ಮನ ಸುಸ್ಥಿತಿಯಲ್ಲಿ ಇದ್ದಾಗ ಬದುಕು ಸುಂದರ

Sep 29, 2024 - 21:49
 0
ಮನ ಸುಸ್ಥಿತಿಯಲ್ಲಿ ಇದ್ದಾಗ ಬದುಕು ಸುಂದರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಲೇಖಕಿ-ರೇಷ್ಮಾ ಶೆಟ್ಟಿ

ನಮಗೆ ನಮ್ಮ ಮನಸ್ಸು ಮಿತ್ರನಾಗಬಹುದು ಶತ್ರುನೂ ಆಗಬಹುದು ಎನ್ನುವ ಪ್ರಸಿದ್ಧವಾದ ನುಡಿ ಇದೆ.ಅದು ಅಕ್ಷರಶಃ ಸತ್ಯ.ನಾವು ನಮ್ಮ ಮನಸ್ಸನ್ನ ಹೇಗೆ ಮಾಡಿಕೊಳ್ಳುತ್ತೇವೂ ಹಾಗೆ ಆಗುತ್ತದೆ.ಮನಸ್ಸನ್ನ ಎಲ್ಲಾ ಸಂದರ್ಭದಲ್ಲೂ ಸ್ಥಿತದಲ್ಲಿ ಇಟ್ಟುಕೊಳ್ಳುವುದು ಒಂದು ಸಾಧನೆಯೇ ಸರಿ.ತನ್ನ ಮನವನ್ನು ಗೆದ್ದರೆ ಜಗತ್ತನ್ನ ಗೆದ್ದ ಹಾಗೆ ಅಂತಾ ಹಿರಿಯರು ಸುಮ್ಮನೆ ಹೇಳಿಲ್ಲ.ಬದುಕು ಬೇವು ಬೆಲ್ಲದ ಮಿಶ್ರಣ ಒಂದೇ ಸಮಾನವಾಗಿ ಇರುವುದಿಲ್ಲ ಕಷ್ಟ ಸುಖ ಆಘಾತ ಉದ್ವೇಗ ಸೋಲು ಗೆಲುವು ಅನಿರೀಕ್ಷಿತ ಘಟನೆಗಳು ನೆಡೆಯುತ್ತದೆ ಎಲ್ಲಾ ಸಂದರ್ಭದಲ್ಲೂ ಮನವನ್ನ ಗಟ್ಟಿಯಾಗಿ ಇಟ್ಟಕೊಳ್ಳಬೇಕು.                
ದೇಹವನ್ನ ಗಟ್ಟಿಗೊಳಿಸಿಕೊಳ್ಳುವುದು ಆರೋಗ್ಯವಾಗಿ ಇಟ್ಟುಕೊಳ್ಳಲು ಸ್ನಾನ ಮಾಡಿ ಶುದ್ಧವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೂ  ಹಾಗೆಯೇ ಮನಸ್ಸು ಆರೋಗ್ಯವಾಗಿರುವುದು ಗಟ್ಟಿಯಾಗಿ ಇರುವುದು ಅಷ್ಟೇ ಮುಖ್ಯ .ಮನಸ್ಸಿಗೂ ಸ್ನಾನ ಬೇಕು ಎಂತಹ ಸ್ನಾನ ಎಂದರೆ ಕಾಮ ಕ್ರೋಧ ಮದ ಮೋಹ ಲೋಭ ಮತ್ಸರ ಎಲ್ಲಾವೂ ನಿಯಂತ್ರಣದಲ್ಲಿ ಇಟ್ಟುಕೊಂಡು ಬೇಡವಾದ ಚಿಂತೆಗಳನ್ನ ಹೊರಗೆ ಹಾಕುತ್ತಾ ಶುದ್ಧವಾಗಿಸಿಕೊಳ್ಳುತ್ತಿರಬೇಕು ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಬೇಕು.                 
