ದಾಸೋಹ ಗುಣ ಎಲ್ಲರಲ್ಲೂ ಬೆಳೆಯಲಿ

ಮುದ್ದೇಬಿಹಾಳ : ಉಳ್ಳವರು ಅನೇಕರಿದ್ದರು ಅವರಿಗೆ ಕೊಡುವ ಮನಸ್ಸು ಇರುವುದಿಲ್ಲ.ಆದರೆ ಕೆಲವರು ತಾವು ಗಳಿಸಿದ್ದರಲ್ಲಿ ಒಂದಿಷ್ಟು ಸಮಾಜಕ್ಕಾಗಿ ಕೊಡುವ ದಾನ, ದಾಸೋಹದಿಂದ ಪುಣ್ಯಲಭಿಸುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿರುವ ಕೆ.ಎಚ್.ಬಿ.ಕಾಲೋನಿ ಗಾರ್ಡನ್‌ದಲ್ಲಿ ಹಾನಗಲ್ ಕುಮಾರೇಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಹಾಗೂ ದಿ.ಚೆನ್ನಣ್ಣ ದೇಸಾಯಿ ಅವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಸಿದ್ದಗಂಗಾ ಪೂಜ್ಯರು, ಹಾನಗಲ್ ಗುರುಕುಮಾರೇಶ್ವರರ ಪುಣ್ಯಸ್ಮರಣೆಯಂದೇ ತಂದೆಯವರ ಸ್ಮರಣೆಯನ್ನು ಮಾಡುತ್ತಿರುವುದು ನಮ್ಮ ಭಾಗ್ಯ. ಕೈಲಾದಷ್ಟು ಸಾಮಾಜಿಕ ಸೇವೆಯನ್ನು ಜೀವ ಇರುವರೆಗೂ ಮುಂದುವರೆಸುವೆ ಎಂದರು.
ಗದಗ ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ, ಮಸೂತಿ ಪ್ರಭುಕುಮಾರೇಶ್ವರ ಮಠದ ಪ್ರಭುಕುಮಾರ ಶಿವಾಚಾರ್ಯರು, ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ದಿವ್ಯ ಸಾನಿಧ್ಯ ವಹಿಸಿದ್ದರು.ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ,ವೇ.ಬಸವಪ್ರಭು ಹಿರೇಮಠ ಇದ್ದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಿಗೆ ಆಯ್ಕೆಯಾದ ಗಣ್ಯರಾದ ಶರಣು ಸಜ್ಜನ, ನಾಗಭೂಷಣ ನಾವದಗಿ,ಪ್ರಭುರಾಜ ಕಲ್ಬುರ್ಗಿ, ರವಿ ಗೂಳಿ,ರಾಜು ಗೌಡರ ಅವರನ್ನು ಸನ್ಮಾನಿಸಲಾಯಿತು.