ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಕಾಶಿನಾಥ ಉಪಾಧ್ಯಕ್ಷರಾಗಿ ಚಿಂತಪ್ಪಗೌಡ ಆಯ್ಕೆ

ತಾಳಿಕೋಟೆ : ಪಟ್ಟಣದ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ನಿ,ದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಸೋಮವಾರರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಶಿನಾಥ ಸಜ್ಜನ(ಬಿದರಕುಂದಿ), ಉಪಾಧ್ಯಕ್ಷರಾಗಿ ಚಿಂತಪ್ಪಗೌಡ ಸಾಹೇಬಗೌಡ ಯಾಳಗಿ ಅವರು ಅವಿರೋಧವಾಗಿ ಆಯ್ಕೆಯಾದರು.
೫ ವರ್ಷದ ಅವಧಿಗಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಚುನಾವಣಾ ಪ್ರಕ್ರೀಯೇಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಶಿನಾಥ ಸಜ್ಜನ ಉಪಾಧ್ಯಕ್ಷ ಸ್ಥಾನಕ್ಕೆ ಚಿಂತಪ್ಪಗೌಡ ಯಾಳಗಿ ಅವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯ ನಂತರ ಅಧ್ಯಕ್ಷ ಸ್ಥಾನಕ್ಕೆ ಕಾಶಿನಾಥ ಸಜ್ಜನ, ಉಪಾಧ್ಯಕ್ಷ ಸ್ಥಾನಕ್ಕೆ ಚಿಂತಪ್ಪಗೌಡ ಯಾಳಗಿ ಒಬ್ಬಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಕಾಶಿನಾಥ ಸಜ್ಜನ, ಉಪಾಧ್ಯಕ್ಷರಾಗಿ ಚಿಂತಪ್ಪಗೌಡ ಯಾಳಗಿ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆAದು ಚುನಾವಣಾಧಿಕಾರಿ ಚೇತನ ಭಾವಿಕಟ್ಟಿ ಅವರು ಘೋಷಿಸಿದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆ ಪ್ರಕ್ರೀಯೇ ಹೊರಬಿದ್ದ ನಂತರ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್.ಪಾಟೀಲ(ಯಾಳಗಿ) ಅವರು ಮಾತನಾಡಿ ೨೨೫ ಕೋಟಿಗೂ ಅಧಿಕ ಬಂಡವಾಳದೊAದಿಗೆ ಮುನ್ನಡೆದಿರುವ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ಶೇರುದಾರರ, ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ಮುನ್ನಡೆಸಿಕೊಂಡು ಹೋಗುವದರೊಂದಿಗೆ ಅದೇ ಶ್ರೇಯಸ್ಸು ಉಳಿಸಿಕೊಂಡು ಸಾಗಬೇಕೆಂದ ಅವರು ಉಪಸ್ಥಿತ ನಿರ್ದೇಶಕ ಮಂಡಳಿಯವರಿಗೆ ಹಾಗೂ ಸಿಬ್ಬಂದಿವರ್ಗದವರೂ ಕೂಡಾ ಸಹಕಾರಿ ಕ್ಷೇತ್ರದಲ್ಲಿ ಸಹಕಾರವೆಂಬ ಭಾವನೆ ಎಲ್ಲರಲ್ಲಿ ಇರಲಿ ಎಂದರು.
ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷ ಕಾಶಿನಾಥ ಸಜ್ಜನ ಅವರು ಮಾತನಾಡಿ ನೂತನವಾಗಿ ಅವಿರೋಧವಾಗಿ ಅಧ್ಯಕ್ಷನ್ನನ್ನಾಗಿ ಮಾಡಿದ ಎಲ್ಲ ನಿರ್ದೇಶಕ ಮಂಡಳಿಯವರಿಗೆ ದನ್ಯವಾದ ತಿಳಿಸಿದರಲ್ಲದೇ ಎಲ್ಲರ ಪ್ರೀತಿ ಸಹಕಾರದೊಂದಿಗೆ ಬ್ಯಾಂಕಿನ ಏಳಿಗೆಗಾಗಿ ಶ್ರಮಿಸುವದಾಗಿ ತಿಳಿಸಿದರು.
ಇದೇ ಸಮಯದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಾರ್ವಜನಿಕರಿಂದ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾಶಿನಾಥ ಮುರಾಳ ಮಾತನಾಡಿದರು.
ಈ ಸಮಯದಲ್ಲಿ ನಿರ್ದೇಶಕ ಮಂಡಳಿಯ ಸದಸ್ಯರಾದ ದತ್ತಾತ್ರೇಯ ಹೆಬಸೂರ, ಈಶ್ವರಪ್ಪ ಬಿಳೇಭಾವಿ, ದ್ಯಾಮನಗೌಡ ಪಾಟೀಲ, ಮುರಿಗೆಪ್ಪ ಸರಶೆಟ್ಟಿ, ಪ್ರಲ್ಹಾದಸಿಂಗ್ ಹಜೇರಿ, ಶ್ರೀಮತಿ ಗಿರಿಜಾಬಾಯಿ ಕೊಡಗಾನೂರ, ಶ್ರೀಮತಿ ಶೈಲಾ ಬಡದಾಳಿ, ಅಮರಸಿಂಗ್ ಹಜೇರಿ(ಬಾಬು), ಸುರೇಶ ಪಾಟೀಲ, ರಾಮಪ್ಪ ಕಟ್ಟಿಮನಿ, ಸಂಜೀವ ಬರದೇನಾಳ, ಅಲ್ಲದೇ ತಾಳಿಕೋಟೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.