ಶಿಕ್ಷಣ ನೀಡುವುದು ಇಲಾಖೆಯ ಆದ್ಯ ಕರ್ತವ್ಯ : ಬಿಇಓ ಯಡ್ರಾಮಿ

Jan 31, 2025 - 19:21
 0
ಶಿಕ್ಷಣ ನೀಡುವುದು ಇಲಾಖೆಯ ಆದ್ಯ ಕರ್ತವ್ಯ :  ಬಿಇಓ ಯಡ್ರಾಮಿ
ಸಿಂದಗಿ:  ವಿಶೇಷ ಚೇತನ ಮಕ್ಕಳ ಬಗ್ಗೆ ಪೋಷಕರ ಮತ್ತು ಸಮುದಾಯದ ಪಾತ್ರದೊಂದಿಗೆ ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಇದು ಜಾತಿ, ಲಿಂಗ ಭೇದವಿಲ್ಲದೆ  ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡುವುದು ಸರ್ಕಾರದ ಮತ್ತು ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಎಂದು  ಬಿಇಓ ಮಹಾಂತೇಶ ಬಿ.ಯಡ್ರಾಮಿ ಹೇಳಿದರು.
ಪಟ್ಟಣದ ಬಿಆರ್‌ಸಿ ಸಭಾಭವನದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳು,  ಎಲ್ಲಾ ಇ.ಸಿ.ಓ, ಬಿ.ಆರ್. ಪಿಬಿಐಇಆರ್‌ಟಿ ಸಿಆರ್‌ಪಿ ರವರಿಗೆ ಹಮ್ಮಿಕೊಂಡ ವಿಶೇಷ ಚೇತನ ಮಕ್ಕಳ ಪರಿಸರ ನಿರ್ಮಾಣ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
 
ವಿಶೇಷ ಚೇತನ ಮಕ್ಕಳ ಬಗ್ಗೆ ಶಿಕ್ಷಕರು ಪಾಲಕರು ಹಾಗೂ ಸಮುದಾಯದವರ ಲ್ಲರಲ್ಲಿ ವಿಶೇಷ ಕಾಳಜಿ ಇರಬೇಕು, ಅವರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಕೊಟ್ಟು ಸಾಮಾನ್ಯ ಮಕ್ಕಳ ಜೊತೆ ಬೆರೆಯುವಂತೆ ಮಾಡಬೇಕು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದು ಅಗತ್ಯ ಸಾಧನ ಸಲಕರಣೆಗಳನ್ನು ಪೂರೈಸುವಂತೆ ಮಾಡಬೇಕು, ಮಗುವಿನ ಹೆಸರನ್ನು ಬಿಟ್ಟು ಅನ್ವರ್ಥಕ ನಾಮಗಳಿಂದ ಕರೆಯಬಾರದು, ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿಶೇಷ ಚೇತನ ಮಕ್ಕಳಿಗೆ ಸೂಕ್ತ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ  ಎಂದು ಅವರು ಹೇಳಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಐ ಎಸ್ ಟಕ್ಕೆ ಮಾತನಾಡಿ ವಿಶೇಷ ಚೇತನ ಮಕ್ಕಳು ಅಗತ್ಯ ಸಾಧನ ಸಲಕರಣೆಗಳೊಂದಿಗೆ ಶಾಲೆಗೆ ಹಾಗೂ ಸಂಪನ್ಮೂಲ ಕೇಂದ್ರಕ್ಕೆ ಹಾಜರಾಗಲು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಬಿ ಬಿ ಪಾಟೀಲ, ಎ ಎಸ್ ಯತ್ನಾಳ, ಸಾಹೇಬಗೌಡ ಬಿರಾದಾರ, ಜಗದೀಶ ಅಲ್ದಿಮಠ, ಯಶವಂತ್ರಾಯಗೌಡ ಬಿರಾದಾರ. ವ್ಹಿ ಡಿ ಬಮ್ಮನಳ್ಳಿ, ಎಸ್ ಎಸ್ ಗಂಗನಳಿಮಠ, ಎ ಪಿ ಸೋನಾಳ, ಸಿಆರ್‌ಪಿ ಸೋಮೇಶ ಪಾಟೀಲ, ರಾಜುಗೌಡ ಬೂಸನೂರ , ಶರಣು ಚಟ್ಟಿ , ಚೌಧರಿ, ಗುಲಾಬ ನಧಾಪ  ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.