ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025 : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಪಟ್ಟಿ ಪ್ರಕಟ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು : ಅರ್ಹತಾ ದಿನಾಂಕ 2025 ಜನವರಿ 1 ರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಡಿಯಲ್ಲಿ ಪರಿಷ್ಕರಣೆ ಚಟುವಟಿಕೆಗಳ ವೇಳಾಪಟ್ಟಿಯ ಪ್ರಕಾರ ಮತ್ತು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಪ್ರಕ್ರಿಯೆಗೊಳಿಸಿದ ನಂತರ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಇಂದು ಸಂಬಂಧಿಸಿದ ಎಲ್ಲಾ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಎಲ್ಲಾ ಜಿಲ್ಲೆಗಳ ಉಪ ಆಯುಕ್ತರು, ಚುನಾವಣಾ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರರ ಪಟ್ಟಿ ನೋಂದಣಿ ಅಧಿಕಾರಿಗಳು ಮತ್ತು ಎಲ್ಲಾ ಮತಗಟ್ಟೆಗಳಲ್ಲೂ ಸಹ ಪ್ರಕಟಿಸಲಾಗಿದೆ.
ಸಮಗ್ರ ಕರಡು ಮತದಾರರ ಪಟ್ಟಿ ಪ್ರಕಟಣೆ 2024 ಅಕ್ಟೋಬರ್ 29, ಹಕ್ಕುಗಳು ಮತ್ತು ಆಕ್ಷೇಪಣೆಗಳ ಅವಧಿ 2024 ನೇ ಅಕ್ಟೋಬರ್ 29 ರಿಂದ 2024ನೇ ನವೆಂಬರ್ 28 ರವರೆಗೆ, ವಿಶೇಷ ಅಭಿಯಾನದ ದಿನಾಂಕಗಳು 2024ನೇ ನವೆಂಬರ್ 09, 10, 23 ಮತ್ತು 24, ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಡಿಸೆಂಬರ್ 24, 2025ನೇ ಜನವರಿ 06 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‍ಸೈಟ್‍ನಲ್ಲಿ https://ceo.karnataka.gov.in/
ಅಂತಿಮ ಮತದಾರರ ಪಟ್ಟಿ:
•ಸಾಮಾನ್ಯ ಮತದಾರರು:
ಕರಡು ಮತದಾರರ ಪಟ್ಟಿ-2025 ರ ಪ್ರಕಾರ, ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,51,04,782, ಇದರಲ್ಲಿ 2,75,31,635 ಪುರುಷ ಮತದಾರರು, 2,75,68,082 ಮಹಿಳಾ ಮತದಾರರು ಮತ್ತು 5065 ಇತರ ಮತದಾರರು ಸೇರಿದ್ದಾರೆ. ಅಂತಿಮ ಮತದಾರರ ಪಟ್ಟಿ-2025 ರಲ್ಲಿ, ಒಟ್ಟು ಸಾಮಾನ್ಯ ಮತದಾರರು 5,52,08,565 ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 2,75,62,634 ಪುರುಷ ಮತದಾರರು, 2,76,40,836 ಮಹಿಳಾ ಮತದಾರರು ಮತ್ತು 5095 ಇತರ ಮತದಾರರು ಸೇರಿದ್ದಾರೆ. ಕರಡು ಪಟ್ಟಿಗೆ ಹೋಲಿಸಿದರೆ ಒಟ್ಟು ಮತದಾರರಲ್ಲಿ ನಿವ್ವಳ ಹೆಚ್ಚಳ 1,03,783 ಆಗಿದ್ದು, ಮಹಿಳಾ ಮತದಾರರು 72,754, ಪುರುಷ ಮತದಾರರು 30,999 ಮತ್ತು ಇತರ ಮತದಾರರು 30 ರಷ್ಟು ಏರಿಕೆ ಕಂಡಿದ್ದಾರೆ.
