ಐತಿಹಾಸಿಕ ಬಾವಿ ಸ್ವಚ್ಛಗೊಳಿಸುವ ಕಾಮಗಾರಿಗೆ ಭೂಮಿ ಪೂಜೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.33 ರಲ್ಲಿರುವ ಐತಿಹಾಸಿಕ ಬಾವಿಯನ್ನು ಸ್ವಚ್ಛಗೊಳಿಸುವ ಕಾಮಗಾರಿಗೆ ಭೂಮಿಯನ್ನು ಪೂಜೆ ನೆರವೇರಿಸಲಾಯಿತು.
ಬಳಿಕ ಮಾತನಾಡಿದ ಪಾಲಿಕೆ ಸದಸ್ಯೆ ಹಾಗೂ ಕಾಂಗ್ರೇಸ್ ಯುವನಾಯಕಿಯೂ ಆಗಿರುವ ಕು.ಆರತಿ ಶಹಾಪೂರ ಅವರು ವಾರ್ಡಿನ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಲಾಗುತ್ತಿದ್ದು, ಈಗಾಗಲೇ ರಸ್ತೆ, ನೀರು, ಬೀದಿ ದೀಪ, ಒಳ ಚರಂಡಿ ಕಾಮಗಾರಿಗಳಂತಹ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಇದೀಗ ವ್ಯಾಪ್ತಿಯ ವಾರ್ಡ್ ನಂ.33 ರಲ್ಲಿರುವ ಐತಿಹಾಸಿಕ ಬಾವಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಇಂತಹದೊAದು ಮಹತ್ವದ ಐತಿಹಾಸಿಕ ಬಾವಿಯನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರ ಕಾಳಜಿಯೊಂದಿಗೆ ಈ ಭಾಗದ ಜನರ ಬಹು ದಿನಗಳ ಬೇಡಿಕೆಯನ್ನು ಈ ಮೂಲಕ ನೆರವೇರಿಸಲಾಗಿದೆ ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್ಗಳ ಇಂತಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಸದಾ ಬೆನ್ನೆಲುವಾಗಿ ನಿಂತಿರುವ ಸಚಿವ ಎಂ. ಬಿ ಪಾಟೀಲ್ ಅವರನ್ನು ನಾವು ಎಂದಿಗೂ ಮರೆಯುವಂತಿಲ್ಲ. ಅಗತ್ಯ ಸಮಯದಲ್ಲಿ ಎಂ. ಬಿ ಪಾಟೀಲ್ ಅವರು ತಮ್ಮ ಅತ್ಯಮೂಲ್ಯ ಸಲಹೆ-ಸಹಕಾರ ನೀಡಿ ನಮಗೆ ಉತ್ಸಾಹ ಹಾಗೂ ಪ್ರೇರಣೆ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ರಜಾಕ್ ಹೊರ್ತಿ, ಮಹಾನಗರ ಪಾಲಿಕೆ ಉಪ ಮಹಾಪೌರರಾದ ದಿನೇಶ್ ಹಳ್ಳಿ, ಸಮಾಜಸೇವಕ ಮಂಜುನಾಥ.ಎಸ್.ಕಟ್ಟಿಮನಿ ಸೇರಿದಂತೆ ವಾರ್ಡಿನ ಹಿರಿಯರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.