ಕನ್ನಡದ ಸೇವೆಗೆ ಕಟಿಬದ್ಧರಾಗೋಣ : ಹಿರೇಮಠ

ಮುದ್ದೇಬಿಹಾಳ : ಬಸವಣ್ಣನವರ ಅಜ್ಜಿಯ ಊರು ಮುದ್ದೇಬಿಹಾಳ.ಮುದ್ದಬ್ಬೆಯ ನಾಡಿನಲ್ಲಿ ಕನ್ನಡ ಸೇವೆಯನ್ನು ಹೆಮ್ಮೆಯಿಂದ ಮಾಡಲು ಎಲ್ಲರೂ ಕಟಿಬದ್ಧರಾಗೋಣ ಎಂದು ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಕಸಾಪ ಸಾಹಿತ್ಯ ಸಮ್ಮೇಳನದ ಕಾರ್ಯಾಲಯದ ಮುಂಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಐದನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಶಿವರಾಮ ಕಾರಂತ, ರಂ.ಶ್ರೀ.ಮುಗಳಿ,ಬರಗೂರು ರಾಮಚಂದ್ರಪ್ಪ ಸೇರಿದಂತೆ ಘಟಾನುಘಟಿ ಸಾಹಿತಿಗಳು ಬಂದು ಇಲ್ಲಿ ತಮ್ಮ ಸಾಹಿತ್ಯ ಸುಧೆಯನ್ನು ಹರಿಸಿದ್ದಾರೆ.ಕನ್ನಡದ ತೇರನ್ನು ಎಳೆಯುವಾಗ ಹಲವು ಅಪಸ್ವರ ಸಹಜವಾಗಿರುತ್ತವೆ.ಅದಕ್ಕೆ ಕಿವಿಗೊಡದೇ ಮುಂದಡಿ ಇಡಿ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಪ್ರವಚನಕಾರ ಮಹದೇವ ಶಾಸ್ತ್ರಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಲಾಂಛನ ರಚಿಸಿದ ಕಲಾವಿದ ಬಸವರಾಜ ಹಡಪದ(ಯರಗಲ್) ,ವಾಯ್.ಎಚ್.ವಿಜಯಕರ್, ಕಸಾಪ ಜಿಲ್ಲಾ ಘಟಕದ ಜಯಶ್ರೀ ಹಿರೇಮಠ, ಬಸರಕೋಡ ಪ.ಬ ಸಂಸ್ಥೆಯ ಅಧ್ಯಕ್ಷ ಕೆ.ವಾಯ್.ಬಿರಾದಾರ ಮಾತನಾಡಿದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಗಣ್ಯರಾದ ಮಲಕೇಂದ್ರಗೌಡ ಪಾಟೀಲ್, ಶ್ರೀಶೈಲ ಮರೋಳ , ಬಾಪುಗೌಡ ಪಾಟೀಲ್, ಗುರುಲಿಂಗಪ್ಪ ಸುಲ್ಳಳ್ಳಿ, ಅಣ್ಣಾಸಾಬ ನಾಡಗೌಡ, ಎಸ್.ಬಿ.ಚಲವಾದಿ, ಹಣಮಂತ ಕುರಿ,ಮಲ್ಲು ಗಂಗನಗೌಡರ ,ಅಂಬಿಕಾ ಕರಕಪ್ಪನವರ ಇದ್ದರು. ಪುಷ್ಪಾ ಪತ್ತಾರ ಪ್ರಾರ್ಥಿಸಿದರು. ಎಂ .ಬಿ. ಗುಡಗುಂಟಿ ನಿರೂಪಿಸಿದರು. ರುದ್ರೇಶ ಕಿತ್ತೂರ ಸ್ವಾಗತಿಸಿದರು.