ದುರ್ಗುಣಗಳನ್ನು ದೂರಿಕರಿಸುವ ಹಬ್ಬ ನವರಾತ್ರಿ-ಕುಂಟೋಜಿಶ್ರೀ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ತಾಳಿಕೋಟೆ : ಶಾರದೀಯ ನವರಾತ್ರಿ ಎಂದು ಕರೆಯಲ್ಪಡುವ ನವರಾತ್ರಿ ಹಬ್ಬವನ್ನು ಉತ್ತರ ಮತ್ತು ಪೂರ್ವ ಭಾರತದಾದ್ಯಂತ ಬಹಳೇ ಉತ್ಸಾದಿಂದ ಆಚರಿಸಲ್ಪಡುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಪೂಜ್ಯ ಡಾ.ಚೆನ್ನವೀರ ದೇವರು ನುಡಿದರು.
ಶನಿವಾರರಂದು ಸ್ಥಳೀಯ ಶ್ರೀದೇವಿ ಮಾತೃಮಂಡಳಿ ಹಾಗೂ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯವರ ವತಿಯಂದ ಪ್ರತಿಷ್ಠಾಪಿಸಲಾದ ಆದಿದೇವತೆ ಶ್ರೀ ದುರ್ಗಾಮಾತೆಯ ೩ನೇ ದಿನದ ಪೂಜಾಕಾರ್ಯಕ್ರಮದ ಕುರಿತು ಏರ್ಪಡಿಸಲಾದ ದೀಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಈ ಹಬ್ಬವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧದ ೯ರಾತ್ರಿಗಳನ್ನು ಸಂಕೇಶಿಸುತ್ತದೆ ಇದು ೧೦ನೇ ದಿನದಂದು ವಿಜಯದಲ್ಲಿ ಕೊನೆಗೊಳ್ಳುತ್ತದೆ ಎಂದರು. ಮನಸ್ಸಿನಲ್ಲಿಯ ದುರ್ಗುಣಗಳನ್ನು ಸುಡುವಂತಹ ಹಬ್ಬ ನವರಾತ್ರಿ ಹಬ್ಬವಾಗಿರುತ್ತದೆ ಮನಸ್ಸನ್ನು ಸ್ವಚ್ಚಗೊಳಿಸಬೇಕಾದರೇ ಶರಣರ, ಸಂತರ, ಶ್ರೀಗಳ ಆದರ್ಶಗಳನ್ನು ಅಳವಡಿಸಿಕೊಂಡರೇ ಜೀವನ ಸಾರ್ಥಕವಾಗುತ್ತದೆ ಎಂದರು. ಮನಸ್ಸಿನಲ್ಲಿ ಒಳ್ಳೇಯ ಸದ್ಗುಣಗಳನ್ನು ಇಟ್ಟುಕೊಳ್ಳಬೇಕು ದಾನಕ್ಕೆ ಸದ್ಗುಣಕ್ಕೆ ಬೆಲೆ ಇದೆ ಎಂದ ಶ್ರೀಗಳು ದೀಪ ಹಚ್ಚುವದರಿಂದ ಹೃದಯದಲ್ಲಿಯ ಮನಸ್ಸನ್ನಲ್ಲಿಯ ದುರ್ಗುಣ ದೂರಿಕರಿಸಲಾಗುತ್ತದೆ ಎಂದರು.
ಇನ್ನೋರ್ವ ಸಾನಿಧ್ಯ ವಹಿಸಿದ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಗೌರವಾಧ್ಯಕ್ಷರಾದ ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶೀವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಶ್ರೀದೇವಿ ಮಾತೃ ಮಂಡಳಿಯವರು ಕಳೇದ ಮೂರು ವರ್ಷಗಳಿಂದ ಶ್ರೀ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸುತ್ತಾ ೯ದಿನ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲರಿಗೂ ಭಕಿಮಾರ್ಗದತ್ತ ಕೊಂಡೊಯ್ಯುತ್ತಿರುವ ನೆತೃತ್ವ ವಹಿಸುತ್ತ ಸಾಗಿದ ಶ್ರೀಮತಿ ಸುವರ್ಣಾ ಬಿರಾದಾರ ತಂಡದವರ ಹಾಗೂ ಹಿಂದೂ ಮಹಾಗಣಪತಿಯ ಮಹಾಮಂಡಳೀಯವರ ಸೇವಾ ಕಾರ್ಯ ಮಹತ್ವದ್ದಾಗಿದೆ ನವರಾತ್ರಿಯಲ್ಲಿ ವಿಶೇಷವಾಗಿ ನಿಂಬೆಹಣ್ಣಿನ ಹಣತೆಯನ್ನು ಮಾಡಿ ಅದರಲ್ಲಿ ದೀಪ ಬೆಳಗಿಸುವಂತಹ ಕಾರ್ಯ ಈ ಹಿಂದಿನಿಂದಲೂ ಸಾಗಿಬಂದ ಈ ಕಾರ್ಯ ಇಷ್ಠಾರ್ತ ಪೂರೈಸಿ ಮನಸ್ಸನ್ನು ತಿಳಿಗೊಳಿಸುತ್ತದೆ ಎಂದರು. ಇಂದು ಅಂತಹ ಕಾರ್ಯಕ್ರಮವನ್ನು ಏರ್ಪಡಿಸಿ ಜ್ಯೋತಿ ಬೆಳಗಸಿ ಜಗತ್ತನ್ನೆ ಬೆಳಗಿಸುವಷ್ಟು ಉತ್ಸಾಹ ಬರಿತ ಕಾರ್ಯಕ್ರಮ ಇದಾಗಿದೆ ಎಂದು ಶ್ರೀ ದೇವಿಯು ರಾಕ್ಷಸರನ್ನು ಸಂಹಾರ ಮಾಡಿದ ಕೆಲವು ಸನ್ನಿವೇಶದ ಅಧ್ಯಾಯ ಕುರಿತು ಶ್ರೀಗಳು ವಿವರಿಸಿದರು.