ಮನಸ್ಸು ಒಂದು ರೀತಿಯ ರೆಕಾರ್ಡ್ ರ ಅದರಲ್ಲಿ ನಲಿವು ಸಂತೋಷ ಹಾಗೆಯೇ ಯಾರೇ ನೋವು ಮಾಡಲಿ ಯಾರೇ ಅವಮಾನ ಮಾಡಲಿ ಏನೇ ಘಟನೆಗಳು ನೆಡೆಯಲಿ ಎಲ್ಲಿ ಯಾವಾಗ ಎಲ್ಲಾವೂ ರೆಕಾರ್ಡ್ ಆಗಿ ಇರುತ್ತದೆ ಕೆಲವರು ಆಗಿ ಹೋದ ನೋವುಗಳನ್ನೇ ಪ್ಲೇ ಮಾಡಿಕೊಂಡು ಮತ್ತೆ ಮತ್ತೆ ನೋವು ಪಡುತ್ತಾನೆ ಇರುತ್ತಾರೆ.ಮನಸ್ಸನ್ನ ಪ್ರಶಾಂತವಾಗಿ ಇಟ್ಟುಕೊಳ್ಳಬೇಕು .ತಾಳ್ಮೆಯಿಂದ ಇರಬೇಕು ಆಗಿ ಹೋದ ಕಹಿ ಘಟನೆಗಳನ್ನ ಮರೆತು ಈ ಕ್ಷಣ ಈ ದಿನ ಖುಷಿಯಾಗಿರಬೇಕು.                    
ಬದುಕು ಹೋರಾಟ ಹೋರಾಡಲೇ ಬೇಕು ನಮ್ಮ ಕರ್ತವ್ಯಗಳನ್ನು ಮಾಡಬೇಕು. ಆತ್ಮಬಲ ತುಂಬಾ ಮುಖ್ಯ ಮನಸ್ಸು ಗಟ್ಟಿಯಾಗಿಲ್ಲ ಮಾನಸಿಕ ಕಾಯಿಲೆಗೆ ಗುರಿಯಾಗಬೇಕಾಗುತ್ತದೆ.                 
ಪರೀಕ್ಷೆಯಲ್ಲಿ ಫೇಲ್ ಆದರೆ ಪ್ರೀತಿಸಿದವರು ಸಿಗಲಿಲ್ಲ ಅಂದರೆ ಸಾಲ ಹೆಚ್ಚಾದರೆ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಖಿನ್ನತೆ ಹೋಗುವವರು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.ಮನಸ್ಸು ಆರೋಗ್ಯವಾಗಿ ಗಟ್ಟಿಯಾಗಿ ಇಟ್ಟುಕೊಳ್ಳಲು ಧ್ಯಾನ ಯೋಗ ಮಾಡಬೇಕು ಭಗವತ್ ಗೀತೆ ರಾಮಾಯಣ ಓದಬೇಕು. ಸಂಗೀತ ಕೇಳಬೇಕು ಸಕರಾತ್ಮಕ ಚಿಂತನೆ ಮಾಡಬೇಕು ತಾಳ್ಮೆಯಿಂದ ಇರಬೇಕು.        
ಮನಸ್ಸು ಹೂವಿನ ತೋಟದಂತೆ ನಾವು ಸುಂದರವಾದ ಯೋಚನೆ ಸಕರಾತ್ಮಕ ಚಿಂತನೆಗಳಿಂದ ತುಂಬಿಸಿದರೆ ಸುಂದರವಾದ ತೋಟವಾಗಿ ನಮಗೆ ಖುಷಿ ನೀಡುತ್ತದೆ ಅದೇ ಬೇಡವಾದದ್ದು ತುಂಬಿಸಿಕೊಂಡರೆ ಮುಳ್ಳು ಬೇಡವಾದ ಗಿಡ ಬೆಳದ ನಿಷ್ಪ್ರಯೋಜಕವಾಗುತ್ತದೆ.ನಮ್ಮ ಬದುಕನ್ನ ನಾವೇ ಸುಂದರವಾಗಿಸಿಕೊಳ್ಳಬೇಕು ಅದು ನಮ್ಮ ಕೈಯಲ್ಲೇ ಇದೆ ನಾವು ಪ್ರಯತ್ನಿಸಿಬೇಕು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.