ಇಂದು ಮಹಿಳಾ ವಿವಿ ೧೬ನೇ ಘಟಿಕೋತ್ಸವ : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಮಹಿಳಾ ಮಹನೀಯರಿಗೆ ಗೌರವ ಡಾಕ್ಟರೇಟ್

Jan 8, 2025 - 23:43
 0
ಇಂದು ಮಹಿಳಾ ವಿವಿ ೧೬ನೇ ಘಟಿಕೋತ್ಸವ : ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಮಹಿಳಾ ಮಹನೀಯರಿಗೆ ಗೌರವ ಡಾಕ್ಟರೇಟ್

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ವಿಜಯಪುರ : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೧೬ನೇ ಘಟಿಕೋತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ತೋರಿದಂತಹ ಮುವರು ಮಹಿಳಾ ಮಹನೀಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು ಎಂದು ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲ ಹೇಳಿದರು.                     

ಬುಧವಾರ ಮಹಿಳಾ ವಿವಿಯ ಜ್ಞಾನಶಕ್ತಿ ಕ್ಯಾಂಪಸ್‌ನ ಸಿಂಡಿಕೇಟ್ ಸಭಾಂಗಣದಲ್ಲಿ ಇಂದು ನಡೆಯಲಿರುವ ರಾಜ್ಯ ಮಹಿಳಾ ವಿವಿಯ ೧೬ನೇ ಘಟಿಕೋತ್ಸವ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ವಿಶ್ವವಿದ್ಯಾನಿಲಯದ ವಾಡಿಕೆಯಂತೆ ಕಲಾಕ್ಷೇತ್ರಕ್ಕೆ ಗಣನೀಯವಾದ ಕೊಡುಗೆಯನ್ನು ನೀಡಿದ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿಯ ರಾಕ್ ಗಾರ್ಡನ್ ಕಲಾಕೃತಿಗಳನ್ನು ತಯಾರಿಸಿದಂತಹ ವೇದರಾಣಿ ದಾಸನೂರು, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಂತಹ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮೀನಾಕ್ಷಿ ಬಾಳಿ ಹಾಗೂ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯ ಚಲನಚಿತ್ರ ನಟಿ ತಾರಾ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುವುದು ಎಂದರು.        

ರಾಜ್ಯಪಾಲರು ಹಾಗೂ ಮಹಿಳಾ ವಿವಿಯ ಕುಲಪತಿ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ನವದೆಹಲಿಯ ರಾಷ್ಟಿçÃಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿ ಪ್ರೊ.ಶಶಿಕಲಾ ವಂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.                 

ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚAದ್ರಶೇಖರ್ ಸೇರಿದಂತೆ ಜಿಲ್ಲೆಯ ಎಲ್ಲ  ಗಣ್ಯಮಾನ್ಯರು  ಉಪಸ್ಥಿತರಿರುವರು ಎಂದು ಅವರು ಮಾಹಿತಿ ನೀಡಿದರು.          

ವಿವಿಯ ಒಟ್ಟು ೧೨,೩೫೦ ವಿದ್ಯಾರ್ಥಿನಿಯರಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು.  ಇದರಲ್ಲಿ ೫೩೮೭ ವಿದ್ಯಾರ್ಥಿನೀಯರು ಬಿ.ಎ, ೩೬ ವಿದ್ಯಾರ್ಥಿನೀಯರು ಬಿಎಸ್ ಡಬ್ಲೂö್ಯ, ೧೬೬೩ ವಿದ್ಯಾರ್ಥಿನೀಯರು ಬಿಈಡಿ, ೧೫ ವಿದ್ಯಾರ್ಥಿನೀಯರು ಬಿಪಿಈಡಿ, ೩೫೩೬ ವಿದ್ಯಾರ್ಥಿನೀಯರು ಬಿ.ಕಾಂ, ೧೨೨ ವಿದ್ಯಾರ್ಥಿನೀಯರು ಬಿಬಿಎ, ೧೪೧೩ ವಿದ್ಯಾರ್ಥಿನೀಯರು ಬಿ.ಎಸ್.ಸಿ, ೧೧೫ ವಿದ್ಯಾರ್ಥಿನೀಯರು ಬಿ.ಸಿ.ಎ, ೬೩ ವಿದ್ಯಾರ್ಥಿನೀಯರು ಬಿ.ಎಫ್.ಟಿ ಹಾಗೂ ೫ ವಿದ್ಯಾರ್ಥಿನೀಯರು ಬಿಎಫ್ ಎಡಿ ಸ್ನಾತಕ ಪದವಿ ಪಡೆದಿದ್ದಾರೆ ಎಂದು ತಿಳಿಸಿದರು.             

ಅಕ್ಕ ಟಿವಿ ಯೂಟ್ಯೂಬ್ ನ್ಯೂಸ್ ಚಾನೆಲ್ ಲಿಂಕ್ https://www.youtube.com/live/QXB5kGfDENQ?si=XmnkyGrO172BnQmt  ಲಿಂಕ್ ಮೂಲಕ  ಘಟಿಕೋತ್ಸವದ ಕಾರ್ಯಕ್ರಮವನ್ನು ವಿಕ್ಷೀಸಬಹುದಾಗಿದೆ ಎಂದರು                    

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚAದ್ರಶೇಖರ್, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ಸಕ್ಲಾಲ್ ಹೂವಣ್ಣ, ಮಾಧ್ಯಮ ಸಮಿತಿ ಅಧ್ಯಕ್ಷ ಪ್ರೊ. ಓಂಕಾರ ಕಾಕಡೆ ಹಾಗೂ ಸಂಯೋಜಕಿ ಡಾ.ತಹಮೀನಾ ಕೋಲಾರ, ಐಸಿಟಿ ಸಂಯೋಜಕ ಸಂದೀಪ್ ನಾಯಕ್ ಉಪಸ್ಥಿತರಿದ್ದರು

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.