ಶಿಕ್ಷಕಿ ಶೈಲಾ ಗೊಂಗಡಿಗೆ ರಾಜ್ಯಮಟ್ಟದ ಪ್ರಶಸ್ತಿ

Oct 1, 2024 - 21:53
 0
ಶಿಕ್ಷಕಿ ಶೈಲಾ ಗೊಂಗಡಿಗೆ ರಾಜ್ಯಮಟ್ಟದ ಪ್ರಶಸ್ತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 


ತಾಳಿಕೋಟೆ : ತಾಳಿಕೋಟೆ ತಾಲೂಕಿನ ದೇವರ ಹುಲಗಬಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರಾಗಿ ೨೫ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶೈಲಾ ಗೊಂಗಡಿ ಅವರಿಗೆ ಪ್ರಾಮಾಣಿಕ ಮನಸುಗಳ ಸಂಗಮವಾದ ಬೆಂಗಳೂರಿನ “ಜನಸಿರಿ ತಂಡ(ರಿ).” ವತಿಯಿಂದ ಏರ್ಪಡಿಸಲಾದ ರಾಜ್ಯಮಟ್ಟದ ಶಿಕ್ಷಕರ ಹಬ್ಬ ೨೦೨೪ನೇ ಸಾಲಿನ ಅಂಗವಾಗಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅತ್ಯತ್ತಮ ಶಿಕ್ಷಕಿ ಎಂದು ಪ್ರಶಸ್ತಿ ಪ್ರಧಾನ ಮಾಡಲಾಗಿದೆ.             

ಇತ್ತೀಚಿಗೆ ಸಪ್ಟೆಂಬರ ೨೮ರಂದು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಸ್ಥಳದ ಪುರಭವನ(ಟೌನ್ ಹಾಲ್)ನಲ್ಲಿ ಜರುಗಿದ ಈ ಸಮಾರಂಭದಲ್ಲಿ ಜನಸಿರಿ ತಂಡದ ಮುಖ್ಯಸ್ಥರಾದ ನಾಗಲೇಖ ಒಳಗೊಂಡು ಆ ತಂಡದಿAದ ಸನ್ಮಾನ ಸ್ವೀಕರಿಸಿದ ಶ್ರೀಮತಿ ಶೈಲಾ ಗೊಂಗಡಿ ಅವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಆಟೋಪಾಠ,ಸಂಗೀತ ಶಿಕ್ಷಣ ಅಲ್ಲದೇ ಪ್ರತಿಭಾ ಕಾರಂಜಿ ಕುರಿತು ಮಕ್ಕಳಿಗೆ ಜ್ಞಾನಮೂಡಿಸುವ ಕಾರ್ಯ ಕೈಗೊಂಡು ಹೆಸರು ಪಡೆಯುವುದರೊಂದಿಗೆ ಕ್ರೀಯಾಶೀಲ ಶಿಕ್ಷಕಿಯಾಗಿ ಸೇವೆಗೆ ಮುಂದಾಗಿದ್ದುದ್ದನ್ನು ಗಮನಿಸಿದ ರಾಜ್ಯಮಟ್ಟದ ಜನಸಿರಿ ತಂಡ ಆಯೋಜಿಸಿದ ಶಿಕ್ಷಕರ ಹಬ್ಬ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕಿ ಎಂದು ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನಮಾಡಿ ಗೌರವಿಸಲಾಗಿದೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.