224 ವಿಧಾನಸಭಾ ಕ್ಷೇತ್ರಗಳಲ್ಲಿ, ಬೆಂಗಳೂರು ನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರ 176 – ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಮತದಾರರನ್ನು ಒಟ್ಟು 7,67,416 ಹೊಂದಿದೆ, ಇದಕ್ಕೆ ವಿರುದ್ಧವಾಗಿ, ಚಿಕ್ಕಮಗಳೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರ 123- ಶೃಂಗೇರಿ ವಿಧಾನಸಭಾ ಕ್ಷೇತ್ರವು ಕಡಿಮೆ ಸಂಖ್ಯೆಯ 1,68,882 ಮತದಾರರನ್ನು ಹೊಂದಿದೆ. ಹಿಂದಿನ ವರ್ಷ 2024 ರ ಮತ್ತು ಪ್ರಸ್ತುತ ವರ್ಷ 2025 ರ ಕರಡು ಪಟ್ಟಿಯ ಸಾಮಾನ್ಯ ಮತದಾರರ ಹೋಲಿಕೆ ಮಾಡಲಾಗಿದೆ:
2024ರ ಕ್ಯಾಲೆಂಡರ್ ವರ್ಷದಲ್ಲಿ (ಕರಡು ಪಟ್ಟಿ) ಪುರುಷ 2,68,02,838, ಮಹಿಳೆ 2,65,69,428, ಇತರೆ 4,896, ಒಟ್ಟು 5,33,77,162, 2024ರ (ಅಂತಿಮ ಪಟ್ಟಿ) ಪುರುಷ 2,69,32,660, ಮಹಿಳೆ 2,68,45,955, ಇತರೆ 4,919, ಒಟ್ಟು 5,37,83,534, 2024ರ (ಚುನಾವಣಾ ಪಟ್ಟಿ) ಪುರುಷ 2,73,66,508, ಮಹಿಳೆ 2,73,54,155, ಇತರೆ 5,012, ಒಟ್ಟು 5,47,25,675, 2025ರ (ಕರಡು ಪಟ್ಟಿ) ಪುರುಷ 2,75,31,635, ಮಹಿಳೆ 2,75,68,082, ಇತರೆ 5,065, ಒಟ್ಟು 5,51,04,782, 2025ರ (ಅಂತಿಮ ಪಟ್ಟಿ) ಪುರುಷ 2,75,62,634, ಮಹಿಳೆ 2,76,40,836, ಇತರೆ 5,095, ಒಟ್ಟು 5,52,08,565 ಆಗಿದ್ದು, ಒಟ್ಟು ನಿವ್ವಳ ಹೆಚ್ಚಳ (ಕರಡು ಪಟ್ಟಿಯಿಂದ ಅಂತಿಮ ಪಟ್ಟಿವರೆಗೆ ) ಪುರುಷ 30,999, ಮಹಿಳೆ 72,754, ಇತರೆ 30, ಒಟ್ಟು 1,03,783 ಹೆಚ್ಚಳವಾಗಿದೆ.
ಅಂತಿಮ ಮತದಾರರ ಪಟ್ಟಿ 2025 ಗಾಗಿ ಜಿಲ್ಲಾವಾರು ಸಾಮಾನ್ಯ ಮತದಾರರು ಮತ್ತು ಅಂತಿಮ ಮತದಾರರ ಪಟ್ಟಿ 2025 ಗಾಗಿ ವಿಧಾನಸಭಾ ಕ್ಷೇತ್ರವಾರು ಸಾಮಾನ್ಯ ಮತದಾರರನ್ನು ಅನುಕ್ರಮವಾಗಿ ಅನುಬಂಧ-1 ಮತ್ತು 2 ರಲ್ಲಿ ನೀಡಲಾಗಿದೆ.
ಶೇಕಡಾ ನೂರರಷ್ಟು ಫೆÇೀಟೋ ಒಳಗೊಂಡ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ಮತದಾರರ ಗುರುತಿನ ಚೀಟಿಗಳನ್ನು ಮತದಾರರ ವಿಳಾಸಗಳಿಗೆ ಸ್ಪೀಡ್ ಪೆÇೀಸ್ಟ್ ಮೂಲಕ ರವಾನಿಸಲಾಗುತ್ತಿದೆ. 2025 ರ ನವೆಂಬರ್ ಅಂತ್ಯದ ವೇಳೆಗೆ, 14,99,447 ಮತದಾರರ ಗುರುತಿನ ಚೀಟಿಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಹೆಚ್ಚುವರಿಯಾಗಿ, ಇನ್ನೂ 6,02,863 ಮತದಾರರ ಗುರುತಿನ ಚೀಟಿಗಳನ್ನು ಪ್ರಸ್ತುತ ಮತದಾರರಿಗೆ ಕಳುಹಿಸಿ ಕೊಡಲು ಕ್ರಮ ಕೈಗೊಳ್ಳಲಾಗಿದೆ.
