ಸೆನ್ಸಾರ್ ಮುಗಿಸಿದ "ಆಪರೇಷನ್ ಡಿ" ತೆರೆಗೆ ಬರಲು ಸಿದ್ದ.

Jan 27, 2025 - 23:21
 0
ಸೆನ್ಸಾರ್ ಮುಗಿಸಿದ "ಆಪರೇಷನ್ ಡಿ" ತೆರೆಗೆ ಬರಲು ಸಿದ್ದ.

ಅದ್ವಿತ ಫಿಲಂ ಫ್ಯಾಕ್ಟರಿ  ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ ನಿರ್ಮಿಸಿರುವ ಹಾಗೂ ತಿರುಮಲೇಶ್ ವಿ ನಿರ್ದೇಶನದ "ಆಪರೇಶನ್ ಡಿ" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ನೀಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. 

 "ಆಪರೇಷನ್ ಡಿ" ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಮರ್ಡರ್ ಮಿಸ್ಟರಿ ಆದರೂ, ಒಂದು ಕಡೆ ರಕ್ತ ಕಾಣುವುದಿಲ್ಲ ಹಾಗೂ ಆಕ್ಷನ್ ಸನ್ನಿವೇಶಗಳಿಲ್ಲ. 2018 - 19 ರಲ್ಲಿ ಹುಟ್ಟಿದ ಈ ಕಾಲ್ಪನಿಕ ಕಥೆ, 2022 ರಲ್ಲಿ ಸಿನಿಮಾ ರೂಪ ಪಡೆದುಕೊಂಡಿತ್ತು. ನನ್ನ ಕಥೆಯನ್ನು ಸಿನಿಮಾವಾಗಿಸಲು ಕುಟುಂಬದವರು ಹಾಗೂ ಮಿತ್ರರು ಸಹಕಾರಿಯಾದರು. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ತಿರುಮಲೇಶ್ ವಿ ತಿಳಿಸಿದ್ದಾರೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ  ಸಂಗೀತ ನಿರ್ದೇಶಕಿಯಾಗಿ ವೇದಿಕ ಕಾರ್ಯ ನಿರ್ವಹಿಸಿದ್ದಾರೆ. ವೇದಿಕ, ಕೆಂಪಗಿರಿ ಹಾಗೂ ತಿರುಮಲೇಶ್ ಹಾಡುಗಳನ್ನು ಬರೆದಿದ್ದಾರೆ.   ವಿಕ್ರಮ್ ಶ್ರೀಧರ್ ಸಂಕಲನ,  ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ,   ಜೈಹರಿಪ್ರಸಾದ್ ನೃತ್ಯ ನಿರ್ದೇಶನ ಹಾಗೂ ತರ್ಮಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ  BGM ಮತ್ತು 5.1 ರಾಹುಲ್ ಅರ್ಜ ಕಲಾ ಅವರು ಅರ್ಜಕಲಾ ಸ್ಟುಡಿಯೋದಲ್ಲಿ ನೀಡಿದ್ದಾರೆ.

ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್, ಮಹೇಶ್ ಎಸ್ ಕಲಿ, ಶ್ರೀಧರ್, ಪೃಥ್ವಿ ಬನವಾಸಿ, ಶಿವಾನಂದ್,  ಸಂಚಯ ನಾಗರಾಜ್, ವೆಂಕಟಾಚಲ,  ಶಿವಮಂಜು,  ಕ್ರೇಜಿ ನಾಗರಾಜ್,  ಶಿವು ಜಂಬಲಗಿ  ಹಾಗೂ ಮುಂತಾದವರು ತಾರಾಬಳಗದಲ್ಲಿದ್ದಾರೆ. 

  AA Studios ಕನ್ನಡ youtube Channel ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಹಾಗೂ ಟೀಸರ್ ಈಗಾಗಲೇ ಎಲ್ಲರ ಮನ ಗೆದ್ದಿದೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.