ಅ.೩ರಂದು ಭೀಮಾಶಂಕರ ಮಹಾರಾಜರ ಜಾತ್ರಾ ಮಹೋತ್ಸವ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ನಿಡಗು0ದಿ; ಪಟ್ಟಣದಲ್ಲಿ ಎರಡು ದಿನಗಳು, ಭೀಮಾಶಂಕರ ಮಹಾರಾಜರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಲಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಿತಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಜಾತ್ರೆ ಅಂಗವಾಗಿ ಅ.೩ರಂದು ಸಂಜೆ ೬ಕ್ಕೆ ಅದ್ವಿಕಾ ಮೆಲೋಡಿಸ್ ಅವರಿಂದ ನೃತ್ಯೆ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮ ಎಂಪಿಎಸ್ ಶಾಲೆ ಆವರಣದಲ್ಲಿ ನಡೆಯಲಿದೆ. ಅ.೪ರಂದು ಬೆಳಿಗ್ಗೆ ಭೀಮಾಶಂಕರ ಮಹಾರಾಜರ ಗದ್ದುಗೆ ಲಿಂಗಾಭಿಷೇಕ ನಡೆಯಲಿದೆ. ನಂತರ ಮಹಾರಾಜರ ಬೆಳ್ಳಿ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ನಂತರ ಭೀಮಾಶಂಕರ ಮಹಾರಾಜರ ದೇವಸ್ಥಾನದಲ್ಲಿ ಸ್ಥಳೀಯ ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು, ಹಿಪ್ಪರಗಿ ಪ್ರಭು ಮಹಾರಾಜರು, ದುಂಡಪ್ರಭು ಆಶ್ರಮದ ಸಿದ್ರಾಮೇಶ್ವರ ಮಹಾರಾಜರು, ಪ್ರಕಾಶ ಮಹಾರಾಜರು, ಡಾ: ಪ್ರಕಾಶ ವಾಲಿ ಮಹಾರಾಜರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ವಿವಿಧ ಭಜನಾ ತಂಡಗಳಿAದ ಭಜನೆ ಕಾರ್ಯಕ್ರಮ ನಡೆಯಲಿದೆ.
ಅ.೫ರಂದು ಬೆಳಿಗ್ಗೆ ಪುಷ್ಪ ವೃಷ್ಟಿ ಮಂಗಲ ಕಾರ್ಯಕ್ರಮ, ನಂತರ ಮಹಾಪ್ರಸಾದ ನಡೆಯಲಿದೆ. ನಂತರ ಭಾರ ಎತ್ತುವ ಸ್ಪರ್ದೇಗಳು ಜರುಗಲಿವೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.