ಡಾ.ಜಿ.ಎಂ.ಘೀವಾರಿಯವರಿಗೆ ಒಲಿದುಬಂದ ಸಮ್ಮೇಳನಾ ಅಧ್ಯಕ್ಷ ಸ್ಥಾನ ಕನ್ನಡ ಸಾಹಿತ್ಯ ಸಮ್ಮೇಳನದ ಸಾರೋಟಿನಲ್ಲಿ ಡಾ.ಘೀವಾರಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಜಿ.ಪಿ. ಘೋರ್ಪಡೆ
ತಾಳಿಕೋಟೆ : ತಾಳಿಕೋಟೆ ಪಟ್ಟಣದಲ್ಲಿ ಅಕ್ಟೋಬರ ೧ರಂದು ಜರುಗಲಿರುವ ತಾಲೂಖಾ ಕನ್ನಡಸಾಹಿತ್ಯ ಪರಿಷತ್ತಿನ ತಾಳಿಕೋಟೆ ತಾಲೂಕಾ ಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಾಹಿತಿ ನಿವೃತ್ತ ಪ್ರಾಚಾರ್ಯ ಡಾ.ಜಿ.ಎಂ ಘೀವಾರಿ ಅವರು ಕನ್ನಡಕ್ಕಾಗಿ ಸಲ್ಲಿಸಿದ ಸೇವೆ ಅನುಪಮವಾಗಿದೆ ಎಂದರೆ ತಪ್ಪಾಗಲಾರದು.
ಮೂಲತಃ ಬೆಳಗಾವ ಜಿಲ್ಲೆಯವರಾದ ಇವರು ೧೫-೦೮-೧೯೫೫ ರಂದು ತಂದೆ ದಿ.ಮಲ್ಲಿಕಾರ್ಜುನ ತಾಯಿ ದಿ.ಸುವರ್ಣಾದೇವಿ ಘಿವಾರಿ ಇವರ ಉದರದಲ್ಲಿ ಜನಿಸಿದ ಇವರು ಪ್ರಾಥಮಿಕ ಮಾಧ್ಯಮಿಕ, ಪಧವಿ ಶಿಕ್ಷಣವನ್ನು ಬೆಳಗಾವಿಯಲ್ಲಿಯೇ ಮುಗಿಸಿದ ಇವರು ಇದು ಅಲ್ಲದೇ ೧೯೭೬ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪದವಿದರರಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಇವರು ಕರ್ನಾಟಕ ವಿಶ್ವವಿದ್ಯಾಲಯ ದಾರವಾಡದಲ್ಲಿ ಎಂ.ಎ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾದರು. ೨೦೦೮ರಲ್ಲಿ ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿಯೇ ಮಹಲಿಂಗರAಗ ಎಂಬ ಪ್ರಭಂದ ಮಂಡಿಸಿ ಪಿ.ಎಚ್.ಡಿ ಪದವಿ ಪಡೆದವರಾಗಿದ್ದಾರೆ.
೧೯೭೮ರಲ್ಲಿ ತಾಳಿಕೋಟೆಯ ಎಸ್.ಕೆ.ಮಹಾ ವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿಗೆ ಸೇರಿಕೊಂಡ ಅವರು ಪ್ರಾಚಾರ್ಯರಾಗಿ ಒಟ್ಟು ೩೭ ವರ್ಷ ಸುದೀರ್ಘ ಸೇವೆ ಸಲ್ಲಿಸುವದರ ಜೊತೆಗೆ ಹಳೆ ಗನ್ನಡ ಭಾಷೆಯನ್ನು ಅತ್ಯಂತ ಸರಳವಾಗಿ ಬಲ್ಲವರಾಗುವದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಪ್ರೇಮತ್ವ ಅದರ ಮಹತ್ವವನ್ನು ಬಿತ್ತರಿಸಿ ೨೦೧೫ರಲ್ಲಿ ಸೇವಾ ನಿವೃತ್ತಿಯನ್ನು ಹೊಂದಿದಾರೆ.
ಪ್ರಕಟಿತ ಕೃತಿಗಳು :
ಡಾ.ಜಿ.ಎಂ.ಘೀವಾರಿ ಅವರು ಬರೆದ ಕೃತಿಗಳಲ್ಲಿ ಮಹಲಿಂಗರAಗ ಸಂಶೋಧನ ಗ್ರಂಥವಾಗಿ ಹೊರಹೊಮ್ಮಿದ್ದು ಕನ್ನಡದಲ್ಲಿ ಅದ್ವೆöÊತ ಸಾಹಿತ್ಯ ಕೃತಿಯನ್ನು ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪ್ರಕಟಿತಗೊಂಡಿದೆ, ಜನಪದಗೀತೆಗಳ ಶೃಂಗಾರ ಕೃತಿಯು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಿತಗೊಂಡಿದೆ, ಹಳೆಗನ್ನಡ ಸಾಹಿತ್ಯ ಸಂಚಯ ಕೃತಿಯನ್ನು ಕರ್ನಾಟಕ ವಿಶ್ವ ವಿದ್ಯಾಲಯವು ಸಂಪಾದಿತ ಪಧವಿ ವರ್ಗದ ಪಠ್ಯ ಕೃತಿಗೆ ಸೇರ್ಪಡೆಗೊಳಿಸಿಕೊಂಡಿದೆ, ಅಧ್ಯಯನ ನೂರೊಂದು ವಚನಗಳು ಕೃತಿಯನ್ನು ಸಂಪಾದಿತ ಕೃತಿಯ ಸಾಲಿನಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠವು ಪ್ರಕಟಿತಗೊಳಿಸಿದೆ.
