ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ : ನಾಡದೇವಿ ಭುವನೇಶ್ವರಿ ದೇವಿಯ ಭವ್ಯ ಮೇರವಣಿಗೆ

Oct 2, 2024 - 22:37
 0
ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ : ನಾಡದೇವಿ ಭುವನೇಶ್ವರಿ ದೇವಿಯ ಭವ್ಯ ಮೇರವಣಿಗೆ
ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ : ನಾಡದೇವಿ ಭುವನೇಶ್ವರಿ ದೇವಿಯ ಭವ್ಯ ಮೇರವಣಿಗೆ
ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ : ನಾಡದೇವಿ ಭುವನೇಶ್ವರಿ ದೇವಿಯ ಭವ್ಯ ಮೇರವಣಿಗೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ತಾಳಿಕೋಟೆ :  ಪಟ್ಟಣದಲ್ಲಿ ಮಂಗಳವಾರರಂದು ಜರುಗಿದ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಡದೇವಿ ಕನ್ನಡಾಂಭೆ ಭುವನೇಶ್ವರಿ ದೇವಿಯ ಭಾವಚಿತ್ರದ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಡಾ.ಗುರುಪಾದಪ್ಪ ಘೀವಾರಿ ಅವರನ್ನು ಸಾರೋಟಿನಲ್ಲಿ ಕೂಡ್ರಿಸಿ ನಡೆಸಿದ ಭವ್ಯ ಮೇರಣಿಗೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಚಾಲನೆ ನೀಡಿದರು.
ಪಟ್ಟಣದ ಶ್ರೀ ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ಭವ್ಯ ಮೇರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ಎರಡು ಕಲಾ ತಂಡಗಳು ಹಾಗೂ ಇನ್ನೂಳಿದಂತೆ ಕಸಾಪದಿಂದ ಎರಡು ಕರಡಿ ಮಜಲ, ೫ ಹಲಗಿ ಮೇಳ, ೧೦ ಡೊಳ್ಳ ಮೇಳ, ಎರಡು ಬ್ಯಾಂಡಸೇಟ್, ದುರ್ಗಮುರ್ಗಿ ಕುಣಿತ, ಲೇಜಿಮ್ ಆಟ, ಕೋಲಾಟ, ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ ಮತ್ತು ಎಸ್.ಕೆ.ಶಿಕ್ಷಣ ಸಂಸ್ಥೆಯಡಿ ಎರಡು ಜಾನಪದ  ನೃತ್ಯ, ಮಾಳನೂರ ಏಶೇಗಾರ ಕುಣಿತ, ವಿದ್ಯಾರ್ಥಿಗಳ ಬ್ಯಾಂಡಸೇಟ್ ಒಳಗೊಂಡು ನಾನಾ ರೀತಿಯ ಕಲಾತಂಡಗಳು ಭಾಗವಹಿಸಿ ಸಮ್ಮೇಳನದ ಮೇರಗನ್ನು ಹೆಚ್ಚಿಸುವದರೊಂದಿಗೆ ಐತಿಹಾಸಿಕ ತಾಳಿಕೋಟೆ ನಗರದ ಘತವೈಭವ ಮರುಕಳಿಸುವಂತೆ ಮಾಡಿದವು.
ಕುಮಾರೇಶ್ವರ ಶಾಲೆಯ ವತಿಯಿಂದ ನಿರ್ಮಿಸಲಾದ ೧೨ನೇ ಶತಮಾನದ ಬಸವಣ್ಣನವರ ಕಾಲದ ಅನುಭವ ಮಂಟಪವನ್ನು ವಾಹನದಲ್ಲಿ ಸಿದ್ದಪಡಿಸಿ ಗಮನ ಸೇಳೆಯುವಂತೆ ಮಾಡಲಾಗಿತ್ತಲ್ಲದೇ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬಸವಣ್ಣನವರ ಛದ್ಮವೇಶದಾರಿಗಳು ಹಾಗೂ ಸ್ವಾಮಿ ವಿವೇಕಾನಂದ, ಅಂಬಿಗೇರ ಚೌಡಯ್ಯ, ವನಕೆ ಓಬವ್ವ, ಸಂಗೋಳಿ ರಾಯಣ್ಣ, ಅಕ್ಕಮಹಾದೇವಿ, ಒಳಗೊಂಡು ಅನೇಕ ಮಹಾಪುರುಷರ ಛದ್ಮವೇಷದಾರಿಗಳು ಕನ್ನಡದ ಕಂಪಿಗೆ ಮುನ್ನುಡಿಬರೆಯುವಂತೆ ಎದ್ದು ಕಾಣುತ್ತಿತ್ತು.
