ಬಿಜೆಪಿ ಪಕ್ಷದ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಿಳಿಸಿ : ಭೂಸನೂರ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಮೋರಟಗಿ : ಕೇವಲ ಮುಖಂಡರಿAದಷ್ಟೇ ಪಕ್ಷ ಬೆಳೆಯಲು ಸಾಧ್ಯವಿಲ್ಲ ಯುವಕರು ಭೂತ್ ಮಟ್ಟದಲ್ಲಿ ಸಂಚರಿಸಿ ಪಕ್ಷದ ಸಾಧನೆಗಳು ಸಾರ್ವಜನಿಕರಿಗೆ ತಿಳಿಸಿದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನ ಮಾಡಬೇಕು ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಗ್ರಾಮದಲ್ಲಿ ರವಿವಾರ ಬಿಜೆಪಿ ಸಂಘಟನಾ ಪರ್ವ ಮಹಾ ಸಂಪರ್ಕ ಅಭಿಯಾನ ಸದಸ್ಯತಾ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ಮೋದೀಜಿ ಅವರು ಜನಪರ ರೈತಪರ,ಹತ್ತು ಹಲವಾರು ಹೊಸ ಹೊಸ ಯೋಜನೆಗಳನ್ನು ತರುವ ಮೂಲಕ ಬಲಿಷ್ಠ ರಾಷ್ಟ್ರಗಳು ಭಾರತದತ್ತ ಮುಖಮಾಡಿ ನೋಡುವ ಹಾಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದ್ದಾರೆ ಬಿಜೆಪಿ ಪಕ್ಷ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ತಾವೆಲ್ಲರೂ ಭೂತ ಮಟ್ಟದಲ್ಲಿ ಸಂಚರಿಸಿ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಸದಸ್ಯರನ್ನು ಮಾಡಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸಂಘಟನಾ ಪರ್ವ ಮಹಾ ಸಂಪರ್ಕ ಅಭಿಯಾನ ಸದಸ್ಯತಾ ಅಭಿಯಾನದ ಕಾರ್ಯಕ್ರಮದಲ್ಲಿ ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಡಂಬಳ, ಮಾಜಿ ತಾ ಪಂ ಸದಸ್ಯ ಮಡಿವಾಳಪ್ಪ ಬೋನಾಳ, ಜಿ. ಕೆ. ನೆಲ್ಲಗಿ, ಮಲ್ಲನಗೌಡ ಬಿರಾದಾರ, ನಿಂಗಣ್ಣ ಅಗಸರ, ಸಿದ್ದನಗೌಡ ಗುತ್ತರಗಿ, ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.