ಮಹಾತ್ಮರ ಗುಣಗಳನ್ನು ಮೂಗೂಡಿಸಿಕೊಳ್ಳಿ : ಪಾಟೀಲ

Oct 4, 2024 - 08:54
 0
ಮಹಾತ್ಮರ ಗುಣಗಳನ್ನು ಮೂಗೂಡಿಸಿಕೊಳ್ಳಿ : ಪಾಟೀಲ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 


ತಾಳಿಕೋಟೆ :  ಪಟ್ಟಣದ ಶ್ರೀ ಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರರಂದು ಗಾಂಧಿ ಜಯಂತಿ ಮತ್ತು ಲಾಲ ಬಹದ್ದೂರ್ ಶಾಸ್ತ್ರಿ ರವರ ಜಯಂತಿಯನ್ನು ಆಚರಿಸಲಾಯಿತು.
      ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದಎಚ್.ಎಸ್. ಪಾಟೀಲ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಆದರ್ಶ ವಿದ್ಯಾರ್ಥಿಗಳಾಗಬೇಕು ಮತ್ತು ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀಜಿ ಅವರಂತಹ ಮಹಾತ್ಮರ ಗುಣಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ನಾವು ಕೇವಲ ಭಾವಚಿತ್ರ ಪೂಜೆ ಮಾಡಿ ಕೈಬಿಟ್ಟರೆ ಸಲ್ಲದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವದರೊಂದಿಗೆ ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು ಸ್ವಚ್ಚತೆ ಎಂಬುದು ನಮ್ಮ ಜೀವನದ ಒಂದು ಅಂಗವಾಗಿದೆ ಸ್ವಚ್ಚತೆಯ ಪರಿಪಾಠದೊಂದಿಗೆ ಎಲ್ಲರೂ ಮುನ್ನಡೆಯಬೇಕೆಂದರು. 
      ಪ್ರೌಢಶಾಲೆಯ ಶಿಕ್ಷಕರಾದ ಎಸ್.ವಿ.ಜಾಮಗೊಂಡಿಯವರು ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ಇತಿಹಾಸ ವಿವರಿಸಿದರು.
     ಬಿಪಿಎಡ್  ಪ್ರಶಿಕ್ಷಣಾರ್ಥಿ ಮಂಜು. ಬಿರಾದಾರ ಅವರು ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಜೀ ಬಗ್ಗೆ ತಿಳಿಸಿದರು. 
      ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಚಾರ್ಯರುಗಳಾದ ಡಾ:ಎಚ್.ಬಿ.ನಡುವಿನಕೇರಿ, ಬೀಮಣ್ಣ  ಅರಕೇರಿ, ಎಸ್.ಎಮ್.ಖಿಂಡಿಮನಿ, ವಿರೇಶ ಕನಕ ವಿದ್ಯಾರ್ಥಿಗಳ ಹಾಜರಿದ್ದರು. 
     ಶಿಕ್ಷಕ ಬಿ.ಆಯ್.ಹಿರೇಹೊಳಿ. ನಿರೂಪಿಸಿ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.