ಡಾ.ಅಂಬೇಡ್ಕರ್ ಜಯಂತಿ ನಂತರ ಚುನಾವಣಾ ದಿನಾಂಕ ಘೋಷಿಸಿ ;ಸಿಎಂ ಸಿದ್ದರಾಮಯ್ಯಗೆ ಶ್ರೀಶೈಲ ಜಾಲವಾದಿ ಮನವಿ

ಸಿಂದಗಿ : ಏಪ್ರಿಲ್ ೧೪ ರಂದು ನಡೆಯುವ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಇದ್ದು, ಈ ಹಿನ್ನೆಲೆ ಏಪ್ರಿಲ್ ನಂತರ ಬರುವ ತಿಂಗಳಲ್ಲಿ ಚುನಾವಣೆ ಘೋಷಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹುಜನ ದಲಿತ ಸಂಘರ್ಷ ಸಮಿತಿ (ಆರ್ ಎಮ್ ಏನ್ ರಮೇಶ್ ಬಣದ) ವಿಜಯಪುರ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಶೈಲ ಜಾಲವಾದಿ ಅವರು ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಪಂಚಾಯತಿಯಿAದ ಹಿಡಿದು ಪಾರ್ಲಿಮೆಂಟ್ ನವರಿಗೆ ಭವ್ಯ ಭಾರತದ ಭವಿಷ್ಯವನ್ನೇ ಬರೆದಂತಹವರು ಯಾರಾದರೂ ಇದ್ದರೆ ಒಬ್ಬರೇ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು. ಭಾರತದ ಭಾಗ್ಯವಿಧಾತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದು ಅಂದರೆ ದೇಶದ ಬಗ್ಗೆ ಮಾತನಾಡುವುದು ಅಂತ ಅರ್ಥ. ಡಾ.ಬಾಬಾ ಸಾಹೇನ ಅಂಬೇಡ್ಕರ್ ಅಂದರೆ ದೇಶ. ಹಾಗಾಗಿ ಪ್ರತಿ ವರ್ಷ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಸಮಯದಲ್ಲಿ ಚುನಾವಣೆಗಳು ಘೋಷಣೆಯಾಗುತ್ತಿದ್ದು ಸರ್ಕಾರದ ಸುತ್ತೋಲೆ ಬರುವುದರಿಂದ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿಯನ್ನು ಸರ್ಕಾರ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಬರೆದಂತ ಸಂವಿಧಾನದ ಪೀಠಿಕೆ ಬಗ್ಗೆ ಜನತೆಗೆ ತಿಳಿಹೇಳುವುದರ ಮೂಲಕ ಜಾಗೃತಿಯನ್ನು ಮೂಡಿಸಿದ್ದೀರಿ. ತಮಗೆ ಕೋಟಿ ಕೋಟಿ ಭೀಮ ನಮನಗಳು. ಆದರೆ ನೀತಿ ಸಂಹಿತೆಯನ್ನು ಏಪ್ರಿಲ್ ತಿಂಗಳ ನಂತರ ಘೋಷಿಸಿದರೆ ಜಿಲ್ಲಾಡಳಿತ ತಾಲೂಕಾಡಳಿತ ಅಧಿಕಾರಿಗಳು ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಬಹುದೊಡ್ಡ ಯಶಸ್ವಿ ಕಾರ್ಯಕ್ರಮ ಆಗುತ್ತದೆ. ಏಕೆಂದರೆ ಈ ಬಾರಿಯೂ ಸರ್ಕಾರ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯ ಚುನಾವಣೆ ಘೋಷಣೆ ಮಾಡುವ ಸಾಧ್ಯತೆಗಳು ಕಂಡುಬರುತ್ತಿದ್ದು. ಡಾ.ಅಂಬೇಡ್ಕರ್ ಅವರ ಜಯಂತಿ ಏಪ್ರಿಲ್ ೧೪ ರಂದು ಈ ತಿಂಗಳು ಮುಗಿಯುವವರೆಗೂ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಯ ಚುನಾವಣೆ ಘೋಷಣೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಬಹುಜನ ದಲಿತ ಸಂಘರ್ಷ ಸಮಿತಿ (ಆರ್ ಎಮ್ ಏನ್ ರಮೇಶ್ ಬಣದ) ವಿಜಯಪುರ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಶೈಲ ಜಾಲವಾದಿ, ಜಿಲ್ಲಾಧ್ಯಕ್ಷ ರಾಘವೇಂದ್ರ ಗುಡಿಮನಿ, ಪ್ರದೀಪ್ ಮಲ್ಲಾರಿ, ಪ್ರಕಾಶ್ ತಳಕೇರಿ, ಕಾಮೇಕ್ಷ ಭಜಂತ್ರಿ, ಅನಿಲ್ ಕಲ್ಮಡಿ, ಶಿವಕುಮಾರ್, ಬಸವರಾಜ್ ಅರುಣ್ ಕುಮಾರ್ ಶಿಂಗೆ, ಶ್ರೀಮತಿ ಶಿವಗಂಗಾ ಕಟ್ಟಿಮನಿ, ಶರಣು ಕಡಿ, ಅಜಿತ್ ಮುಲ್ಲಾ, ಅಮೋಗಿ ಡವಳಾರ, ಸಂತೋಷ್ ಮುನಿಸಿ, ರಮೇಶ್ ಒತಿಹಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.