ರಾಮಾಪೂರ ಶಾಲೆಗೆ ೧೨೦ ಕುರ್ಚಿ ಹಾಗೂ ೨೦ ಟೇಬಲ್ ವಿತರಣೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಧಾರವಾಡ : ಪ್ಲೇಟಗಾರ್ಡ ಫಿಲ್ಟರ್ಸ್ ಪ್ರೈವೆಟ್ ಲಿಮಿಟೆಡ್ ಬೇಲೂರು ಕೈಗಾರಿಕಾ ಪ್ರದೇಶದ ಕಂಪನಿಯೂ ತನ್ನ ಸಿಎಸ್‌ಆರ್ ಅನುದಾನದ ಅಡಿಯಲ್ಲಿ ಧಾರವಾಡ ತಾಲೂಕಿನ ರಾಮಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ-ಕಲಿ ಕಾರ್ಯಕ್ರಮಕ್ಕೆ ೧೨೦ ಮಕ್ಕಳಿಗೆ ಸಹಾಯವಾಗಲೆಂದೂ ೧೨೦ ಕುರ್ಚಿ ಮತ್ತು ೨೦ ಟೇಬಲಗಳನ್ನು ವಿತರಿಸಲಾಯಿತು.
ಇತ್ತೀಚೆಗೆ ನಡೆದ ಹಸ್ತಾಂತರ ಕಾರ್ಯಕ್ರಮದಲ್ಲಿ ಕಂಪನಿಯ ಮುಖ್ಯಸ್ಥರಾದ ಪ್ರಕಾಶ ಮಾಯಾಚಾರಿ, ಮಾನವ ಸಂಪನ್ಮೂಲ ವಿಭಾಗದ ಸಂತೋಷ ಮುನವಳ್ಳಿ ಕಂಪನಿಯ ಸಿಬ್ಬಂದಿ, ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಎಫ್.ಜಿಲ್ಲೆನವರ ಮತ್ತು ಶಾಲೆಯ ಸಿಬ್ಬಂದಿ, ಎಸ್‌ಡಿಎಂಸಿ ಅಧ್ಯಕ್ಷರಾದ ಮಾದೇವಪ್ಪ ಕಲ್ಲಾಪೂರ, ಸದಸ್ಯರು ಹಾಗೂ ಗ್ರಾಮದ ಜನತೆ ಮತ್ತು ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.