ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ : ಡಾ.ಚೇತನ

Jan 30, 2025 - 22:55
Jan 31, 2025 - 00:14
 0
ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ : ಡಾ.ಚೇತನ

ಸಿಂದಗಿ : ಮಕ್ಕಳಲ್ಲಿ ಸರಿಯಾದ ಬೆಳವಣಿಗೆ ಆಗಬೇಕಾದರೆ ೫ ಪಂಚೇAದ್ರಿಯಗಳ ಸರಿಯಾದ ಬೆಳವಣಿಗೆ ಆಗಬೇಕು. ಇದಕ್ಕೆ ಪೂರಕವಾಗಿ ಪೋಷಕರು ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡಬೇಕು ಎಂದು  ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞರಾದ ಡಾ. ಚೇತನ ಹೇಳಿದರು.                 

ಗುರುವಾರ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಮತ್ತು ಅಸ್ಟರ್ ಡಿ ಎಮ್ ಫೌಂಡೇಷನ್ ಇವರ ಸಹಯೋಗದೊಂದಿಗೆ ಸಂಗಮ ಸಂಸ್ಥೆಯಲ್ಲಿ ವ್ಹೀಲ್‌ಚೆರ್ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.            

ಜಂಕ್ ಆಹಾರ ಕೊಡಬಾರದು, ಮೊಬೈಲನ್ನು ಕೊಡಬಾರದು ಮತ್ತು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಬೇಕು ಎಂದರು.            

ರೋನಾಲ್ ಅಸ್ಟರ್ ಡಿ ಎಮ್ ಫೌಂಡೇಷನ್ ಕೊಚ್ಚಿ ಮಾತನಾಡಿ ಸಿ.ಎಸ್.ಆರ್ ನಿಧಿಯಿಂದ ಬಿಜಾಪುರ ಸಿ.ಎನ್.ಎಫ್.ಇ ಸಂಸ್ಥೆಯ ೨೬ ವಿಶೇಷ ಚೇತನರಿಗೆ, ದೇವರ ಹಿಪ್ಪರಗಿ ಜೆ.ಎಂ.ಜೆ ಸಂಸ್ಥೆಯ ೫ ವಿಶೇಷ ಚೇತನರಿಗೆ ಮತ್ತು ಸಂಗಮ ಸಂಸ್ಥೆಯ ೧೯ ವಿಶೇಷ ಚೇತನರಿಗೆ ವ್ಹೀಲ್ ಚೇರಗಳು ಮತ್ತು ೨೦೦೦ ಸಸಿಗಳನ್ನು ನೀಡಿದರು.         

ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ನಿರ್ದೇಶಕÀ ಫಾದರ್. ಸಂತೋಷ್  ಮಾತನಾಡಿ ಅಸ್ಟರ್ ಡಿ ಎಮ್ ಸಂಸ್ಥೆಗೆ ಫಲಾನುಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.     

ಕಾರ್ಯಕ್ರಮದಲ್ಲಿ ನವೀನ್ ಸೇಲ್ಸ್ ಡಿಪಾರ್ಟ್ಮೆಂಟ್, ಮಹಮ್ಮದ್ ರಿಜ್ವಾನ್ ಮಾರ್ಕೆಟಿಂಗ್, ವಿಕ್ರಮ್ ಸಿ.ಎಸ್.ಆರ್ ಉಸ್ತುವಾರಿ, ವಿಶೇಷ ಚೇತನರು ಮತ್ತು ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.                 

ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಮೂಲಕ ಪ್ರಾರಂಭಿಸಲಾಯಿತು.  ವಿಜಯ್ ಬಂಟನೂರು ನಿರೂಪಿಸಿದರು, ಮಹೇಶ್ ಚವಾಣ್ ಸ್ವಾಗತಿಸಿದರು, ಬಸವರಾಜ್ ಬಿಸನಾಳ ವಂದಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.