ಪಟ್ಟಣದೆಲ್ಲಡೆ ಕನ್ನಡದ ಕಲರವ
ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೇಲೆ ಪಟ್ಟಣದಲ್ಲಿ ಕನ್ನಡಾಂಭೆ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಕನ್ನಡದ ದ್ವಜಗಳು, ಪರಪರಿಗಳನ್ನು ಎಲ್ಲಡೆ ರಾರಾಜಿಸುವಂತೆ ಕಟ್ಟಲಾಗಿತ್ತಲ್ಲದೇ ಸಮ್ಮೇಳನಕ್ಕೆ ಹಾರ್ದಿಕ ಸ್ವಾಗತ ಕೋರುವ ಐತಿಹಾಸಿಕ ಹಿನ್ನೇಲೆ ಉಳ್ಳ ರೀತಿಯಲ್ಲಿ ಕಮಾನುಗಳನ್ನು ಸಿದ್ದಪಡಿಸಿ ಆಗಮಿಸುವ ಜನರಿಗೆ ವೈಭವಪೂರಿಕ ಕಾರ್ಯಕ್ರಮದಂತೆ ಎದ್ದು ಕಾಣುವಂತೆ ಮಾಡಲಾಗಿತ್ತು.
ಮೇರವಣಿಗೆಯಲ್ಲಿ ಕನ್ನಡದ ದ್ವಜಗಳು, ಹಾಗೂ ಪ್ರತೊಯೊಬ್ಬರ ಕೊರಳಿನಲ್ಲಿ ಕನ್ನಡದ ಸೇಲ್ಲೆಗಳನ್ನು  ಹಾಕಿಕೊಂಡು ಮೇರವಣಿಗೆಯಲ್ಲಿ ನಡೆದ ವಿವಿಧ ಕಲಾ ತಂಡಗಳ ವಿವಿಧ ನಾದಕ್ಕೆ ತಕ್ಕಂತೆ ಎಲ್ಲರೂ ಕುಣಿದು ಕುಪ್ಪಳಿಸುವದರೊಂದಿಗೆ ತಾಳಿಕೋಟೆ ಐತಿಹಾಸಿಕ ನಗರದಲ್ಲಿ ಕನ್ನಡದ ಕಂಪನ್ನು ಹೆಚ್ಚಿಸುವದರಲ್ಲಿ ಎಲ್ಲ ಕನ್ನಡಾಭಿಮಾನಿಗಳು ಸಾಕ್ಷೀಕರಿಸಿದರು.
ಮೇರವಣಿಗೆಯು ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡು ಅಂಬೇಡ್ಕರ್ ಸರ್ಕಲ್, ಕತ್ರಿ ಭಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಮಹಾರಾಣಾಪ್ರತಾಪ ವೃತ್ತದ ಮೂಲಕ ಸಮ್ಮೇಳನ ಸಿದ್ದಪಡಿಸಲಾದ ಶ್ರೀ ಸಂಗಮೇಶ್ವರ ಸಭಾಭವನಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ಮೇರವಣಿಗೆಯಲ್ಲಿ ಹೆಜ್ಜೆ ಹಾಕಿದ ಪ್ರಮುಖರು
ಕನ್ನಡಾಂಭೆ ಭುವನೇಶ್ವರಿ ದೇವಿಯ ಮೇರವಣಿಗೆಯಲ್ಲಿ ಮೇರವಣಿಗೆಗೆ ಚಾಲನೆ ನೀಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಕೆಪಿಸಿಸಿ ಸದಸ್ಯ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ),ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಫಿರ ವಾಲಿಕಾರ, ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ ಒಳಗೊಂಡಂತೆ ಅನೇಕ ರಾಜಕೀಯ ಮುಖಂಡರುಗಳು, ಸಾಹಿತಿಗಳು, ಕನ್ನಡಾಭಿಮಾನಿಗಳು, ವಿಧ್ಯಾರ್ಥಿಗಳು, ಶಿಕ್ಷಕ ವೃಂದದವರು, ಹೆಜ್ಜೆ ಹಾಕಿ ಸಂತಸ ಪಟ್ಟರು.
