ನಾಗಠಾಣದಲ್ಲಿ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

Oct 4, 2024 - 09:00
 0
ನಾಗಠಾಣದಲ್ಲಿ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ: ಪೌರಾಣಿಕ ಹಾಗೂ ಇತಿಹಾಸ ಪ್ರಸಿದ್ಧ ಗ್ರಾಮದೇವತೆಯರಾದ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಗುರುವಾರದಂದು ಸಂಭ್ರಮದಿಂದ ಜರುಗಿತು. 
       ಸಾರವಾಡದ ಬಸವೇಶ್ವರ ಗೊಂಬೆ ಕುಣಿತ, ಅಜನಾಳದ ಕರಡಿ ಮಜಲು, ನಾಗಠಾಣ, ಗೂಗದಡ್ಡಿಯ ಡೊಳ್ಳು ಕುಣಿತ, ಅಥಣಿಯ ವಾದ್ಯಮೇಳ, ಗುಲಬರ್ಗಾದ ಪೋತರಾಜನ ಕುಣಿತ ಸೇರಿದಂತೆ ವಿವಿಧ ವಾದ್ಯವೈಭವ, ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಅಪಾರ ಭಕ್ತ ಸಮೂಹದೊಂದಿಗೆ ಜರುಗಿತು.
       ಮೆರವಣಿಗೆ ದಾರಿಯುದ್ದಕ್ಕೂ ಹೆಣ್ಣು ಮಕ್ಕಳು ದೇವಿಯರಿಗೆ ಉಡಿ ತುಂಬಿಸುವುದು, ಹಣ್ಣು-ಕಾಯಿ ನೈವೇದ್ಯ, ವಿವಿಧ ಸೇವೆ ಹರಕೆ ಕಾಣಿಕೆ ಸಮರ್ಪಣೆ ನಡೆಯಿತು.
         500ಕ್ಕೂ ಅಧಿಕ ಮಹಿಳೆಯರಿಂದ ಕುಂಭಮೇಳ ಜರುಗಿದ್ದು, ಜಾತ್ರೆಯ ವಿಶೇಷವಾಗಿತ್ತು. ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಅವರು ಬೆಳಿಗ್ಗೆ 9.30ಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಚಂದ್ರಶೇಖರ ಅರಕೇರಿ, ಪ್ರಕಾಶ ಲೋಣಿ, ಜಾತ್ರಾ ಕಮಿಟಿಯ ಅಧ್ಯಕ್ಷ ಕಲ್ಯಾಣಿ ಪತ್ತಾರ, ಉಪಾಧ್ಯಕ್ಷ ಸಿದ್ದಪ್ಪ ಶಿರಕನಹಳ್ಳಿ, ಗ್ರಾಮಸ್ತರಾದ ಅಶೋಕ ಕತ್ನಳ್ಳಿ, ಬಾಬು ಕತ್ನಳ್ಳಿ, ಬಸವರಾಜ ಹಳ್ಳಿ,ಪ್ರಭು ಹಂಡಿ, ಶ್ರೀಧರ ಬಡಿಗೇರ, ಸಿದ್ದು ಬಡಿಗೇರ, ಸುಭಾಷ ಪತ್ತಾರ, ಮೋನಪ್ಪ ಬಡಿಗೇರ, ಮಲಕಣ್ಣ ಹುಣಶ್ಯಾಳ, ಬಸವರಾಜ ಬಂಡೆ, ಪ್ರಕಾಶ ಹಡಪದ, ಕಾಶೀನಾಥ ಬಡಿಗೇರ,ಶರಣು ಬಗಲಿ,ಸಿದ್ಧಗೊಂಡ ರೋಳ್ಳಿ, ರೇವಣಸಿದ್ದ ಸಾರವಾಡ, ಸುರೇಶ ಹೋರ್ತಿ, ಭಗವಂತ ಬಡಿಗೇರ ,ರೇವಪ್ಪ ಹಚಡದ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.