ಪ್ರಕಟಿತ ಲೇಖನಗಳು:
ಇದು ಅಲ್ಲದೇ ಸಂಗಯ್ಯನಿಕ್ಕಿದ ದಿಬ್ಯ ಸಂಶೋದನಾ ಲೇಖನವನ್ನು ಪಂ.ಪುಟ್ಟರಾಜ ಗವಾಯಿಗಳ ಅಭಿನಂದನಾ ಗ್ರಂಥ ಜ್ಞಾನದೇಗುಲದಲ್ಲಿ ಪ್ರಕಟಿತಗೊಂಡಿದೆ, ಕನಕದಾಸರು ಮತ್ತು ಸಂತ ಏಕನಾಥರು ಲೇಖನವು ಒಂದು ತೌಲನಿಕ ಅಧ್ಯಯಯನ ಕರ್ನಾಟಕ ವಿಶ್ವ ವಿದ್ಯಾಲಯದ ಕನಕಪೀಠದಿಂದ ಭಕ್ತಿ ಪರಂಪರೆ ಮತ್ತು ಕನಕದಾಸರು ಕೃತಿಯಲ್ಲಿ ಪ್ರಕಟಿತಗೊಂಡಿದೆ,ಶ್ರೀ ಶಂಕರಾನAದ ಯೋಗಿಶ್ವರರ ತತ್ವಪದಗಳಲ್ಲಿ ಅನುಭಾವ ವಿಮರ್ಶಾತ್ಮಕ, ಮಹಲಿಂಗರAಗನ ಕನ್ನಡ ಪ್ರಜ್ಞೆ, ಕೀರ್ತನೆಗಳಲ್ಲಿ ದೇಸಿ ವಿಮರ್ಶಾನಾತ್ಮಕ ಲೇಖನ ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿತ, ಒಳಗೊಂಡು ಒಟ್ಟು ೯ ಲೇಖನಗಳು ಪ್ರಕಟಿಗೊಂಡಿವೆ.
ಸಮ್ಮೇಳನ ಸರ್ವಾಧ್ಯಕ್ಷ ಡಾ.ಜಿ.ಎಂ.ಘೀವಾರಿ ಅವರು ಸುಮಾರು ಹತ್ತಾರುಕಡೆಗಳಲ್ಲಿ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿ ಕನ್ನಡ ನಾಡು ನುಡಿ ಭಾಷೆಯ ಅಭಿಮಾನದೊಂದಿಗೆ ಅನೇಕ ಪ್ರಭಂದಗಳನ್ನು ಮಂಡಿಸಿ ಸೈ ಎನ್ನಿಸಿಕೊಂಡಿದ್ದಾರೆ.
ತಾಳಿಕೋಟಿ ಕನ್ನಡ ಸಂಘದಲ್ಲಿ ಕಾರ್ಯದರ್ಶಿಯಾಗಿ, ಜಿಲ್ಲಾ ಹಾಗೂ ತಾಲೂಕಾ ಸಾಹಿತ್ಯ ಸಮ್ಮೇಳನಗಳಲ್ಲಿ ಅತಿಥಿ ಉಪನ್ಯಾಸಗಳನ್ನು ಕೊಟ್ಟಿದ್ದು, ಕ.ವಿ.ವಿ. ಧಾರವಾಡದ ದೂರ ಶಿಕ್ಷಣ ನಿರ್ದೇಶನಾಲಯದಲ್ಲಿ ಕನ್ನಡ ವಿಷಯ ಪರಿಶೀಲಕರಾಗಿ, ತಾಳಿಕೋಟೆ ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಲಹೆಗಾರರಾಗಿ ಘೀವಾರಿ ಅವರು ಸೇವೆ ಸಲ್ಲಿಸಿದ್ದಾರೆ. ಇವರ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅನೇಕ ಕೊಡುಗೆಗಳನ್ನು ಗುರುತಿಸಿದ ಅನೇಕ ಸಂಘ ಸಂಸ್ಥೆಗಳು ಇವರಿಗೆ ಸತ್ಕರಿಸಿ ಗೌರವಿಸಿವೆ.