•ಸೇವಾ ಮತದಾರರು:
ಕರಡು ಪಟ್ಟಿಗಳಲ್ಲಿ 45,879 ಇದ್ದ ಸೇವಾ ಮತದಾರರ ಸಂಖ್ಯೆ ಅಂತಿಮ ಪಟ್ಟಿಯ ಪ್ರಕಾರ 46,016 ಕ್ಕೆ ಏರಿದೆ.
ಸೇವಾ ಮತದಾರರು ಕರಡು ಪಟ್ಟಿ 2025ರಲ್ಲಿ ಪುರುಷ 44,241, ಮಹಿಳೆ 1,638 ಒಟ್ಟು 45,879 ಆಗಿದೆ. ಅಂತಿಮ ಪಟ್ಟಿ 2025 ಕ್ಕೆ ಪುರುಷ 44,357, ಮಹಿಳೆ 1,659, ಒಟ್ಟು 46,016 ಆಗಿದೆ.
•ಯುವ ಮತದಾರರು:
ಯುವ ಮತದಾರರ ಸಂಖ್ಯೆ (18-19 ವರ್ಷಗಳು) ಕರಡು ಪಟ್ಟಿಗಳಲ್ಲಿ 6,81,197 ರಿಂದ ಅಂತಿಮ ಪಟ್ಟಿಗಳಲ್ಲಿ 8,02,423 ಕ್ಕೆ ಏರಿಕೆಯಾಗಿದೆ, ಇದು 1,21,226 ಯುವ ಮತದಾರರ ಗಮನಾರ್ಹ ಏರಿಕೆಯನ್ನು ಸೂಚಿಸುತ್ತದೆ.
ಯುವ ಮತದಾರರು ಕರಡು ಪಟ್ಟಿ 2025ರಲ್ಲಿ ಪುರುಷ 3,62,874, ಮಹಿಳೆ 3,18,258, ತೃತೀಯ ಲಿಂಗ 65, ಒಟ್ಟು ನಿವ್ವಳ ಹೆಚ್ಚಳ 61,320 ಆಗಿದ್ದು, ಒಟ್ಟು 6,81,197, ಅಂತಿಮ ಪಟ್ಟಿ 2025 ಕ್ಕೆ ಪುರುಷ 4,24,194, ಮಹಿಳೆ 3,78,164, ತೃತೀಯ ಲಿಂಗ 65, ಒಟ್ಟು ನಿವ್ವಳ ಹೆಚ್ಚಳ 59,906, ಒಟ್ಟು 8,02,423 ಆಗಿದೆ.
•ಸಾಗರೋತ್ತರ ಮತದಾರರು:
ರಾಜ್ಯದಲ್ಲಿ 2025 ರ ಸಾಲಿನಲ್ಲಿ ಕರಡು ಮತದಾರರ ಪಟ್ಟಿಗಳಲ್ಲಿ ಇದ್ದ 3,453 ಸಾಗರೋತ್ತರ ಮತದಾರರ ಸಂಖ್ಯೆ ಅಂತಿಮ ಪಟ್ಟಿಯ ಪ್ರಕಾರ 3,483 ಕ್ಕೆ ಏರಿಕೆಯಾಗಿದೆ.
ಸಾಗರೋತ್ತರ ಮತದಾರರು ಕರಡು ಪಟ್ಟಿ 2025 ರಲ್ಲಿ ಪುರುಷ 2,482, ಮಹಿಳೆ 970, ತೃತೀಯ ಲಿಂಗ 1, ಒಟ್ಟು 3,453, ಅಂತಿಮ ಪಟ್ಟಿ 2025 ಕ್ಕೆ ಪುರುಷ 2,503, ಮಹಿಳೆ 979, ತೃತೀಯ ಲಿಂಗ 1, ಒಟ್ಟು 3,483 ಆಗಿದೆÉ.
