ಖರ್ಗೆ ರಾಜೀನಾಮೆ ಕೊಡುವ ಪ್ರಶ್ನೆಯೆ ಇಲ್ಲ : ಶಾಸಕ ಅಶೋಕ ಮನಗೂಳಿ

Jan 8, 2025 - 23:46
 0
ಖರ್ಗೆ ರಾಜೀನಾಮೆ ಕೊಡುವ ಪ್ರಶ್ನೆಯೆ ಇಲ್ಲ : ಶಾಸಕ ಅಶೋಕ ಮನಗೂಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಸಿಂದಗಿ:  ಬೀದರನ ಗುತ್ತಿಗೆದಾರ ಸಚಿನ ಆತ್ಮಹತ್ಯೆ ಪ್ರಕರಣದಲ್ಲಿ ಪಂಚಾಯತ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಅವರ ಪಾತ್ರವಿಲ್ಲ ಅಲ್ಲದೆ ಗುತ್ತಿಗೆದಾರನ ಡೆತ್ ನೋಟ್‌ದಲ್ಲಿ ಖರ್ಗೆಯವರ ಹೆಸರು ಎಲ್ಲಿಯೂ ನಮೂದಾಗಿಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಬಿಜೆಪಿಗರಿಗೆ ಜ್ಞಾನ ಇದೇಯೇ ಇಲ್ಲವೋ ಎನ್ನುವುದು ಕಂಡುಬರುತ್ತಿದೆ ಎಂದು ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.
ಬುಧವಾರ ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರಕಾರ ಸಾಮಾಜಿಕ ನ್ಯಾಯದಡಿ ಅತ್ಯಂತ ಪಾರದರ್ಶಕವಾಗಿ ಆಡಳಿತ ನಡೆಸುತ್ತಿರುವ ಪಂಚಾಯತ ರಾಜ್ಯ ಇಲಾಖೆಯಲ್ಲಿ ಪ್ರಗತಿಪರ ಕಾರ್ಯಕ್ರಮಗಳು ಮಾಡುತ್ತಿರುವ ಖರ್ಗೆಯವರ ಏಳಿಗೆಯನ್ನು ಸಹಿಸಕ್ಕಾಗದೇ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಹೊರೆಸುವ ಕೆಲಸಕ್ಕೆ ಕೈಹಾಕಿರುವದಲ್ಲದೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ.  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವು ಸಂವಿಧಾನದ ಮೂಲಕ ಆಡಳಿತ ನಡೆಸುತ್ತೇವೆ ಎನ್ನುವ ಕೇಂದ್ರ ಸರಕಾರದ ಸಚಿವ ಅಮೀತ್ ಶಾ ಅವರು ಡಾ ಅಂಬೇಡ್ಕರರ ತತ್ವಗಳನ್ನು ದಿಕ್ಕರಿಸಿ ಸಂವಿಧಾನಕ್ಕೆ ಅವಮಾನ ಮಾಡುತ್ತಿದೆ ಅಲ್ಲದೆ ರಾಜ್ಯದ ಒಬ್ಬ ಮಹಿಳಾ ಸಚಿವೆ ಲಕ್ಷಿö್ಮÃ ಹೆಬ್ಬಾಳಕರ ಅವರನ್ನು ಅವಮಾನಿಸಿ ಜೈಲು ಸೇರಿದ ಮಾಜಿ ಸಚಿವ ಸಿ.ಟಿ.ರವಿ ಅವರು ಹೊರ ಬಂದ ತಕ್ಷಣ ವಿಜಯೋತ್ಸವ ಆಚರಿಸಿ ಅವರ ಯೋಗ್ಯತೆಯನ್ನು ಹೊರ ಹಾಕಿದೆ. ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವು ಕಿಂಚಿತ್ತಿಲ್ಲ. ಆದಾಗ್ಯೂ ಅವರ ಆಡಳಿತ ಸಹಿಸಕ್ಕಾಗದೆ ವಿನಾಕಾರಣ ಗುಲ್ಲ್ ಎಬ್ಬಿಸುತ್ತಿದ್ದಾರೆ. ಶಾಸಕ ಮಣಿಕಂಠ ರಾಠೋಡ ಅವರ ಮೇಲೆ ೩೦ ಕೇಸ್‌ಗಳಿಗೆ ಅಂತವರು ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಯಾವ ಪುರುಷ್ಯಾರ್ಥಕ್ಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ದಲಿತ ಜನಾಂಗಕ್ಕೆ ಸೇರಿದ ನಾಯಕ ಸಚಿವ ಪ್ರಿಯಾಂಕ ಖರ್ಗೆ ಅವರ ಮೇಲೆ ಬಿಜೆಪಿ ಏಜಂಟರಾಗಿ ಕಾರ್ಯನಿರ್ವಹಿಸುತ್ತಿರುವ ಚಲವಾದಿ ನಾರಾಯಣಸ್ವಾಮಿ ಯವರು ದೊಂಬೆ ಮಾಡುವ ಮೂಲಕ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ದಲಿತ ಸಂಘರ್ಷ ಸಮಿತಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಮುಂದಿನ ದಿನಮಾನದಲ್ಲಿ ಇಡೀ ರಾಜ್ಯಾಧ್ಯಂತ ಉಗ್ರವಾದ ಹೋರಾಟ ನಡೆಸುತ್ತದೆ.

-ವೈ.ಸಿ.ಮಯೂರ 
ದಸಂಸ ಜಿಲ್ಲಾ ಸಂಚಾಲಕ 

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಓಬಿಸಿ ನಾಯಕ ಎಂ.ಎ.ಖತೀಬ, ರಮೇಶ ನಡುವಿನಕೇರಿ ಇದ್ದರು.  

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.