ಇನ್ನೋರ್ವ ಹಿಂದೂ ಮಹಾಗಣಪತಿಯ ಮಹಾಮಂಡಳಿಯ ಗೌರವಉಪಾಧ್ಯಕ್ಷರಾದ ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಸನ್ಮಾನಸ್ವೀಕರಿಸಿ ಮಾತನಾಡಿದ ಅವರು ಇಂದು ದೀಪಾರಾಧನೆ ಮಾಡುವಂತಹ ಕಾರ್ಯಕ್ರಮ ಕುರಿತು ದೀಪದ ಮಹತ್ವವನ್ನು ತಿಳಿದುಕೊಳ್ಳಬೇಕು ದೀಪದಲ್ಲಿ ಬತ್ತಿ ಎಂಬುದು ತಾನೂ ಸುಟ್ಟುಕೊಂಡು ಜಗತ್ತಿಗೆ ಬೆಳಕು ಕೊಡುತ್ತದೆ ಬತ್ತಿ ಮತ್ತು ಎಣ್ಣೆ ಕತ್ತಲೆಗೆ ಬೆಳಕು ಕೊಡುತ್ತದೆ ಕಾರಣ ಇದನ್ನು ಅರ್ಥೈಸಿಕೊಂಡ ಮಾನವರಾದ ಎಲ್ಲರೂ ದುಷ್ಚಟಗಳನ್ನು ದೂರಿಕರಿಸಿಕೊಳ್ಳಬೇಕು ಅಡಿಷಡವರ್ಗಗಳಾದ ಕಾಮ,ಕ್ರೋಧ,ಮದ,ಮತ್ಸರಗಳನ್ನು ದೂರಿಕರಿಸಿಕೊಳ್ಳಬೇಕು ಎಂದು ಸನಾತನ ಧರ್ಮದ ಬಗ್ಗೆ ವಿಜಯಪುರದ ಮಹಿಳಾ ಮಂಡಳಿಯವರು ಮಾತೃತ್ವ ಸಂಸ್ಕಾರ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ಕೆ ಆಗಮಿಸಿದ ಎಲ್ಲಾ ತಾಯಂದಿರಿಗೆ ಶುಭ ಹಾರೈಸಿದರು.
ಇನ್ನೋರ್ವ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ಇಂದು ಏರ್ಪಡಿಸಲಾದ ಕಾರ್ಯಕ್ರಮವು ನವರಾತ್ರಿ ಉತ್ಸವ ಭಕಿಯ ಕಾರ್ಯಕ್ರಮ ಇದಾಗಿದೆ ದುಷ್ಟಶಕ್ತಿಯನ್ನು ಸಂಹರಿಸಿ ಒಳ್ಳೆಯವನ್ನ ರಕ್ಷಿಸುವಂತಹ ಶ್ರೀ ಮಹಾದೇವಿಯ ಕಾರ್ಯಕ್ರಮ ಇದಾಗಿದೆ ಎಂದು ಕಾರ್ಯಕ್ರಮ ಸಂಘಟಿಸಿದ ಸಂಘಟಿಕರ ಕುರಿತು ಗುಣಗಾನ ಮಾಡಿದರು.
ಇದೇ ಸಮಯದಲ್ಲಿ ಶ್ರೀಗಳಿಗೆ ಹಾಗೂ ಅತಿಥಿ ಮಹೋದಯರಿಗೆ ಹಾಗೂ ವಿಜಯಪುರ ಮಾತೃ ಮಂಡಳಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು
ವೇಧಿಕೆಯ ಮೇಲೆ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಗಣ್ಯವ್ಯಾಪಾರಸ್ಥರಾದ ಪರಶುರಾಮ ಹಂಚಾಟೆ, ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನೇತೃತ್ವ ವಹಿಸಿದ ಶ್ರೀ ದೇವಿ ಮಾತೃ ಮಂಡಳಿಯ ಶ್ರೀಮತಿ ಸುವರ್ಣಾ ಬಿರಾದಾರ, ಹಿಂದೂ ಮಹಾಗಣಪತಿಯ ಮಹಾಮಂಡಳೀಯ ರಾಘವೆಂದ್ರ ವಿಜಾಪೂರ, ಕಾಶಿನಾಥ ಅರಳಿಚಂಡಿ, ವಿಜಯ ಕಲಾಲ್, ಗಜದಂಡಯ್ಯಾ ಹಿರೆಮಠ, ಯಲ್ಲೇಶ ಧಾಯಪುಲೇ ಮೊದಲಾದವರು ಉಪಸ್ಥಿತರಿದ್ದರು.