•85+ ವಯಸ್ಸಿನ ಮತದಾರರು:
ಅಂತಿಮ ಪಟ್ಟಿ 2025 ರ ಪ್ರಕಾರ 85+ ವಯಸ್ಸಿನ ಅಂತಿಮ ಮತದಾರರ ಸಂಖ್ಯೆ 6,36,551 ಮತ್ತು ಕರಡು ಪಟ್ಟಿಯಲ್ಲಿ 6,38,857 ರಷ್ಟಿತ್ತು, ಇಳಿಮುಖವಾಗಿರುವುದನ್ನು ಗಮನಿಸಬಹುದಾಗಿದೆ.
85+ ವಯಸ್ಸಿನ ಮತದಾರರು ಕರಡು ಪಟ್ಟಿ 2025ರಲ್ಲಿ ಪುರುಷ 2,79,000, ಮಹಿಳೆ 3,59,85, ತೃತೀಯ ಲಿಂಗ 6, ಒಟ್ಟು 6,38,857, ಅಂತಿಮ ಪಟ್ಟಿ 2025ಕ್ಕೆ ಪುರುಷ 2,77,616, ಮಹಿಳೆ 3,58,930, ತೃತೀಯ ಲಿಂಗ 5, ಒಟ್ಟು 6,36,551 ಇದೆ.
• 100+ ವಯಸ್ಸಿನ ಮತದಾರರು:
ಅಂತಿಮ ಮತದಾರರ ಪಟ್ಟಿ 2025 ರ ಪ್ರಕಾರ 100+ ವಯಸ್ಸಿನವರ ಸಂಖ್ಯೆ 22,551 ಮತ್ತು ಕರಡು ಪಟ್ಟಿ 2025 ರಲ್ಲಿ 23,586 ರಷ್ಟಿತ್ತು.
100+ ವಯಸ್ಸಿನ ಮತದಾರರು ಕರಡು ಪಟ್ಟಿ 2025ರಲ್ಲಿ ಪುರುಷ 9,447, ಮಹಿಳೆ 14,139, ಒಟ್ಟು 23,586, ಅಂತಿಮ ಪಟ್ಟಿ 2025ಕ್ಕೆ ಪುರುಷ 8,747, ಮಹಿಳೆ 13,804, ಒಟ್ಟು 22,551 ಇದೆ.
•ದಿವ್ಯಾಂಗ ಮತದಾರರು:
2025 ರ ಅಂತಿಮ ಮತದಾರರ ಪಟ್ಟಿಯ ಪ್ರಕಾರ ದಿವ್ಯಾಂಗ ಮತದಾರರ ಸಂಖ್ಯೆ 6,28,554 ಮತ್ತು ಕರಡು ಪಟ್ಟಿ 2025 ರಲ್ಲಿ 6,26,449 ಮತದಾರರಿದ್ದರು. ಕರಡು ಪಟ್ಟಿ 2025ರಲ್ಲಿ ಪುರುಷ 3,62,151, ಮಹಿಳೆ 2,64,245, ತೃತೀಯ ಲಿಂಗ 53, ಒಟ್ಟು 6,26,449, ಅಂತಿಮ ಪಟ್ಟಿ 2025 ಕ್ಕೆ ಪುರುಷ 3,62,660, ಮಹಿಳೆ 2,65,840, ತೃತೀಯ ಲಿಂಗ 54, ಒಟ್ಟು 6,28,554 ಇದೆ.
•ಮತಗಟ್ಟೆಗಳು:
ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿ-2025 ರ ಪ್ರಕಾರ ಮತಗಟ್ಟೆಗಳ ಸಂಖ್ಯೆ 58,932 ಮತ್ತು 110 ಮತಗಟ್ಟೆಗಳನ್ನು ಸೇರಿಸಲಾಗಿದೆ, ಇವುಗಳಲ್ಲಿ 12 ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆಯ ಸಮಯದಲ್ಲಿ ವಿಲೀನಗೊಳಿಸಲಾಗಿದೆ ಮತ್ತು 98 ಮತಗಟ್ಟೆಗಳ ನಿವ್ವಳ ಹೆಚ್ಚಳವಾಗಿದೆ. ಹಿಂದಿನ ವರ್ಷಗಳ ಮತದಾನ ಕೇಂದ್ರಗಳ ಹೋಲಿಕೆ ನೀಡಲಾಗಿದೆ:
2024ರ (ಕರಡು ಪಟ್ಟಿ) 58,834, 2024ರ (ಅಂತಿಮ ಪಟ್ಟಿ) 58,834, 2024ರ (ಚುನಾವಣಾ ಸಮಯದ ಪಟ್ಟಿ) (including Auxiliary PS) 58,871, 2025ರ (ಕರಡು ಪಟ್ಟಿ) 58,932, (ಅಂತಿಮ ಪಟ್ಟಿ) 58,932 ಇದೆ.
