ಪ್ರಶಸ್ತಿಗಳೇ ನಮ್ಮನ್ನು ಹುಡುಕಿ ಬರಬೇಕು : ಬೆಳಗಲ್ಲ

Oct 7, 2024 - 03:22
Oct 7, 2024 - 03:24
 0
ಪ್ರಶಸ್ತಿಗಳೇ ನಮ್ಮನ್ನು ಹುಡುಕಿ ಬರಬೇಕು : ಬೆಳಗಲ್ಲ
ಮುದ್ದೇಬಿಹಾಳ ಪಟ್ಟಣದ ಹಸಿರು ತೋರಣ ಗೆಳೆಯರ ಬಳಗದಿಂದ ಶುಕ್ರವಾರ ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಅಶೋಕ ರೇವಡಿ ಹಾಗೂ ಗುರುಶ್ರೇಷ್ಠ ಪ್ರಶಸ್ತಿ ಪಡೆದ ಬಿ.ಎಚ್.ಬಳಬಟ್ಟಿ ಅವರನ್ನು ಸನ್ಮಾನಿಸಲಾಯಿತು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಮುದ್ದೇಬಿಹಾಳ : ಇಂದು ನಾವೆಲ್ಲರೂ ಪ್ರಶಸ್ತಿಗಳನ್ನು ಪಡೆಯಲು, ಹೆಸರು, ಕೀರ್ತಿ ಪಡೆಯಲು ಹರ ಸಾಹಸ ಮಾಡುತ್ತೇವೆ. ವಶೀಲಿ, ಪ್ರಭಾವ ಬೀರುವ ಕೆಲಸ ಮಾಡುವುದು ಸರಿಯಲ್ಲ. ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿದರೆ ಸಿಗುವ ತೃಪ್ತಿ ದೊಡ್ಡದು ಎಂದು ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು. 


ಪಟ್ಟಣದ ಹುಡ್ಕೋ ಬಡಾವಣೆಯ ಹಸಿರು ತೋರಣ ಉದ್ಯಾನವನದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಅಶೋಕ ರೇವಡಿ ಹಾಗೂ ಬಿದರಕುಂದಿ ಎನ್.ಎಲ್.ನಾಯ್ಕೋಡಿ ಪ್ರತಿಷ್ಠಾನ ಕೊಡಮಾಡಿದ "ಗುರುಶ್ರೇಷ್ಠ" ಪ್ರಶಸ್ತಿ ಪಡೆದ ಬಿ.ಎಚ್.ಬಳಬಟ್ಟಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 


 ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯತ್ವ ಪಡೆಯುವುದು ಗೌರವದ ಸಂಗತಿಯಾಗಿದೆ. ಅದರಲ್ಲೂ ಆಡಳಿತ ಮಂಡಳಿಯ ಸದಸ್ಯರಾಗಿ ನೇಮಕಗೊಳ್ಳುವುದು ಇನ್ನೂ ಹೆಚ್ಚಿನ ಗೌರವದ ಸಂಗತಿ. ವ್ಯಾಪಾರ, ವಾಣಿಜ್ಯ, ಸಮಾಜ ಸೇವೆಯನ್ನು ಗುರುತಿಸಿ ಈ ನೇಮಕ ಮಾಡಲಾಗುತ್ತದೆ. ಇದೇ ರೀತಿ ಬಿದರಕುಂದಿ ನಾಯ್ಕೋಡಿ ಪ್ರತಿಷ್ಠಾನ ಸಹ ಅತ್ಯಂತ ಯೋಗ್ಯರಾದ ನಿವೃತ್ತ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತದೆ. ಪ್ರಶಸ್ತಿಗಳ ಹಿಂದೆ ನಾವು ಹೋಗದೇ, ನಮ್ಮ ಕೆಲಸ ನೋಡಿ ಪ್ರಶಸ್ತಿಗಳು ಬರಬೇಕು. ಹಸಿರು ತೋರಣ ಬಳಗವು ಯಾವುದೇ ಪ್ರತಿಫಲ, ಲಾಭದ ಆಶೆ ಪಡದೇ ಪರಿಸರ ಪ್ರೀತಿಯ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷರಾದ ರವಿ ಗೂಳಿ ಹಾಗೂ ಬಿ.ಎಸ್.ಮೇಟಿ ಮಾತನಾಡಿ, ಅಶೋಕ ರೇವಡಿ ಹಾಗೂ ಬಿ.ಎಚ್.ಬಳಬಟ್ಟಿ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಈ ಸನ್ಮಾನ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. 


ಅಧ್ಯಕ್ಷತೆ ವಹಿಸಿದ್ದ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ, ಸಂಚಾಲಕ ಮಹಾಬಲೇಶ್ವರ ಗಡೇದ , ಸನ್ಮಾನ ಸ್ವೀಕರಿಸಿದ ಅಶೋಕ ರೇವಡಿ,ನಿವೃತ್ತ ಮುಖ್ಯಶಿಕ್ಷಕ ಬಿ.ಎಚ್.ಬಳಬಟ್ಟಿ ಮಾತನಾಡಿದರು.


ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ, ಬಿ.ಎಸ್.ಮೇಟಿ, ರವಿ ಗೂಳಿ, ರಾಜಶೇಖರ ಕಲ್ಯಾಣಮಠ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಅಮರೇಶ ಗೂಳಿ, ಕಿರಣ ಕಡಿ, ಬಿ.ಎಂ.ಪಲ್ಲೇದ, ವೀರೇಶ ಹಂಪನಗೌಡ್ರ, ವಿಲಾಸರಾವ್ ದೇಶಪಾಂಡೆ, ಡಾ.ಚಂದ್ರಶೇಖರ ಶಿವಯೋಗಿಮಠ, ಸೋಮಶೇಖರ ಚೀರಲದಿನ್ನಿ, ಜಿ.ಎಂ.ಹುಲಗಣ್ಣಿ, ಪಿ.ಆರ್.ಕೂಡಗಿ, ಶಿವನಗೌಡ ಪಾಟೀಲ, ಪುಟ್ಟು ಕಡಕೋಳ, ವೀರೇಶ ಢವಳಗಿ, ವಿನಯ ಗಡೇದ.ಎಲ್.ಎಂ.ಚಲವಾದಿ ಇದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.