ಮಹಿಳಾ ವಿವಿ ಮತ್ತು ಐಸಿಎಸ್‌ಐ ಸಹಭಾಗಿತ್ವ ಒಪ್ಪಂದಕ್ಕೆ ಸಹಿ

Jan 7, 2025 - 23:46
 0
ಮಹಿಳಾ ವಿವಿ ಮತ್ತು ಐಸಿಎಸ್‌ಐ ಸಹಭಾಗಿತ್ವ ಒಪ್ಪಂದಕ್ಕೆ ಸಹಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮತ್ತು ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್‌ಐ) ಸಹಭಾಗಿತ್ವ ಒಪ್ಪಂದಕ್ಕೆ (ಎಮ್‌ಒಯು) ಸಹಿ ಹಾಕಿವೆ.        

ಇದೇ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ವಿವಿಯ ಕುಲಪತಿ ಪ್ರೊ.ವಿ.ಕೆ.ತುಳಸಿಮಾಲ ಅವರು, ಈ ಒಪ್ಪಂದವು ಕಂಪನಿ ಕಾರ್ಯದರ್ಶಿ ಸೇವೆಗಳು ಮತ್ತು ಕಾರ್ಪೋರೇಟ್ ಆಡಳಿತದಲ್ಲಿ ಮಹಿಳೆಯರ ಶಿಕ್ಷಣ, ತರಬೇತಿ, ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯೊಂದಿಗೆ ನಿರ್ಣಾಯಕ ಹೆಜ್ಜೆಯಾಗಿದೆ. ವಿದ್ಯಾರ್ಥಿನಿಯರ ವೃತ್ತಿ ಅವಕಾಶಗಳನ್ನು ವೃದ್ಧಿಸುವುದು, ಕಾರ್ಪೋರೇಟ್ ಆಡಳಿತ ಕೌಶಲ್ಯಗಳನ್ನು ಹೆಚ್ಚಿಸುವುದು ಮತ್ತು ಪರಸ್ಪರ ಬೆಳವಣಿಗೆಗೆ ದಾರಿ ಮಾಡಿಕೊಡುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ ಎಂದರು.            

ಈ ಒಪ್ಪಂದವು ವಿದ್ಯಾರ್ಥಿನಿಯರಿಗೆ ಆಧುನಿಕ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಲು ಪ್ರಮುಖ ಹೆಜ್ಜೆಯಾಗಿದ್ದು, ಕಾರ್ಪೋರೇಟ್ ಆಡಳಿತ ಕ್ಷೇತ್ರದಲ್ಲಿ ಅವರು ಸಾಧನೆ ಮಾಡುವುದಕ್ಕೆ ಪೂರಕವಾಗಿದೆ ಎಂದರು.        

ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಐಸಿಎಸ್‌ಐ ಕೇಂದ್ರ ಮಂಡಳಿ ಸದಸ್ಯ ಸಿ.ಎಸ್. ದ್ವಾರಕನಾಥ ಚೆನ್ನೂರ, ಬೆಳಗಾವಿ ವಿಭಾಗದ ಅಧ್ಯಕ್ಷೆ ಸಿ.ಎಸ್. ದೀಪ್ತಿ, ವಾಣಿಜ್ಯ ವಿಭಾಗದ ಸಂಯೋಜಕ ಡಾ.ಗಣೇಶ್.ಎಸ್. ಆರ್, ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಶೇಖರ ಎಂ. ಮಠಪತಿ ಉಪಸ್ಥಿತರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.