ಅಂತಿಮ ಮತದಾರರ ಪಟ್ಟಿಯ ಪ್ರಕಾರ ಪ್ರತಿ ಮತದಾನ ಕೇಂದ್ರಕ್ಕೆ ಸರಾಸರಿ 937ಮತದಾರರನ್ನು ಒಳಗೊಂಡಿದೆ.
•ಮತದಾರರ ಪಟ್ಟಿಗೆ ಸೇರ್ಪಡೆಗಳು, ಅಳಿಸುವಿಕೆಗಳು ಮತ್ತು ಮಾರ್ಪಾಡುಗಳು:
ಮತದಾರರ ನೋಂದಣಿ ನಿಯಮಗಳು, 1960 ರ ನಿಯಮ 16 ರ ಪ್ರಕಾರ, ಚುನಾವಣಾ ನೋಂದಣಿ ಅಧಿಕಾರಿಗಳು (EROs) ತಮ್ಮ ಕಚೇರಿಗಳಲ್ಲಿನ ಸೂಚನಾ ಫಲಕದಲ್ಲಿ ನಮೂನೆ 9, 10, 11, 11ಎ ಮತ್ತು 11ಬಿ ನಲ್ಲಿ ಹಕ್ಕುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಪ್ರದರ್ಶಿಸಿದರು. ಹೆಚ್ಚುವರಿಯಾಗಿ, ಸ್ವೀಕರಿಸಿದ ಅರ್ಜಿಗಳ ಎಲ್ಲಾ ಹಕ್ಕುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ (DEO) ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ, ಆಯಾ ಇಆರ್‍ಒ ನೊಂದಿಗೆ ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡುತ್ತದೆ. ಇದಲ್ಲದೆ, ಹಕ್ಕು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ವೆಬ್‍ಸೈಟ್‍ನಲ್ಲಿ ಹಾಕುವ ಮೂಲಕ ಮತ್ತು ಈ ಪಟ್ಟಿಯನ್ನು ಆಧರಿಸಿ ಇಆರ್‍ಒ ಗಳಿಗೆ ಸಾರವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಸಾರ್ವಜನಿಕರಿಗೆ ತಿಳಿಸಲು ಸಾಕಷ್ಟು ಪ್ರಚಾರ ಕಾರ್ಯವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ.
2024 ರ ಅಂತಿಮ ಪಟ್ಟಿಗಳು ಮತ್ತು 2025 ರ ಅಂತಿಮ ಪಟ್ಟಿಗಳ ನಡುವೆ, ಒಟ್ಟು 20,84,125 ಸೇರ್ಪಡೆಗಳು, 7,04,339 ಅಳಿಸುವಿಕೆಗಳು ಮತ್ತು 12,92,271 ಮಾರ್ಪಾಡುಗಳನ್ನು ಕೈಗೊಳ್ಳಲಾಗಿದೆ.
