ಕ್ಷಯ ರೋಗ ನಿರ್ಮೂಲನೆಗೆ ಪಣ ತಡೋಣ

ಮುದ್ದೇಬಿಹಾಳ : ಎರಡು ವಾರದಿಂದ ಕೆಮ್ಮು, ಜ್ವರ, ಹಸಿವು ಆಗದೇ ಇರುವದು ತೂಕ ಕಡಿಮೆ ಆಗುತ್ತಿದ್ದರೆ ಅದು ಕ್ಷಯ ರೋಗ ಇರಬಹುದು.ಇದಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಕಫ ಪರೀಕ್ಷೆ, ಕ್ಷಕಿರಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ದೃಢಪಟ್ಟರೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು ರೋಗದಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಹಿರೇಮುರಾಳ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ.ಬಸವರಾಜ ಕಟ್ಟಿ ಹೇಳಿದರು.
ತಾಲ್ಲೂಕಿನ ಆರೇಮುರಾಳದಲ್ಲಿ ಸರಕಾರಿ ಅಯುರ್ವೇದ ಚಿಕಿತ್ಸಾಲಯದಿಂದ ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷಯ ರೋಗದ ಜಾಗೃತಿ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿತ್ಯ ಯೋಗ, ಪ್ರಾಣಾಯಾಮ ಮಾಡಬೇಕು ಎಂದು ತಿಳಿಸಿದರು. ಮುಖ್ಯ ಗುರು ಎಸ್ ಆರ್ ನಾಯಕ ಪ್ರತಿಜ್ಞಾ ವಿಧಿ ಭೋದಿಸಿದರು.ಸಹ ಶಿಕ್ಷಕರಾದ ಎಂ ಆರ್ ದೊಡಮನಿ ಶ್ರೀಮತಿ ಗಂಗಮ್ಮ ಬಿರಾದಾರ, ಗುರು ಇಂಗಳಗಿ ಇದ್ದರು.