ನುಡಿದಂತೆ ನಡೆದ ಶಾಸಕ ಅಶೋಕ ಮನಗೂಳಿ

ಸಿಂದಗಿ: ತಾಲೂಕಿನ ಬಂದಾಳ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಗ್ರಾಮಗಳ ಜನ ಸಂಪರ್ಕ ಸಭೆ ಆಯೋಜಿಸಿ ಗ್ರಾಮದ ಜನರ ಹಾಗೂ ಸಾರ್ವಜನಿಕವಾಗಿ ಅಹವಾಲು ಸ್ವೀಕರಿಸಿಕೊಂಡು ತದನಂತರ ೧೫ ದಿನಗಳ ಒಳಗೆ ಕೆಲಸವಾಗಬೇಕು ಎಂಬುದು ಶಾಸಕ ಅಶೋಕ ಎಮ್ ಮನಗೂಳಿ ಅವರ ನುಡಿಯಾಗಿತ್ತು.
ಅಂದು ಬಂದಾಳ ಗ್ರಾಮದಲ್ಲಿ ಶಾಸಕರ ಜನ ಸಂಪರ್ಕ ಸಭೆಯಲ್ಲಿ ಓತಿಹಾಳ ಸರ್ಕಾರಿ ಶಾಲೆಯ ಬೇಡಿಕೆಗಳ ಪಟ್ಟಿಯನ್ನು ಶಾಸಕರ ಮುಂದೆ ಶಾಲೆಯ ಮುಖ್ಯ ಗುರು ಜಿ ಎನ್ ನಡಕೂರ ಹಾಗೂ ಮಾಜಿ ಎಸ್‌ಡಿಎಂಸಿ ಅಧ್ಯಕ್ಷ, ಪ್ರಗತಿ ಸಂಘದ ಸದಸ್ಯ ಶಿವಾನಂದ ಸಾಲಿಮಠ ಅವರು ಗ್ರಾಮದ ಸರ್ಕಾರಿ ಶಾಲೆಯ ಶಾಲೆಯ ಸುಧಾರಣೆ ಬಗ್ಗೆ ವಿನಂತಿಸಿಕೊAಡಾಗ ಶಾಸಕರು ಸ್ವಲ್ಪ ದಿನಗಳ ಸಮಯ ನೀಡಿ ನಿಮ್ಮ ಶಾಲೆಗೆ ಬೇಕಾಗಿರುವ ಎಲ್ಲಾ ಮೂಲಸೌಕರ್ಗಳನ್ನು ಒಂದೊAದಾಗಿ ಒದಗಿಸುವೆನೆಂದು ಭರವಸೆ ನೀಡಿದ್ದರು.
ಹೇಳಿದ ಎರಡೇ ದಿನಗಳಲ್ಲಿ ಶಾಲೆ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದ್ದ ಹಾಗೂ ಶಾಲೆಯ ಅಂಗಳದಲ್ಲಿ ಎರಡು ಬಾರಿ ತುಂಡಾಗಿ ಬಿದ್ದ ಹಳೆಯ ವಿದ್ಯುತ್ ತಂತಿ ಮತ್ತು ಕಂಬಗಳನ್ನು ಶಾಲೆಯ ಆವರಣದಲ್ಲಿ ದೇವರಹಿಪ್ಪರಗಿ ಕೆಪಿಟಿಸಿಎಲ್ ಅಧಿಕಾರಿಗಳಿಂದ ತಂತಿ ಹೊರ ಹಾಕಿಸಿದರು.
ಇಂದು ಶಾಸಕರು ಶಾಲೆಯ ಮೂರು ಕೋಣೆಗಳನ್ನು ದುರಸ್ತಿ ಮಾಡಲು ಶಾಸಕರ ಅನುದಾನದಲ್ಲಿ ಇಂದು ಕೆಲಸವನ್ನು ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರ ಕಾರ್ಯವನ್ನು ಶಾಲೆಯ ಮುದ್ದು ಮಕ್ಕಳು ಸಮಸ್ತ ಗ್ರಾಮಸ್ಥರು ಶಾಸಕರ ಈ ನಡೆಯನ್ನು ಕಂಡು ಮುಕ್ತ ಕಂಠದಿAದ ಹೊಗಳಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.