ಅಂತಿಮ ಮತದಾರರ ಪಟ್ಟಿ 2024 ರಿಂದ ಚುನಾವಣಾ ಮತದಾರರ ಪಟ್ಟಿ 2024 ಸೇರ್ಪಡೆಗಳು 9,96,700, ಅಳಿಸುವಿಕೆಗಳು 98,819, ಮಾರ್ಪಾಡುಗಳು 4,11,567, ಚುನಾವಣಾ ಮತದಾರರ ಪಟ್ಟಿ 2024 ರಿಂದ ಕರಡು ಮತದಾರರ ಪಟ್ಟಿ 2025ರಲ್ಲಿ ಸೇರ್ಪಡೆಗಳು 7,42,268, ಅಳಿಸುವಿಕೆಗಳು 3,64,146, ಮಾರ್ಪಾಡುಗಳು 6,49,969. ಕರಡು ಮತದಾರರ ಪಟ್ಟಿ 2025 ರಿಂದ ಅಂತಿಮ ಮತದಾರರ ಪಟ್ಟಿ 2025ವರೆಗೆ ಸೇರ್ಪಡೆಗಳು 3,45,157, ಅಳಿಸುವಿಕೆಗಳು 2,41,374, ಮಾರ್ಪಾಡುಗಳು 2,30,735.
ಒಟ್ಟು ವ್ಯತ್ಯಾಸ (ಅಂತಿಮ ಮತದಾರರ ಪಟ್ಟಿ 2024 ರಿಂದ ಅಂತಿಮ ಮತದಾರರ ಪಟ್ಟಿ 2025) ಸೇರ್ಪಡೆಗಳು 20,84,125, ಅಳಿಸುವಿಕೆಗಳು 7,04,339, ಮಾರ್ಪಾಡುಗಳು 12,92,271.
ಅಂತಿಮ ಮತದಾರರ ಪಟ್ಟಿ 2025 (ಕರಡು ಮತದಾರರ ಪಟ್ಟಿ 2025 ರಿಂದ ಅಂತಿಮ ಮತದಾರರ ಪಟ್ಟಿ 2025) ಗಾಗಿ ಜಿಲ್ಲಾವಾರು ಸೇರ್ಪಡೆಗಳು, ಅಳಿಸುವಿಕೆಗಳು ಮತ್ತು ಮಾರ್ಪಾಡುಗಳು ಮತ್ತು ಅಂತಿಮ ಮತದಾರರ ಪಟ್ಟಿ 2025ಗಾಗಿ ವಿಧಾನಸಭಾ ಕ್ಷೇತ್ರವಾರು ಸೇರ್ಪಡೆಗಳು, ಅಳಿಸುವಿಕೆಗಳು ಮತ್ತು ಮಾರ್ಪಾಡುಗಳು (ಕರಡು ಮತದಾರರ ಪಟ್ಟಿ 2025 ರಿಂದ ಅಂತಿಮ ಮತದಾರರ ಪಟ್ಟಿ 2025 2 ರಲ್ಲಿ ನೀಡಲಾಗಿದೆ) ಈ ಕುರಿತು ವಿವರವಾದ ಮಾಹಿತಿಯು ನೀಡಲಾಗಿದೆ.
ಕರಡು ಮತದಾರರ ಪಟ್ಟಿಯಿಂದ ಅಂತಿಮ ಮತದಾರರ ಪಟ್ಟಿವರೆಗೆ 2025 ಸಾಲಿಗೆ ಸಂಬಂಧಿಸಿದಂತೆ 3,45,157 ಸೇರ್ಪಡೆಗಳ ಪೈಕಿ 2,95,295 ಅರ್ಜಿಗಳನ್ನು ಫಾರ್ಮ್ 6 ಮೂಲಕ ಸ್ವೀಕರಿಸಲಾಗಿದೆ. ಹೆಚ್ಚುವರಿಯಾಗಿ, ಸಾಗರೋತ್ತರ ಮತದಾರರಿಂದ 30 ಅರ್ಜಿಗಳನ್ನು ಫಾರಂ 6ಎ ಮೂಲಕ ಮತ್ತು ಸ್ಥಳಾಂತರ ಕುರಿತು ಖುದ್ದಾಗಿ 49,832 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಸೇರ್ಪಡೆ- ಪುರುಷರು ಫಾರಂ 6 ಅಡಿ 1,28,309, ಫಾರಂ 6ಎ 21 ಫಾರ್ಮ 8 ಸ್ಥಾಳಾಂತರ 22,184, ಒಟ್ಟು ಸೇರ್ಪಡೆ 1,50,514, ಮಹಿಳೆಯರು ಫಾರಂ 6 ಅಡಿ 1,66,937, ಫಾರಂ 6ಎ 9, ಫಾರಂ 8 ಸ್ಥಳಾಂತರ ಒಟ್ಟು ಸೇರ್ಪಡೆ 1,94,592, ತೃತೀಯ ಲಿಂಗ ಫಾರಂ ಅಡಿ 49, ಫಾರಂ 8 ಸ್ಥಳಾಂತರ 2. ಒಟ್ಟು 51. ಹೀಗೆ ಒಟ್ಟಾರೆಯಾಗಿ ಫಾರಂ 6 ಅಡಿ, 2,95,295, ಫಾರಂ 6ಎ ಅಡಿ 30, ಫಾರಂ8 ಸ್ಥಾಳಂತರ 49,832, ಅರ್ಜಿಗಳು ಸೇರಿದಂತೆ ಒಟ್ಟಾರೆ 3,45,157 ಸೇರ್ಪಡೆಯಾಗಿವೆ.
