ರೈತರು ಸರ್ಕಾರದ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳಿ : ಶಾಸಕ ಅಶೋಕ ಮನಗೂಳಿ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಸಿಂದಗಿ: ಸರಕಾರ ಹಲವಾರು ಯೋಜನೆಗಳ ಮೂಲಕ ರೈತರಿಗೆ ಅನೇಕ ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಅವುಗಳಲ್ಲಿ ಮುಖ್ಯವಾಗಿ ಕಬ್ಬ ಬೆಳೆಗಾಋ ರೈತರಿಗೆ ಕಬ್ಬಿನ ಕಟಾವಿನದೇ ದೊಡ್ಡ ಸಮಸ್ಯೆ. ಟ್ರಾö್ಯಕ್ಟರ್ ಮಾಲೀಕರು ನೆರೆ ರಾಜ್ಯಗಳಿಂದ ಕಾರ್ಮಿಕರಿಗೆ ಲಕ್ಷಾಂತರ ರೂಪಾಯಿ ಮುಂಗಡ ಕೊಟ್ಟು ಕರೆತರುತ್ತಾರೆ. ಅವರಲ್ಲಿ ಕೆಲವರು ಹಣ ತೆಗೆದುಕೊಂಡು ಟ್ರಾö್ಯಕ್ಟರ್ ಮಾಲೀಕರಿಗೆ ಚಳ್ಳೆ ಹಣ್ಣು ತಿನಿಸುತ್ತಾರೆ ಎಂದು ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ೨೦೨೪-೨೫ನೆಯ ಸಾಲಿನ ಕೃಷಿ ಇಲಾಕೆಯ ವತಿಯಿಂದ ಹೈಟೆಕ್ ಹಾರ್ವೇಸ್ಟರ್ ಯೋಜನೆಯ ಅಡಿಯಲ್ಲಿ ಕಬ್ಬು ಕಟಾವ್ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿದ ಅವರು, ನಮ್ಮ ತಂದೆಯವರ ಅವಧಿಯ ೨೦೨೧೮-೧೯ನೆಯ ಸಾಲಿನಲ್ಲಿ ೨ ಕಬ್ಬು ಕಟಾವ ಯಂತ್ರಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗಿತ್ತು. ಇಂದು ಮತ್ತೆ ನನ್ನ ಅವಧಿಯಲ್ಲಿ ರೈತರಿಗೆ ಮೂರು ಕಬ್ಬ ಕಟಾವ್ ಯಂತ್ರಗಳನ್ನು ರೈತರಿಗೆ ಒದಗಿಸುತ್ತಿರುವುದು ಅತೀ ಹೆಮ್ಮೆಯ ಸಂಗತಿಯಾಗಿದೆ. ಇದರಿಂದಾಗಿ ಹಲವಾರು ಟ್ರಾö್ಯಕ್ಟರ್ ರೈತ ಮಾಲೀಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಕಬ್ಬು ಕಟಾವಾಗದೇ ಕಬ್ಬಿನ ಇಳುವರಿಯೂ ಕಡಿಮೆಯಾಗಿ ರೈತರು ಸಹ ಸಂಕಷ್ಟ ಅನುಭವಿಸುವಂತಾಗಿದೆ. ಇವೆಲ್ಲ ಸಮಸ್ಯೆಗಳನ್ನು ಮನಗಂಡು ಸರಕಾರ ರೈತರಿಗೆ ಸು.೪೦ಲಕ್ಷ ರೂ. ಸಬ್ಸಿಡಿ ದರದಲ್ಲಿ ಕಟಾವ ಯಂತ್ರ ಒದಗಿಸುತ್ತಿದೆ. ಇದರ ಸದುಪಯೋಗವನ್ನು ಎಲ್ಲ ರೈತರು ಪದೆಡುಕೊಳ್ಳಬೇಕು ಎಂದರು.
ಈ ವೇಳೆ ಕೃಷಿ ಅಧಿಕಾರಿ ಹೆಚ್.ವೈ.ಸಿಂಗೆಗೋಳ ಮಾತನಾಡಿ, ಬ್ಯಾಂಕಿನ ಸಾಲದ ಸೌಲಭ್ಯದೊಂದಿಗೆ ಸಬ್ಸಿಡಿ ದರದಲ್ಲಿ ಸಾಮಾನ್ಯ ವರ್ಗದ ರೈತರಿಗೆ ರೂ.೪೦ಲಕ್ಷ, ಎಸ್.ಸಿ/ಎಸ್‌ಟಿ ವರ್ಗದ ರೈತರಿಗೆ ರೂ.೫೦ಲಕ್ಷ, ಹಾಗೂ ಜಂಟಿಯಾಗಿ ತೆಗೆದುಕೊಳ್ಳುವವರಿಗೆ ಸಾಮಾನ್ಯ ಹಾಗೂ ಮೀಸಲಾತಿ ಅಡಿಯಲ್ಲಿ ೨೦ಲಕ್ಷ ರೂ. ಸಬ್ಸಿಡಿ ಇರುತ್ತದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ೨೦೨೪-೨೫ನೆಯ ಸಾಲಿನ ಕೃಷಿ ಇಲಾಕೆಯ ವತಿಯಿಂದ ಹೈಟೆಕ್ ಹಾರ್ವೇಸ್ಟರ್ ಯೋಜನೆಯ ಅಡಿಯಲ್ಲಿ ಕಬ್ಬು ಕಟಾವ್ ಯಂತ್ರವನ್ನು ಶಾಸಕ ಅಶೋಕ ಮನಗೂಳಿ ಆಹೇರಿ ಗ್ರಾಮದ ರೈತ ಮೈಬೂಬಸಾಬ ರಂಜುಣಗಿ ಅವರಿಗೆ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಕೃಷಿ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ, ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಎಸ್‌ಬಿಐ ವ್ಯವಸ್ಥಾಪಕ ರಾಹುಲ್ ಮಿತ್ತಲ್ಲ, ಅನೀಲಕುಮಾರ ವಾಲೀಕಾರ, ವಾಯ್.ಸಿ.ಮಯೂರ, ಭಾಗಪ್ಪಗೌಡ ಆಹೇರಿ, ಬಸಯ್ಯ ಹಿರೇಮಠ, ವ್ಹಿ.ಬಿ.ಕುರಡೆ, ಶಿವಾನಂದ ಹೂವಿನಹಳ್ಳಿ, ಅಬ್ದುಲ್‌ರಜಾಕ ಮೋಮಿನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ತಾಲೂಕಿನ ರೈತರು ಇದ್ದರು.