ನೇಬಗೇರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಿ : ಚಲವಾದಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಮುದ್ದೇಬಿಹಾಳ : ತಾಲೂಕು ನೇಬಗೇರಿ ಗ್ರಾಮದಲ್ಲಿ ಪ್ರಯಾಣಿಕರು ನಿಲ್ಲಲು ಬಸ್ ಶೆಲ್ಟರ್ ನಿರ್ಮಿಸುವಂತೆ ಹೋರಾಟಗಾರ ಸಂಗಮೇಶ ಚಲವಾದಿ ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪಿಡಬ್ಲೂö್ಯಡಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ಮುದ್ದೇಬಿಹಾಳ ತಾಲ್ಲೂಕು ನೇಬಗೇರಿ ಗ್ರಾಮದಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹುನಗುಂದ-ತಾಳಿಕೋಟಿ ರಾಜ್ಯ ಹೆದ್ದಾರಿಯನ್ನು ನಿರ್ಮಿಸುತ್ತಿದ್ದ ಸಂದರ್ಭದಲ್ಲಿ, ನೇಬಗೇರಿ ಗ್ರಾಮದಲ್ಲಿ ಇದ್ದ ಸುಸಜ್ಜಿತ ಬಸ್ ನಿಲ್ದಾಣವನ್ನು ತೆರವುಗೊಳಿಸಿದ್ದರು.ಈಗ ಹೆದ್ದಾರಿ ಪ್ರಾರಂಭವಾಗಿ ಬಹಳ ವರ್ಷಗಳು ಕಳೆದಿದ್ದರೂ ಕೆ.ಆರ್.ಡಿ.ಸಿ.ಎಲ್‌ನಿಂದ ನೇಬಗೇರಿಯಲ್ಲಿ ಬಸ್ ನಿಲ್ದಾಣವನ್ನು ಕಟ್ಟಿಸಿಕೊಡಲಿಲ್ಲ.ಇದರಿಂದ ವೃದ್ಧರು,ಮಹಿಳೆಯರು, ಶಾಲಾ ಮಕ್ಕಳು,ನೌಕರಸ್ಥರು ಊರಿಗೆ ಹೋಗುವ ಸಮಯದಲ್ಲಿ ಬಿಸಿಲಲ್ಲಿ, ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಕೆ.ಆರ್.ಡಿ.ಸಿ.ಎಲ್‌ನವರು ತೆರವುಗೊಳಿಸಿದ ಸ್ಥಳದಲ್ಲೇ ಬಸ್ ಶೆಲ್ಟರ್‌ನ್ನು ಮರಳಿ ನಿರ್ಮಿಸಿಕೊಡಬೇಕು.ನಿರ್ಲಕ್ಷ್ಯ ಮಾಡಿದ್ದಲ್ಲಿ ನೇಬಗೇರಿ-ಮುದ್ದೇಬಿಹಾಳ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.