ಕರಡು ಮತದಾರರ ಪಟ್ಟಿಯಿಂದ ಅಂತಿಮ ಮತದಾರರ ಪಟ್ಟಿ 2025 ಕ್ಕೆ ಮಾಡಲಾದ 2,41,374 ಅಳಿಸುವಿಕೆಗಳಲ್ಲಿ, 82,738 ಅವಧಿ ಮುಗಿದ ಕಾರಣ, 1,04,064 ಸ್ಥಳಾಂತರಕ್ಕಾಗಿ, 13,036 ಗೈರುಹಾಜರಿ ಕಾರಣ ಪ್ರಕರಣಗಳು, 40,282 ಪುನರಾವರ್ತನೆಗಳು ಮತ್ತು 1,254 ಇತರ ಕಾರಣಗಳಿಂದಾಗಿ ವರ್ಗೀಕರಿಸಲಾಗಿದೆ.
ಕರಡು ಮತದಾರರ ಪಟ್ಟಿಯಿಂದ ಅಂತಿಮ ಮತದಾರರ ಪಟ್ಟಿ 2025 ರವರೆಗೆ ಒಟ್ಟು 2,31,012 ಮತದಾರರ ಮಾರ್ಪಾಡುಗಳನ್ನು ಕೈಗೊಳ್ಳಲಾಗಿದೆ
ಮುಂಗಡ ಅರ್ಜಿಗಳು:
ಭಾರತ ಚುನಾವಣಾ ಆಯೋಗ ವರ್ಷದಲ್ಲಿ ನೀಡಿರುವ 3 ಅರ್ಹತಾ ದಿನಾಂಕಗಳಿಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ 30,964 ಮುಂಗಡ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಪ್ರಮುಖ ಸೂಚಕಗಳು:
ಪ್ರಾಥಮಿಕ ಗಮನವು ಮತದಾರರ ಪಟ್ಟಿಗಳ ಆರೋಗ್ಯವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು, ಇದರಿಂದಾಗಿ ಮನೆ-ಮನೆ ಸಮೀಕ್ಷೆ ಮತ್ತು ಪರಿಷ್ಕರಣೆ ಅವಧಿಯಲ್ಲಿ ಪ್ರಮುಖ ಸೂಚಕಗಳನ್ನು ಗಮನಿಸಿ ಸುಧಾರಿಸಲಾಗಿದೆ. ಈ ಕೆಳಗಿನ ಕೋಷ್ಟಕದಲ್ಲಿ ಜನಸಂಖ್ಯೆ ಮತ್ತು ಮತದಾರರ ಅನುಪಾತವನ್ನು ಸ್ಥಿರವಾಗಿ ನಿರ್ವಹಿಸಲಾಗಿದೆ ಮತ್ತು ಲಿಂಗ ಅನುಪಾತದಲ್ಲಿ ಗಮನಾರ್ಹ ಪ್ರಗತಿಯನ್ನು ಗಮನಿಸಬಹುದು. ಸಾಮಾನ್ಯ ಮತದಾರರ ಲಿಂಗ ಅನುಪಾತವು 1002 ರಿಂದ 1003 ಕ್ಕೆ ಏರಿಕೆ ಕಂಡಿದೆ, ಕರಡು ಮತದಾರರ ಪಟ್ಟಿಯಿಂದ 2025ರ ಅಂತಿಮ ಮತದಾರರ ಪಟ್ಟಿಗೆ ಪರಿವರ್ತನೆಯಾಗಿದೆ. ಇದಲ್ಲದೆ, ಯುವ ಮತದಾರರ ಲಿಂಗ ಅನುಪಾತವು ಈ ಅವಧಿಯಲ್ಲಿ 877 ರಿಂದ 892 ಕ್ಕೆ ಏರಿಕೆ ಕಂಡಿದೆ.
