ಸಂಸದೀಯ ವ್ಯವಹಾರಗಳು ಮತ್ತು ಶಾಸನಾ ರಚನೆ ಇಲಾಖೆಯ ಸಾಧನೆಗಳು

Jan 7, 2025 - 23:25
 0

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಬೆಂಗಳೂರು : 2024ನೇ ಸಾಲಿನಲ್ಲಿ 47 ಅಧಿನಿಯಮಗಳನ್ನು ಹೊರಡಿಸಲಾಗಿದೆ. 2024ನೇ ಸಾಲಿನಲ್ಲಿ 2 ಅಧ್ಯಾದೇಶವನ್ನು ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ 06 ಅಧಿನಿಯಮಗಳ ಕನ್ನಡ ಭಾμÁಂತರವನ್ನು ಸಿದ್ಧಪಡಿಸಲಾಗಿದೆ. ಇವುಗಳಿಗೆ ಅನುಮೋದನೆ ಪಡೆಯಲು ನವದೆಹಲಿಯಲ್ಲಿ  2024ನೇ ನವೆಂಬರ್ 5 ಮತ್ತು 6 ರಂದು Woಡಿಞiಟಿg ಉಡಿouಠಿ ನ ಸಭೆ ನಡೆದಿದ್ದು, ಅನುಮೋದನೆ ಪಡೆಯಲಾಗಿದೆ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಪ್ರಾರೂಪಕರ ಮತ್ತು ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ ತಿಳಿಸಿದ್ದಾರೆ.

ಭಾರತ ರಾಜ್ಯಪತ್ರದಲ್ಲಿ ಪ್ರಕಟವಾದ 26 ಕೇಂದ್ರ ಅಧಿನಿಯಮಗಳು ಮತ್ತು 36 ಕೇಂದ್ರ ನಿಯಮಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಮರುಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಅನುವಾಗಲು 1957 ರಿಂದ ಇತ್ತೀಚಿನವರೆಗೆ ಆಗಿರುವ ಎಲ್ಲಾ ತಿದ್ದುಪಡಿಗಳನ್ನು ಇಂದೀಕರಿಸಿ, ಇಲಾಖೆಯ ವೆಬ್‍ಸೈಟ್ www.dpal.karnataka.gov.in  ನಲ್ಲಿ ಅಳವಡಿಸಲಾಗಿದೆ.

2024ನೇ ಸಾಲಿನ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಸಂಸತ್ತು ಸ್ಪರ್ಧೆಯನ್ನು ಶಾಲಾಶಿಕ್ಷಣ ಮತ್ತು ಸಾಕ್ಷರತೆ (ಪ್ರೌಢಶಾಲೆ ಮತ್ತು ಪದವಿ ಪೂರ್ವ) ಇಲಾಖೆಯ ಸಹಯೋಗದೊಂದಿಗೆ 2024ನೇ ನವೆಂಬರ್ 14 ರಂದು ಶಿವಮೊಗ್ಗದಲ್ಲಿ ನಡೆಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.