ನಿಂಬರ್ಗಾದಲ್ಲಿ ಕಲುಷಿತ ನೀರು ಸೇವಿನೆ ೬೦ಕ್ಕೂ ಅಧಿಕ ಜನ ಅಸ್ವಸ್ಥ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮದ ಭೋವಿ ಸಮಾಜ ಬಡಾವಣೆ ಯಲ್ಲಿ ಕಲುಷಿತ ನೀರು ಕುಡಿದು ೬೦ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಬೆಳಗ್ಗೆ ಓವರ್ ಹೆಡ್ ನೀರಿನ ಟ್ಯಾಂಕ್‌ದಿAದ ಬಡಾವಣೆಗೆ ಕುಡಿ ಯುವ ನೀರು ಸರಬರಾಜು ಮಾಡಲಾಗಿತ್ತು. ಕಲುಶಿತ ನೀರು ಕುಡಿದು ಕೇಲ ಸಮಯದಲ್ಲಿಯೇ ಏಕಾಏಕಿ ಗ್ರಾಮಸ್ಥರಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳಲು ಆರಂಭಿಸಿದೆ. ಅಸ್ವಸ್ಥರನ್ನು ತಕ್ಷಣ ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾ ಗುತ್ತಿದೆ. ಸದ್ಯ ಗ್ರಾಮಸ್ಥರು ಚೇತರಿಸಿಕೊಳ್ಳುತ್ತಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಗ್ರಾಮಸ್ಥರು ಅಸ್ವಸ್ಥಗೊಳ್ಳಲು ಮೂಲಕಾರಣ ಕಲುಶಿತ ನೀರು ಸೇವನೆ ಅನ್ನೋದು ಮೇಲ್ನೋಟಕ್ಕೆ ಕಂಡುಬAದಿದೆ. ಬಡಾವಣೆಗೆ ಸರಬರಾಜುವಾಗುವ ಓವರ್ ಹೆಡ್ ಟ್ಯಾಂಕ್ ಕಳೆದ ನಾಲೈಲೆದು ತಿಂಗಳಿನಿAದ ಸ್ವಚ್ಛಗೊಳಿಸಿಲ್ಲ. ಇದರಿಂದಾಗಿ ಕಸ ಕಡ್ಡಿ ಹುಳು ಮಿಶ್ರಿತ ನೀರು ಸರಬರಾಜು ಆಗಿದೆ. ಅದೆ ನೀರನ್ನು ಕುಡಿದಿದಕ್ಕೆ ಅವಘಡ ಸಂಭವಿಸಿದೆ. ಅಲ್ಲದೆ ಭಾನುವಾರ ಬೆಳಗ್ಗೆಯಿಂದ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಸಂಜೆಯಾದ್ರೂ ಕೂಡಾ ಗ್ರಾಮ ಪಂಚಾಯತಿ ಅಧಿಕಾ ರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಆಸ್ಪತ್ರೆಗೆ ಆಗಮಿಸಿ ಜನರ ಆರೋಗ್ಯ ವಿಚಾರಿಸಿಲ್ಲ ಎಂದು ಗ್ರಾಮ ಸ್ಥರು ಆಕ್ರೋಶ ವ್ಯಕ್ತ ಪಡಿಸಿದರು.
ಕುಡಿಯುವ ನೀರಿನಲ್ಲಿ ಬೇರೆ ನೀರು ಸೇರಿದ್ದರಿಂದ ನೀರು ಕಲುಷಿತವಾಗಿದೆ ಇದರ ಸೇವೆನೆಯಿಂದ ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ ತಕ್ಷಣ ಆಸ್ಪತ್ರಗೆ ಬಂದಿದ್ದರಿAದ ಸೂಕ್ತ ಚಿಕಿತ್ಸೆ ನೀಡಲಾಗಿದೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಇದರ ಬಗ್ಗೆ ಗ್ರಾಮಪಂಚಾಯಿತಿಗೆ ತಿಳಿಸಲಾಗಿದೆ.
-ಡಾ.ಇರ್ಫಾಲ್ ಅಲಿ ಆಡಳಿತ ವೈದ್ಯಾಧಿಕಾರಿ, ನಿಂಬರ್ಗಾ