ಮತಗಟ್ಟೆ ಮಟ್ಟದ ಏಜೆಂಟ್ :
ಭಾರತ ಚುನಾವಣಾ ಆಯೋಗದ ನಿರ್ದೇಶನಗಳಿಗೆ ಅನುಸಾರವಾಗಿ, ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಮತಗಟ್ಟೆಯಲ್ಲಿ ಬೂತ್ ಮಟ್ಟದ ಏಜೆಂಟರನ್ನು ನಿಯೋಜಿಸಲು ಒತ್ತಾಯಿಸಲಾಗಿದೆ. ಹೆಚ್ಚುವರಿಯಾಗಿ, ಎಲ್ಲಾ ಅರ್ಹ ಮತದಾರರ ನೋಂದಣಿಗೆ ಮತ್ತು ವಿವಿಧ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವನ್ನು ನೀಡಲು ಅವರನ್ನು ಪೆÇ್ರೀತ್ಸಾಹಿಸಲಾಗುತ್ತದೆ.
ಮತದಾರರಲ್ಲಿ ಮನವಿ:
01.01.2025 ಕ್ಕೆ ಅರ್ಹತೆ ಪಡೆದಿರುವ ಅರ್ಹ ನೋಂದಣಿಯಾಗದ ಮತದಾರರು ಮತದಾರರ ಸೇವಾ ಪೆÇೀರ್ಟಲ್ https://voters.eci.gov.in/ ಅಥವಾ ಮತದಾರರ ಸಹಾಯವಾಣಿಯನ್ನು ಬಳಸಿಕೊಂಡು ತಮ್ಮ ಅರ್ಜಿಗಳನ್ನು ಆನ್‍ಲೈನ್ ಮೋಡ್‍ನಲ್ಲಿ ಸಲ್ಲಿಸುವುದು. ಮತದಾರರ ಪಟ್ಟಿಗಳಲ್ಲಿ ಅವರ ಹೆಸರುಗಳನ್ನು ಸೇರಿಸಲು ಮೊಬೈಲ್ ಅಪ್ಲಿಕೇಶನ್ Voter Helpline Mobile app ಸಹ ಬಳಸಬಹುದಾಗಿದೆ. ದಿನಾಂಕ: 01.04.2025, 01.07.2025 ಮತ್ತು 01.10.2025 ರಂದು ಅರ್ಹತೆ ಪಡೆದ ಅರ್ಹ ನಿರೀಕ್ಷಿತ ಮತದಾರರು ತಮ್ಮ ಅರ್ಜಿಗಳನ್ನು ಮುಂಚಿತವಾಗಿ ಸಲ್ಲಿಸಬಹುದು.
ಮತದಾರರ ಪಟ್ಟಿಯಲ್ಲಿನ ತಮ್ಮ ನಮೂದುಗಳ ಮಾರ್ಪಾಡು / ತಿದ್ದುಪಡಿಗಳಿಗಾಗಿ ಮತದಾರರು ತಮ್ಮ ಅರ್ಜಿಗಳನ್ನು ಪೆÇೀರ್ಟಲ್ ಮತ್ತು ಮೋಬೈಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಬಿಎಲ್‍ಒ, ಇಆರ್‍ಒ ಮತ್ತು ಎಇಆರ್‍ಒ ಅನ್ನು ಸಂಪರ್ಕಿಸಬಹುದು.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಾಗಿ ಸಾರ್ವಜನಿಕರು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ https://ceo.karnataka.gov.in/
ಮತದಾರರು ಯಾವುದೇ ಹೆಚ್ಚಿನ ಮಾಹಿತಿಗಾಗಿ ಟೋಲ್-ಫ್ರೀ ಸಂಖ್ಯೆ 1950 (180042551950) ಅನ್ನು ಸಹ ಸಂಪರ್ಕಿಸಬಹುದು.