ಹಿರಿಯ ನಾಗರಿಕರ ಆರೋಗ್ಯ ತಪಾಸಣೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹಡಲಗೇರಿ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ತಾಲೂಕ ಆಸ್ಪತ್ರೆಯ ಎನ್‌ಸಿಡಿ ಘಟಕದಿಂದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಹಿರಿಯ ನಾಗರಿಕರ ರಕ್ತದೊತ್ತಡ,ಮಧುಮೇಹ,ಕ್ಯಾನ್ಸರ್, ಗಂಭೀರ ಖಾಯಿಲೆಗಳ ಸ್ಕ್ರೀನಿಂಗ್ ಮಾಡಲಾಯಿತು. ಶಿಬಿರದಲ್ಲಿ ಸುಮಾರು ೬೦ ಜನ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಸಾಂಕ್ರಾಮಿಕ ಹಾಗೂ ಅಸಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಲಾಯಿತು.
ತಾಪಂ ಯೋಜನಾಧಿಕಾರಿ ಖೂಭಾಸಿಂಗ ಜಾಧವ, ಮುಖಂಡ ರಮೇಶ ವೈ ಬಿರಾದಾರ, ಎನ್‌ಸಿಡಿ ಘಟಕದ ವೈದ್ಯ ಹೀರಾಲಾಲ್ ಚವ್ಹಾಣ,ಪಿಡಿಒ ಎಸ್.ಎಸ್.ಗಣಾಚಾರಿ, ತಾಲೂಕ ಆಸ್ಪತ್ರೆಯ ಆಪ್ತ ಸಮಾಲೋಚಕ ಎಂ ಎಸ್ ಅಂಬಿಗೇರ,ಲ್ಯಾಬ್ ಟೆಕ್ನಾಲಜಿಸ್ಟ್ ಹಮೀದ್ ಹಾಲ್ಯಾಳ, ಹಡಲಗೇರಿ ಉಪಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಸಿ ಜಿ ಬಿದರಕುಂದಿ, ಸಿಎಚ್‌ಓ ಮಂಜುನಾಥ ಹಡಪದ, ಅಶಾ ಕಾರ್ಯಕರ್ತೆ ನೀಲಮ್ಮ ಹೂಗಾರ, ರೇಣುಕಾ ಹರಿಂದ್ರಾಳ, ಅಂಗನವಾಡಿ ಕಾರ್ಯಕರ್ತೆ ಸಿ ಪಿ ಜೋಶಿ ಇದ್ದರು.