ಸತ್ಯ ನುಡಿಯಿರಿ ಧರ್ಮದಿಂದ ನಡೆಯಿರಿ ಎಲ್ಲಾ ಕಷ್ಟಗಳಿಂದ ಪಾರಾಗಿರಿ : ಡಾ ಮುರುಘರಾಜೇಂದ್ರ ಮಹಾಸ್ವಾಮೀಜಿ.

ಮುಗಳಖೋಡ : ಆಳಾಗಿ ದುಡಿದರೆ ಅರಸನಾಗಿ ಉಣ್ಣಬಹುದು, ಸತ್ಯ ಧರ್ಮದಿಂದ ನಡೆದರೆ ಎಲ್ಲಾ ಕಷ್ಟಗಳಿಂದ ಪರಾಗಿ ಸುಖ ಸಮೃದ್ಧಿ ಜೀವನ ಸಾಧ್ಯ ಎಂದು ಶ್ರೀ ಯಲ್ಲಾಲಿಂಗೇಶ್ವರ ಶ್ರೀ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಜ.27 ಸೋಮವಾರದಂದು ಶ್ರೀ ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯಾರಾದನೆಯ ಕೊನೆಯದಿನದ ಪುಷ್ಪವ್ರಷ್ಟಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇದೇ ವೇಳೆ ಭವಿಷ್ಯವಾಣಿ ನುಡಿದಿದ್ದಾರೆ, ರೈತರಿಗೆ ಈ ವರ್ಷ ಹಳದಿ ಹಬ್ಬ ಅರಿಶಿಣದ ಬೆಲೆ ಗಗನಕ್ಕೆ ಏರುತ್ತದೆ, ಜಗವೆಲ್ಲ ತುಂಬಿದೆ ಮಳೆ ಆದರೆ ಒಂದೆಡೆ ಭಯಂಕರ ಹೊಳೆ, ಲಗಾಮು ಇಲ್ಲದ ಬಿಳಿ ಕುದುರೆಗಳು ಕಾದಾಡುತ್ತವೆ ಅಂದರೆ ರಾಜಕೀಯದಲ್ಲಿ ಅಸ್ಥಿರತೆ ಮತ್ತು ಗುದ್ದಾಟ, ಅಪಘಾತಗಳ ಹೆಚ್ಚಾಗಿ ಅಗುತ್ತವೆ ಆದ್ದರಿಂದ ವಾಹನಗಳ ಚಲಿಸುವಾಗ ಕುಟುಂಬ ನನೆನಪಿಗೆ ಬರಲಿ ಎಂದು ಹೇಳಿದರು
ಅಷ್ಟೇ ಅಲ್ಲದೇ ಶ್ರೀ ಮಠ ಸರ್ವಧರ್ಮ ಸಮನ್ವಯತೆಯನ್ನು ಸಾರುತ್ತದೆ. ಸಮಾಜ ಬಹಳ ಸೂಕ್ಷ್ಮತೆಯಿಂದ ನಡೆಯಿತ್ತಿದೆ. ಬದುಕಿನಲ್ಲಿ ಏನೇ ಸಂಕಟ ಬಂದರು ಶ್ರದ್ದೆ ಭಕ್ತಿಯಿಂದ ನಡೆಯಬೇಕು, ನಾವೆಲ್ಲರೂ ಒಂದು ಎಂಬ ಭಾವದಿಂದ ಪ್ರೇಮತ್ವದ ಬದುಕು ಬದುಕಬೇಕು ಹಾಗೂ ಭಾರತದ ಇಂದು ಆಧ್ಯಾತ್ಮಿಕ ತತ್ವದ ತಳಹದಿಯ ಮೇಲೆ ತನ್ನದೆ ಆದ ಸಂಸ್ಕೃತಿಯಿಂದ ಬಲಿಷ್ಠ ಭಾರತ ಮತ್ತು ವಿಶ್ವಗುರು ಆಗುತ್ತಿದೆ. ಎಲ್ಲರೂ ನ್ಯಾಯ ಧರ್ಮದಿಂದ ನಡೆಕೊಂಡರೆ ಜೀವನ ಪಾವನವಾಗುದು ಎಂದು ಆರ್ಶೀವಚನ ನೀಡಿದರು.
ಕಾರ್ಯಕ್ರಮದ ಪೂರ್ವ ಡಾ. ಶ್ರೀ ಮುರುಘರಾಜೇಂದ್ರ ಸ್ವಾಮೀಜಿಯವರ ಅಮೃತ ಹಸ್ತದಿಂದ ಶ್ರೀ ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆಗೆ ಮತ್ತು ಶಿಖರಕ್ಕೆ ಪುಷ್ಪವೃಷ್ಟಿ ಕಾರ್ಯಕ್ರಮ ನೆರವೇರಿತು.
ಬಳಿಕ ಸಿಂಹಾಸನಾರೋಹಣ ಮಾಡಿದ ಶ್ರೀಗಳಿಗೆ ಬಂಗಾರದ ಕಿರೀಟವನ್ನು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹಾಗೂ ಮಹಾರಾಷ್ಟ್ರದ ಭಕ್ತರು ತೊಡಿಸಿದರು. ನಂತರ ಪಾದ ಪೂಜೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು.
15 ದಿನಗಳ ಕಾಲ ನಡೆದ ಶ್ರೀ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮಕ್ಕೆ ಮಂಗಲ ಹಾಡಿದರು.
ಪುಣ್ಯಸ್ಮರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸದ್ಗುರುವಿಗೆ ತನಾರತಿ 10000 ತಾಯಂದಿರು ಸದ್ಗುರುವಿಗೆ ತನಾರತಿ ಸಮರ್ಪಿಸಿದ ಪ್ರಯುಕ್ತ "ವಂಡರ್ ಬುಕ್ ಆಫ್ ರೆಕಾರ್ಡ್ಸ್ ಇಂಟರ್ನ್ಯಾಷನಲ್" ಸಂಸ್ಥೆ ವತಿಯಿಂದ ಪೂಜ್ಯ ಶ್ರೀಗಳಿಗೆ ವಿಶ್ವದಾಖಲೆ ಪ್ರಮಾಣ ಪತ್ರ ಹಾಗೂ ಪದಕವನ್ನು ಮಹೇಂದ್ರ ತಮ್ಮಣ್ಣವರ ವಿಶ್ವ ದಾಖಲೆ ಸಂಸ್ಥೆಯ ಮುಖ್ಯಸ್ಥರ ಪರವಾಗಿ ಸಮರ್ಪಿಸಿದರು.
ಕಾರ್ಯಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್.ಈಶ್ವರಪ್ಪ ಆಗಮಿಸಿ ಶ್ರೀ ಯಲ್ಲಾಲಿಂಗೇಶ್ವರ ಕರ್ತೃ ಗದ್ದಗೆಯ ಹಾಗೂ ಶ್ರೀಗಳ ದರ್ಶನ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ, ಮಹಾರಾಷ್ಟ್ರ, ಆಂಧ್ರ , ಗೋವಾ , ತೆಲಂಗಾಣ ಹಾಗೂ ವಿವಿಧ ರಾಜ್ಯಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಅಪ್ಪಾಜಿ ಕಲಾ ಬಳಗದಿಂದ ಹದಿನೈದು ದಿನಗಳ ಕಾಲ ಸಂಗೀತ ಸೇವೆ ನೆರವೇರಿತು .
ಕಾರ್ಯಕ್ರಮವನ್ನು ಸೋಮು ಹೊರಟ್ಟಿ ನಿರೂಪಿಸಿದರು.