ಮಳಿಗೆಗಳ ಉದ್ಘಾಟನೆ
ಅಕ್ಷರ ಜಾತ್ರೆಯಅಂಗವಾಗಿ ಸಮ್ಮೇಳನದ ಭವನದ ಮುಂಭಾಗದ ಮೈದಾನದ ಎಡ-ಬಲದಲ್ಲಿ ವಿವಿಧ ನಮೂನೇಯ ಮಾರಾಟದ ಮಳಿಗೆಗಳನ್ನು ಸ್ಥಾಪಿಸಲಾಗಿತ್ತಲ್ಲದೇ ಮಳಿಗೆಗಳಲ್ಲಿ ಪುಸ್ತಕ ಮಳಿಗೆ, ಗ್ರಾಮುದ್ಯೋಗ ಸಂಭಂದಿತ ನೂಲು ನೈಗೆ ಸಂಭಂದಿತ ವಿವಿಧ ನಮೂನೆಯ ಅರಿವೆಯ ಮಳಿಗೆ ಇದು ಅಲ್ಲದೇ ಚಿತ್ರಕಲಾ ಮಳಿಗೆ ಹಾಗೂ ರೈತರಿಗೆ ಮಾಹಿತಿ ನೀಡುವಂತಹ ಕೃಷಿಗೆ ಸಂಭಂದಿತ ಮಳಿಗೆಗಳು ಹಾಕಲಾಗಿತ್ತು ಸದರಿ ಮಳಿಗೆಗಳನ್ನು ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಫೀರ ವಾಲಿಕಾ, ಪ್ರಭುಗೌಡ ಮದರಕಲ್ಲ, ವೀರುಪಾಕ್ಷಯ್ಯ ಹಿರೇಮಠ, ಆರ್.ಎಲ್ ಕೊಪ್ಪದ, ಅವರು ಉದ್ಘಾಟಿಸಿದರು. ಸಮ್ಮೇಳನಕ್ಕೆ ಆಗಮಿಸಿದ ಜನರು ಮಾರಾಟ ಮಳಿಗೆಗಳ ರೀಯಾಯಿದರದ ಲಾಭವನ್ನು ಪಡೆದುಕೊಂಡರು.
ಮೇರವಣಿಗೆಗೆ ಚಾಲನೆಗೂ ಮುಂಚೆ ಬೆಳಿಗ್ಗೆ ರಾಷ್ಟ್ರದ್ವಜಾರೋಹಣವನ್ನು ಕಸಾಪ ಗೌರವಾಧ್ಯಕ್ಷ ಎಚ್.ಎಸ್.ಪಾಟೀಲ, ನಾಡದ್ವಜಾರೋಹಣವನ್ನು ಕಸಾಪ ಗೌರವ ಸಲಹೆಗಾರ ಎಸ್.ಎಂ.ಸಜ್ಜನ, ಪರಿಷತ್ತಿನ ದ್ವಜಾರೋಹಣವನ್ನು ಕಸಾಪ ತಾಲೂಕಾ ಅಧ್ಯಕ್ಷ ಆರ್.ಎಲ್.ಕೊಪ್ಪದ, ದಾಸೋಹ ಮನೆಯ ಉದ್ಘಾಟನೆಯನ್ನು ಮೈಲೇಶ್ವರ ಬ್ರೀಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ, ಅವರು ನೇರವೇರಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.