ಬಿ.ಕೆ.ಬ್ಯಾಂಕ್ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ತಾಳಿಕೋಟೆ : ಮಹತ್ಮಾ ಗಾಂಧಿಜಿಯವರ ೧೫೫ನೇಯ ಜನ್ಮ ದಿನಾಚಾರಣೆಯ ನಿಮಿತ್ತ ಹಾಗೂ ಶ್ರೀ ಲಾಲ್ ಬಹಾದ್ದೂರ ಶಾಸ್ತ್ರಿ ೧೨೦ನೇಯ ಜನ್ಮ ದಿನಾಚಾರಣೆಯ ನಿಮಿತ್ತ ಅಕ್ಟೊಬರ್ ೨ ರಂದು ಪಟ್ಟಣದ ದಿ ಭಾವಸಾರ ಕ್ಷತ್ರಿಯ ಕೊ ಆಪ್ ಬ್ಯಾಂಕ ಲಿಮಿಟೆಡ್ ವತಿಯಿಂದ ಸ್ವಚ್ಚತಾ ಅಭಿಯಾನವನ್ನು ಸಮುದಾಯ ಅರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ|| ಶ್ರೀಶೈಲ ಹುಕ್ಕೆರಿ ಹಾಗೂ ಪುರಸಭೆ ಅರೋಗ್ಯ ಅಧಿಕಾರಿಗಳಾದ ಶಿವಾನಂದ ಜುಮನಾಳ ಹಾಗೂ ಬ್ಯಾಂಕಿನ ನಿರ್ದೇಶಕರಾದ ಸುನಿಲ ಮಲ್ಲಾರಿ ಮಹೀಂದ್ರಕರ, ಸ್ವಾಮಿನಾಥ ಶಂಕರ ಹಂಚಾಟೆ, ಬ್ಯಾಂಕಿನ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಯಲ್ಲು ನಾಗೇಂದ್ರ ಮಹಿಂದ್ರಕರ, ಸಿಬ್ಬಂದಿಯವರಾದ ಸಂಜೀವಕುಮಾರ ವೀ. ಗಡ್ಡಾಳೆ, ನಾಗೆಶ ಮಲ್ಲಾರಿ ದರ್ಜಿ, ವೀರೆಶ ಬ ಗಂಗಾಧರಮಠ, ಸಿದ್ರಾಮಯ್ಯ ಸಂ. ಮಠಪತಿ, ಶೇಷಾದ್ರಿ ಕೃ. ಗ್ರಾಮಪುರೊಹಿತ, ಉಪಸ್ಥಿತರಿದ್ದರು.
ಪಟ್ಟಣದ ಸಮೂದಾಯ ಆರೋಗ್ಯ ಕೇಂದ್ರದ ಆವರಣವನ್ನು ಸ್ವಚ್ಚಗೊಳಿಸಲಾಯಿತು.