಿತರಿದ್ದರು.