ಕರಾಟೆ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದ ಅಪರ ಜಿಲ್ಲಾಧಿಕಾರಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬಾಗಲಕೋಟೆ : ನಗರದ ಪ್ರತಿಷ್ಠಿತ ಕರಾಟೆ ಸಂಸ್ಥೆ ರಾಠೋಡ ಮಾರ್ಷಲ್ ಆರ್ಟ್ಸ್,ಸ್ಕೀಲ್ ಯೂನಿಯನ್ ವತಿಯಿಂದ ಜಿಲ್ಲೆಯಲ್ಲಿ ೧೫ಕ್ಕೂ ಹೆಚ್ಚು ಕರಾಟೆ ತರಬೇತಿ ಕೇಂದ್ರಗಳಲ್ಲಿ ಪ್ರತಿದಿನ ಕರಾಟೆ ತರಬೇತಿ ಶಿಬಿರ ಎಂದಿನಂತೆ ಬೆಳಿಗ್ಗೆ ಮತ್ತು ಸಾಯಂಕಾಲ ನಡೆಯುತ್ತಿರುತ್ತದೆ.
ಹಾಗೆಯೇ ರವಿವಾರದಂದು ಎಲ್ಲಾ ತರಬೇತಿ ಕೇಂದ್ರಗಳ ವಿದ್ಯಾರ್ಥಿಗಳಿಗೆ ಜಿಲ್ಲಾ ಕ್ರೀಡಾಂಗಣದ ತರಬೇತಿ ಕೆಂದ್ರದಲ್ಲಿ ಪ್ರತಿ ರವಿವಾರ ಸುಮಾರು ೪ ರಿಂದ ೫ ಗಂಟೆಗಳ ಕಾಲ ವಿಶೇಷ ತರಬೇತಿ ನಡೆಯುತ್ತಿರುತ್ತದೆ. ಅದರಂತೆ ರವಿವಾರ ಬಾಗಲಕೋಟೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಅವರು ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗಳ ಕಾಲ ಕರಾಟೆ ವಿದ್ಯಾರ್ಥಿಗಳ ಪ್ರದರ್ಶನವನ್ನು ವೀಕ್ಷಿಸಿದರು. ಇದೇ ವೇಳೆ ಎಲ್‌ಕೆಜಿ ಯುಕೆಜಿ ವಿದ್ಯಾರ್ಥಿಗಳ ಕ್ರೀಡಾಸಕ್ತಿಗೆ ಆಶ್ಚರ್ಯಚಕಿತಗೊಂಡು ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ಕರಾಟೆಯಲ್ಲಿ ಸಾಧನೆಗೈಯಲು ಹುರಿದುಂಬಿಸಿದರು.