ಶಿವಸಿಂಪಿ ಸಮಾಜದ ಚಟುವಟಿಕೆಗಳಿಗೆ ಪುರಸಭೆಯಿಂದ ಸಹಕಾರ : ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಭರವಸೆ

Oct 1, 2024 - 09:55
 0
ಶಿವಸಿಂಪಿ ಸಮಾಜದ ಚಟುವಟಿಕೆಗಳಿಗೆ ಪುರಸಭೆಯಿಂದ ಸಹಕಾರ : ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಭರವಸೆ
ಶಿವದಾಸಿಮಯ್ಯ ಶಿವಸಿಂಪಿ ಸಮಾಜ ವಿಕಾಸ ಸಂಘ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ
ಶಿವಸಿಂಪಿ ಸಮಾಜದ ಚಟುವಟಿಕೆಗಳಿಗೆ ಪುರಸಭೆಯಿಂದ ಸಹಕಾರ : ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಭರವಸೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 
ಸಿಂದಗಿ: ಶಿವದಾಸಿಮಯ್ಯ ಶಿವಸಿಂಪಿ ಸಮಾಜದ ಕಾರ್ಯ ಚಟುವಟಿಕೆಗಳಿಗೆ ಪೂರಕವಾಗುವಂತೆ ಪುರಸಭೆ ವತಿಯಿಂದ ಸಹಕಾರ ನೀಡಲಾ ಗುವುದು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಎಸ್ ಬಿರಾದಾರ ಭರವಸೆ ನೀಡಿದರು.
ಪಟ್ಟಣದ ಊರನ ಹಿರಿಯ ಮಠದ ಶಿವಾನುಭವ ಮಂಟಪದಲ್ಲಿ ಶಿವದಾಸಿಮಯ್ಯ ಶಿವಸಿಂಪಿ ಸಮಾಜ ವಿಕಾಸ ಸಂಘ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಊರನ ಹಿರಿಯ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕುಟುಂಬದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದ ಕಾರಣಕ್ಕಾಗಿಯೇ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಲಿವೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಸುವ ಸಂಸ್ಕಾರ ನೀಡುವುದು ತುಂಬಾ ಅಗತ್ಯ ಎಂದರು. ಬಸವಪೂರ್ವ ಕಾಲದ ವಚನಕಾರ ಶಿವದಾಸಿಮಯ್ಯನವರ ವಚನಗಳ ಕುರಿತು ಅಧ್ಯಯನ ನಡೆಯಬೇಕಿದೆ. ಶಿವಸಿಂಪಿ ಸಮಾಜ ಸಣ್ಣದು ಎಂಬ ಕೀಳರಿಮೆ ಬೇಡ ಎಂದರು. 
ಶಿವಸಿಂಪಿ ಸಮಾಜದ ಹಿರಿಯರಾದ ಬಂಡೆಪ್ಪ ಲೋಣಿ ಮಾತನಾಡಿ, ಶಿವಸಿಂಪಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಲೋಣಿ ಬಡಾವಣೆಯಲ್ಲಿ ದಿವಂಗತ ಚಂದ್ರಶೇಖರ ಲೋಣಿಯವರು ಕಡಿಮೆ ದರದಲ್ಲಿ ನಾಲ್ಕು ಪ್ಲಾಟ್‌ಗಳು ಹಾಗೂ ಒಂದು ಪ್ಲಾಟ್ ಉಚಿತವಾಗಿ ನೀಡಿದ್ದಾರೆ. ಶೀಘ್ರವೇ ಸಮುದಾಯ ಭವನ ನಿರ್ಮಾಣಕ್ಕಾಗಿ ಸಮಾಜದವರು ಆರ್ಥಿಕ ಸಹಾಯ ನೀಡಬೇಕು ಎಂದು ಮನವಿ ಮಾಡಿದರು.
ಶಿವದಾಸಿಮಯ್ಯ ಶಿವಸಿಂಪಿ ಸಮಾಜ ವಿಕಾಸ ಸಂಘ ತಾಲ್ಲೂಕು ಶಾಖೆಯ ಅಧ್ಯಕ್ಷ ಡಾ.ವಿಶ್ವಾರಾಧ್ಯ ಶಿವಸಿಂಪಗೇರ, ಶಿವಸಿಂಪಿ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ ಸಿಂದಗಿ, ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಬಾಬು ಶಿವಸಿಂಪಗೇರ, ವಿಜಯಲಕ್ಷ್ಮೀ ಲೋಣಿ, ಗುರುಪಾರ ಲೋಣಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ೨೦ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಪ್ರಭುಲಿಂಗ ಲೋಣಿ, ಮಹಾದೇವ ಲೋಣಿ, ಗುರುಪಾದ ಲೋಣಿ, ಈರಣ್ಣ ಶಿವಸಿಂಪಿಗೇರ ದಂಪತಿಗಳನ್ನು ಗೌರವಿಸಲಾಯಿತು.
ಶಿವಸಿಂಪಿ ಸಂಘದ ಗೌರವಾಧ್ಯಕ್ಷ ಅಶೋಕ ಲೋಣಿ, ಕೋಶಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕಾರ್ಯದರ್ಶಿ ಮಲ್ಲು ಶಿವಸಿಂಪಿಗೇರ, ಸಹಕಾರ್ಯದರ್ಶಿ ವಿಶ್ವನಾಥ ಶಿವಸಿಂಪಗೇರ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.